AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನಗರ: ಪೋಷಕರು ಕೆಲಸಕ್ಕೆ ಬಾರದಿದ್ದಕ್ಕೆ ಮಗಳಿಗೆ ನಾಯಿ ಛೂ ಬಿಟ್ಟ ಮಾಲೀಕ, ಯುವತಿ ಗುಪ್ತಾಂಗಕ್ಕೆ ಗಾಯ

ಪೋಷಕರು ಮನೆಗೆ ಕೆಲಸಕ್ಕೆ ಬರುತ್ತಿಲ್ಲವೆಂಬ ಕೋಪಕ್ಕೆ ಅವರ ಮಗಳ ಮೇಲೆ ನಾಯಿ ಛೂ ಬಿಟ್ಟ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಚಿಕ್ಕ ಸೋಲೂರಿನಲ್ಲಿ ನಡೆದಿದೆ. ಘಟನೆಯಲ್ಲಿ ಯುವತಿಯ ಗುಪ್ತಾಂಗ ಹಾಗೂ ಕಾಲಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಮನಗರ: ಪೋಷಕರು ಕೆಲಸಕ್ಕೆ ಬಾರದಿದ್ದಕ್ಕೆ ಮಗಳಿಗೆ ನಾಯಿ ಛೂ ಬಿಟ್ಟ ಮಾಲೀಕ, ಯುವತಿ ಗುಪ್ತಾಂಗಕ್ಕೆ ಗಾಯ
ರಾಮನಗರದಲ್ಲಿ ಯುವತಿ ಮೇಲೆ ನಾಯಿ ದಾಳಿ ನಡೆಸಿದ ಮಾಲೀಕ ಪೊಲೀಸರ ವಶಕ್ಕೆ (ಸಾಂದರ್ಭಿಕ ಚಿತ್ರ)Image Credit source: hawklawfirm
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: Rakesh Nayak Manchi|

Updated on: Oct 15, 2023 | 1:28 PM

Share

ರಾಮನಗರ, ಅ.15: ಪೋಷಕರು ಮನೆಗೆ ಕೆಲಸಕ್ಕೆ ಬರುತ್ತಿಲ್ಲವೆಂಬ ಕೋಪಕ್ಕೆ ಅವರ ಮಗಳ ಮೇಲೆ ನಾಯಿ ಛೂ ಬಿಟ್ಟ ಘಟನೆ ರಾಮನಗರ (Ramanagara) ಜಿಲ್ಲೆಯ ಮಾಗಡಿ ತಾಲೂಕಿನ ಚಿಕ್ಕ ಸೋಲೂರಿನಲ್ಲಿ ನಡೆದಿದೆ. ಘಟನೆಯಲ್ಲಿ ಯುವತಿಯ ಗುಪ್ತಾಂಗ ಹಾಗೂ ಕಾಲಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋಳಿ ಫಾರ್ಮ್ ಮಾಲಿಕ ನಾಗರಾಜು ಎಂಬಾತನ ಮೆನೆಗೆ ಸುರೇಶ್ ಹಾಗೂ ಲೀಲಾವತಿ ದಂಪತಿ ಕೆಲಸಕ್ಕೆ ಹೋಗುತ್ತಿದ್ದರು. ಕೆಲ ದಿನಗಳಿಂದ ಕೆಲಸಕ್ಕೆ ಬಾರದೆ ಬೇರೆಡೆ ಕೆಲಸಕ್ಕೆ ತೆರಳುತ್ತಿದ್ದರು. ಕೆಲಸಕ್ಕೆ ಬರುವಂತೆ ಕೇಳಿಕೊಂಡರೂ ದಂಪತಿ ಬರುತ್ತಿರಲಿಲ್ಲ. ಇದು ನಾಗರಾಜು ಕೋಪಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ರಾಮನಗರ: ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ, ತಪ್ಪಿಸಿಕೊಳ್ಳುವ ಭರದಲ್ಲಿ ಕೆರೆಗೆ ಬಿದ್ದು ವ್ಯಕ್ತಿ ಸಾವು

ದಂಪತಿ ಮೇಲಿನ ಕೋಪವನ್ನು ಅವರ ಮಗಳ ಮೇಲೆ ನಾಗರಾಜ್ ತೀರಿಸಿದ ಆರೋಪ ಕೇಳಿಬಂದಿದೆ. ಶಾಲೆಯಿಂದ ಬರುತ್ತಿದ್ದ ವೀಣಾ ಮೇಲೆ ನಾಯಿ ಛೂ ಬಿಟ್ಟಿದ್ದು, ಈ ವೇಳೆ ವೀಣಾ ಚೀರಿಕೊಂಡಿದ್ದಾಳೆ. ಕೂಡಲೇ ದಾವಿಸಿದ ಪೋಷಕರು ವೀಣಾಳನ್ನು ಮಾಗಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ನಾಯಿ ದಾಳಿಯಿಂದ ಯುವತಿಯ ಗುಪ್ತಾಂಗ ಹಾಗೂ ಕಾಲಿನ ಭಾಗಕ್ಕೆ ಗಾಯಗಳಾಗಿವೆ. ಕೆಲಸಕ್ಕೆ ಬಾರದಿದ್ದಕ್ಕೆ ಕೃತ್ಯ ಮಾಡಿದ್ದಾಗಿ ನಾಗರಾಜು ಧಮ್ಕಿ ಹಾಕಿರುವ ಆರೋಪ ಕೇಳಿಬಂದಿದೆ. ಅ.6 ರಂದು ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ ಯುವತಿಯ ತಂದೆ ಆನಂದ್ ಕುಮಾರ್ ಕುದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು, ನಾಗರಾಜುನನ್ನು ವಶಕ್ಕೆ ಪಡೆದಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ