ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಬಗ್ಗೆ ವಿ ಸೋಮಣ್ಣ ಹೇಳಿದ್ದಿಷ್ಟು

ತುಮಕೂರು ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಚಿವ ವಿ.ಸೋಮಣ್ಣ (V Somanna) ಅವರು, ಅದರಂತೆ ಕ್ಷೇತ್ರದಲ್ಲಿ ಸದ್ದಿಲ್ಲದೇ ಹಲವು ಮುಖಂಡರನ್ನ ಭೇಟಿಯಾಗಿ, ಕೊನೆಗೂ ಟಿಕೆಟ್ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. ಇದರ ಬೆನ್ನಲ್ಲೇ ಮಾತನಾಡಿದ ಸೋಮಣ್ಣ, ‘ನನಗೂ ತುಮಕೂರಿಗೆ ಅವಿನಾಭಾವ ಸಂಬಂಧ ಇದ್ದು, ಅಲ್ಲಿ ನನ್ನದೇ ಆದ ನೆಟ್​ವರ್ಕ್​ ಇದೆ. ಜೊತೆಗೆ ಅಲ್ಲಿರುವವರಿಗೂ ನನ್ನಷ್ಟು ಮಾಹಿತಿ ಇಲ್ಲ. ಅಷ್ಟು ಒಳಹೊಕ್ಕು ಕೆಲಸ ಮಾಡಿದ್ದೇನೆ ಎಂದರು.

ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಬಗ್ಗೆ ವಿ ಸೋಮಣ್ಣ ಹೇಳಿದ್ದಿಷ್ಟು
ವಿ ಸೋಮಣ್ಣ
Follow us
ಕಿರಣ್​ ಹನಿಯಡ್ಕ
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 12, 2024 | 3:47 PM

ಕಲಬುರಗಿ, ಮಾ.12:  ವಿ.ಸೋಮಣ್ಣಗೆ ತುಮಕೂರು ಲೋಕಸಭಾ ಕ್ಷೇತ್ರ(Tumkur Lok Sabha constituency)ದ ಟಿಕೆಟ್​​ ಎಂಬ ವಿಚಾರ, ‘ ಈ ಕುರಿತು ಯಡಿಯೂರಪ್ಪ ಹಾಗೂ ವಿಜಯೇಂದ್ರ ಬಂದ ಮೇಲೆ ಮಾತಾಡುತ್ತೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ(V Somanna) ಹೇಳಿದರು. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸುಳ್ಳು ಹೇಳಲು ನನಗೆ ಬರಲ್ಲ, ಚುನಾವಣೆಗೆ ಈವರೆಗೆ ಯಾವುದೇ ತಯಾರಿ ಮಾಡಿಕೊಂಡಿಲ್ಲ. ಆಕಾಂಕ್ಷಿ ಆಗಿ ಸುತ್ತಾಡಿದ್ದೇನೆ. ಇನ್ನೂ ಚಿಕ್ಕನಾಯಕನಹಳ್ಳಿ, ತಿಪಟೂರು ಹಾಗೂ ಗುಬ್ಬಿಗೆ ಕಾಲಿಟ್ಟಿಲ್ಲ ಎಂದರು.

ತುಮಕೂರಿನಲ್ಲಿ ನನ್ನದೇ ಆದ ನೆಟ್​ವರ್ಕ್ ಇದೆ

ನನಗೂ ತುಮಕೂರಿಗೆ ಅವಿನಾಭಾವ ಸಂಬಂಧ ಇದ್ದು, ಅಲ್ಲಿ ನನ್ನದೇ ಆದ ನೆಟ್​ವರ್ಕ್​ ಇದೆ. ಜೊತೆಗೆ ಅಲ್ಲಿರುವವರಿಗೂ ನನ್ನಷ್ಟು ಮಾಹಿತಿ ಇಲ್ಲ. ಅಷ್ಟು ಒಳಹೊಕ್ಕು ಕೆಲಸ ಮಾಡಿದ್ದೇನೆ. ಅಲ್ಲಿನ ಎಲ್ಲಾ ಜಾತಿವಾರು ಮಾಹಿತಿ ನನಗಿದೆ ಎಂದರು. ಲಿಂಗಾಯತ ಮತ್ತೊಂದು ಎನ್ನುವುದಕ್ಕಿಂತ ಸಮನ್ವಯತೆ ಎನ್ನುವುದು ಬಡತನದಿಂದಲೇ ಬರುವುದು. ಜಾತಿ ಒಂದು ನಿಮಿತ್ತ ಮಾತ್ರ, ಹಾಗಂತ ಪ್ರಾಮುಖ್ಯತೆ ಇಲ್ಲ ಅಂತಲ್ಲ. ಲಿಂಗಾಯತ ಅಥವಾ ಜಾತಿ ಎನ್ನುವುದು ಮುಖ್ಯ. ಕೆಲವರಿಗೆ ಮಾತ್ರ ಸೀಮಿತ ಆಗಬಾರದು.

ಇದನ್ನೂ ಓದಿ:ಮುನಿಸಿಕೊಂಡಿದ್ದ ಜಗದೀಶ್ ಶೆಟ್ಟರ್ ವಾಪಸ್ಸು ಕರೆತಂದ ಹೈಕಮಾಂಡ್ ತೀರ್ಪನ್ನು ಸ್ವಾಗತಿಸುತ್ತೇನೆ: ವಿ ಸೋಮಣ್ಣ

ನಾನು ಚಿಕ್ಕ‌ ಹುಡುಗನೂ ಅಲ್ಲ, ಯಡಿಯೂರಪ್ಪ, ವಿಜಯೇಂದ್ರ ಅವರಿಗೆ ಹೆಚ್ಚು ಮಾರ್ಕೆಟ್ ಇದೆ. ತುಮಕೂರು ನನಗೆ ಚಿರಪರಿಚಿತ. ಬೇರೆ ರಾಜಕಾರಣಿಗಳು ಆರು ತಿಂಗಳು ತೆಗೆದುಕೊಳ್ಳುತ್ತಾರೆ. ಆದರೆ, ನಾನು ಒಂದೇ ತಿಂಗಳಲ್ಲೇ ಸುತ್ತಬಲ್ಲೆ. ಸೋಮಣ್ಣ ಆ ಜಿಲ್ಲೆಯವನು, ಈ ಜಿಲ್ಲೆಯವನು ಎಂದು ಹೇಳಿದರೆ ಈ ದೇಶಕ್ಕೆ ಭವಿಷ್ಯ ಇಲ್ಲ. ಅವರು ಮೂರು ವರ್ಷದಲ್ಲಿ ಮಾಡುವುದು ನಾನು ಮೂರು ತಿಂಗಳಲ್ಲಿ ಮಾಡಬಲ್ಲೆ ಎಂದು ಹೇಳಿದರು.

ರಾಜಕೀಯದಲ್ಲಿದ್ದಾಗ ಅನೇಕರಿಗೆ ಸಹಾಯ ಮಾಡಿದ್ದೇನೆ. ಈಗ ಸೋತಿದ್ದೇನೆ ನಿಜ, ಜೊತೆಗೆ ಸೋಮಣ್ಣ ಕೆಲಸಗಾರ ಎನ್ನುವುದನ್ನ ತಿಳಿಸೋಣ. ಜನ ಸೋಮಣ್ಣನನ್ನು ನೋಡುವ ರೀತಿಯೇ ಬೇರೆ ಎಂದರು. ಇನ್ನು ಬೆಂಗಳೂರಿಗೆ ಆಸ್ತಿ ತೆರಿಗೆ ಹೆಚ್ಚಳ ವಿಚಾರ, ‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯಾವುದೇ ಸಲಹೆ ಪಡೆಯದೆ ಮಾಡುತ್ತಿದ್ದಾರೆ. ನಾನು ಈಗ ಶಾಸಕನೂ ಅಲ್ಲ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ