AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ರಕ್ತಕ್ಕೂ ಬರ; ರಕ್ತದಾನ ಮಾಡುವವರ ಸಂಖ್ಯೆ 40%ರಷ್ಟು ಕುಸಿತ

ರಾಜ್ಯ ರಾಜಧಾನಿಯಲ್ಲಿ ಒಂದೆಡೆ ನೀರಿಗೆ ಹಾಹಾಕಾರ ಎದುರಾಗಿದೆ.‌ ಮತ್ತೊಂದೆಡೆ ರಕ್ತಕ್ಕೂ ಬರ ಬಂದಂತಾಗಿದ್ದು, ಎರಡು ತಿಂಗಳಿನಿಂದ ರಕ್ತ ಕೊಡುವವರ ಸಂಖ್ಯೆಯೇ ಕಡಿಮೆಯಾಗಿ ಹೋಗಿದೆ‌. ಈ ಹಿಂದೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಜನ ರಕ್ತದಾನ ಮಾಡುತ್ತಿದ್ದರು. ಆದರೆ ಈಗ 50 ಜನ ರಕ್ತದಾನ ಮಾಡುವುದೂ ಕಷ್ಟವಾಗಿದೆ. ಹೀಗೆ ಆದ್ರೆ ಮುಂದೊಂದು ದಿನ ರಕ್ತದ ಕೊರತೆ ಉಂಟಾಗಲಿದೆ.

ಬೆಂಗಳೂರಿನಲ್ಲಿ ರಕ್ತಕ್ಕೂ ಬರ; ರಕ್ತದಾನ ಮಾಡುವವರ ಸಂಖ್ಯೆ 40%ರಷ್ಟು ಕುಸಿತ
ಸಾಂದರ್ಭಿಕ ಚಿತ್ರ
Poornima Agali Nagaraj
| Edited By: |

Updated on: Mar 12, 2024 | 2:58 PM

Share

ಬೆಂಗಳೂರು, ಮಾರ್ಚ್​.12: ರಾಜ್ಯ ರಾಜಧಾನಿ ಬೆಂಗಳೂರಿಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ (Drinking Water Crisis). ಮತ್ತೊಂದೆಡೆ ರಕ್ತಕ್ಕೂ (Blood) ಬರಬಂದಂತಾಗಿದೆ.‌ ಯಾಕಂದ್ರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಕ್ತದಾನ ಮಾಡುವವರ ಸಂಖ್ಯೆ 40% ಗೆ ಕುಸಿದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ರಕ್ತದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಕಳೆದ ಎರಡು ತಿಂಗಳಿನಿಂದ ರಾಜಧಾನಿಯಲ್ಲಿ ಬಿಸಿಲಿನ ಪ್ರಮಾಣ ಜಾಸ್ತಿಯಾಗಿದೆ.‌ ಹೀಗಾಗಿ ಒಂದಷ್ಟು ಆರೋಗ್ಯ ಸಮಸ್ಯೆಗಳು ಕಾಣುತ್ತಿವೆ.‌ ಕೆಲ ಐಟಿ – ಬಿಟಿ ಕಂಪನಿಗಳು ಇಂದಿಗೂ ವರ್ಕ್ ಫ್ರಮ್ ಹೋಮ್ ಅನ್ನೆ ಮುಂದುವರಿಸುತ್ತಿವೆ.‌ ಅಲ್ಲದೇ ಶಾಲಾ – ಕಾಲೇಜುಗಳಲ್ಲಿ ಮಕ್ಕಳಿಗೆ ಪರೀಕ್ಷೆಗಳು ನಡೆಯುತ್ತಿವೆ.‌ ಈ ಕಾರಣದಿಂದಾಗಿ ಎಲ್ಲಿ ರಕ್ತ ಶಿಬಿರಗಳನ್ನ ಹಾಕುವುದಕ್ಕೆ ಸಾಧ್ಯವಾಗುತ್ತಿಲ್ಲ.

ಕಳೆದ ಎರಡು ತಿಂಗಳಿನಿಂದ 40% ರಷ್ಟು ರಕ್ತದಾನ ಮಾಡುವವರ ಸಂಖ್ಯೆ ಕುಸಿದಿದೆ. ಈ ಬಗ್ಗೆ ರಕ್ತನಿಧಿ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ. ಜೊತೆಗೆ ಮುಂದಿನ ತಿಂಗಳಲ್ಲಿ ಚುನಾವಣಾ ಸಂಹಿತೆ ಜಾರಿಯಾಗಲಿದ್ದು, ರಕ್ತ ಶಿಬಿರಗಳನ್ನ ಹಾಕುವುದಕ್ಕೆ ಸಾಧ್ಯವೇ ಆಗೋದಿಲ್ಲ.‌ ಆ ವೇಳೆಗೆ ಸಾಧ್ಯವಾದಷ್ಟು ರಕ್ತವನ್ನ ಸಂಗ್ರಹಿಸಿ ಇಟ್ಟುಕೊಳ್ಳಬೇಕಾಗುತ್ತೆ.‌ ಆದರೆ ಕಳೆದ ಎರಡು ತಿಂಗಳಿಂದ ಕಡಿಮೆ ರಕ್ತ ಸಂಗ್ರಹವಾಗಿರುವ ಕಾರಣ ರಕ್ತನಿಧಿಗಳಿಗೆ ಭಯ ಹುಟ್ಟಿಸಿರುವುದು ಮಾತ್ರ ಸತ್ಯ.‌

ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ವಿಫಲ; ಜನರಿಗೆ ಮೋದಿ ಗ್ಯಾರಂಟಿ ಮೇಲೆ ವಿಶ್ವಾಸ: ದೇವೇಂದ್ರ ಫಡ್ನವಿಸ್

ಇನ್ನು ಒಂದೊಂದು ಬ್ಲಡ್ ಕ್ಯಾಂಪ್ ಗಳಲ್ಲಿ ಪ್ರತಿ ತಿಂಗಳ 3 ಸಾವಿರ ದಷ್ಟು ಬ್ಲಡ್ ಪ್ಯಾಕ್ ಗಳ ಸಂಗ್ರಹವಾಗುತ್ತಿತ್ತು. ಆದ್ರೆ ಕಳೆದ ಎರಡು ತಿಂಗಳಿನಿಂದ ರೆಡ್ ಕ್ರಾಸ್ ರಕ್ತನಿಧಿ, ರಾಷ್ಟ್ರೋತ್ಥಾನ ರಕ್ತ‌ನಿಧಿ, ರೋಟರ್ ರಕ್ತ ನಿಧಿ ಸೇರಿದಂತೆ ವಿವಿಧೆಡೆ 2 ಸಾವಿರದಷ್ಟು ಬ್ಲಾಡ್ ಪ್ಯಾಕ್ ಗಳು ಸಂಗ್ರಹವಾಗಿವೆ. ಇನ್ನು ಪ್ರತಿದಿನ 100 ಮಂದಿಯಿಂದ ಬ್ಲಡ್ ಪಡೆಯತ್ತಿದ್ದ ರಕ್ತ ನಿಧಿ ಪ್ರತಿನಿಧಿಗಳು ಈಗ 50 ಜನರಿಂದ ರಕ್ತ ಪಡೆಯುವುದೇ ಕಷ್ಟವಾಗಿ ಹೋಗಿದೆ. ಹೀಗಾಗಿ ಆದಷ್ಟು ಜನರು ರಕ್ತ ಕೊಡುವುದಕ್ಕೆ ಮುಂದೆ ಬನ್ನಿ. ನಿಮ್ಮ ಪ್ರಾಣದ ಜೊತೆಗೆ ಇತರರ ಪ್ರಾಣವನ್ನ ಉಳಿಸಿ ಅಂತ ರಕ್ತ ನಿಧಿ ಪ್ರತಿನಿಧಿಗಳು ಮನವಿ ಮಾಡಿದ್ದಾರೆ.

ಇನ್ನು, ಪ್ರತಿಯೊಬ್ಬರು ರಕ್ತಕೊಡುವುದಕ್ಕೆ ಮಂದೆ ಬರಬೇಕು.‌ ಎಷ್ಟೋ ಆಸ್ಪತ್ರೆಗಳಲ್ಲಿ ರಕ್ತವಿಲ್ಲದೇ ಜನರು ಪರದಾಡುತ್ತಿದ್ದಾರೆ.‌ ರಕ್ತ ಕೊಡುವುದರಿಂದ ಆರೋಗ್ಯವು ಚೆನ್ನಾಗಿ ಇರುತ್ತೆ.‌ ರಕ್ತ ಕೊಡುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಅಂತ ರಕ್ತಧಾನಿಗಳು ಹೇಳಿದರು. ಒಟ್ನಲ್ಲಿ, ಕಳೆದ 2 ತಿಂಗಳಿನಿಂದ‌ 40% ರಷ್ಟು ರಕ್ತದ ಕೊರತೆ ಎದುರಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ರಕ್ತದ ಕೊರತೆ ಎದುರಾಗುವ ಸಾಧ್ಯತೆ ಇದೆ. ಸರ್ಕಾರ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯತೆ ಇದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್