AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ವಿಫಲ; ಜನರಿಗೆ ಮೋದಿ ಗ್ಯಾರಂಟಿ ಮೇಲೆ ವಿಶ್ವಾಸ: ದೇವೇಂದ್ರ ಫಡ್ನವಿಸ್

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸಂಘನಿಕೇತನದಲ್ಲಿ ಬಿಜೆಪಿ ಬೂತ್ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಿತು. ಈ ಸಮಾವೇಶದಲ್ಲಿ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಭಾಗಿಯಾದರು. ಸಂಸದ ನಳಿನ್ ಕುಮಾರ್ ಕಟೀಲ್, ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಜಿಲ್ಲೆಯ ಬಿಜೆಪಿ ಶಾಸಕರು, ನಾಯಕರು ಭಾಗಿ, ಬೂತ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ವಿಫಲ; ಜನರಿಗೆ ಮೋದಿ ಗ್ಯಾರಂಟಿ ಮೇಲೆ ವಿಶ್ವಾಸ: ದೇವೇಂದ್ರ ಫಡ್ನವಿಸ್
ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ವಿಫಲಗೊಂಡಿದೆ; ಜನರಿಗೆ ಮೋದಿ ಗ್ಯಾರಂಟಿ ಮೇಲೆ ವಿಶ್ವಾಸ ಇದೆ ಎಂದ ದೇವೇಂದ್ರ ಫಡ್ನವಿಸ್
ಅಶೋಕ್​ ಪೂಜಾರಿ, ಮಂಗಳೂರು
| Edited By: |

Updated on: Mar 12, 2024 | 2:45 PM

Share

ಮಂಗಳೂರು, ಮಾ.12: ಕರ್ನಾಟಕದಲ್ಲಿ ಸಿದ್ದರಾಮಯ್ಯ (Siddaramaiah) ಸರ್ಕಾರದ ಗ್ಯಾರಂಟಿ (Guarantees) ವಿಫಲವಾಗಿದ್ದು, ಜನರಿಗೆ ನರೇಂದ್ರ ಮೋದಿ ಗ್ಯಾರಂಟಿ ಮೇಲೆ ಮಾತ್ರ ವಿಶ್ವಾಸ ಮೂಡಿದೆ. ಹೀಗಾಗಿ ರಾಜ್ಯದ ಜನರು ನರೇಂದ್ರ ಮೋದಿ (Narendra Modi) ಜೊತೆಗಿದೆ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ (Mangaluru) ಸಂಘನಿಕೇತನದಲ್ಲಿ ನಡೆದ ಬಿಜೆಪಿ ಬೂತ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.

ಇಂದು ನಮ್ಮ ಪ್ರಮುಖ ಬೂತ್ ಕಾರ್ಯಕರ್ತರು ಜೊತೆಗಿದ್ದೀರಿ. ಮಂಗಳೂರು ಮುಂಬೈನ ಬಹಳ ದೊಡ್ಡ ಸಂಪರ್ಕ ಸೇತು. ಮಂಗಳೂರಿನ ಹಲವರು ಮುಂಬೈನಲ್ಲಿ ಬಿಜೆಪಿ ಬೆಳೆಸಲು ಕೆಲಸ ಮಾಡುತ್ತಾ ಇದ್ದಾರೆ. ಅಲ್ಲಿನ ಕುಟುಂಬಗಳೇ ಇವತ್ತು ನನಗೆ ಇಲ್ಲಿ ಸಿಕ್ಕಿದೆ. 2024ರ ಚುನಾವಣೆ ಹೊಸ ಇತಿಹಾಸ ನಿರ್ಮಿಸುವ ಚುನಾವಣೆಯಾಗಿದೆ ಎಂದರು.

ಮೋದಿ ಗ್ಯಾರಂಟಿ ಕಾಂಗ್ರೆಸ್​ನ ಗ್ಯಾರಂಟಿಗಳಲ್ಲ

ನಾವು ಸರ್ಕಾರಗಳನ್ನ ಐದು ವರ್ಷಗಳಿಗೊಮ್ಮೆ ಚುನಾಯಿಸುತ್ತೇವೆ. ಆದರೆ ಮೋದಿ 10 ವರ್ಷಗಳಲ್ಲಿ ನೂರು ವರ್ಷದ ಕೆಲಸ ಮಾಡಿದ್ದಾರೆ. ಮೋದಿ ಗ್ಯಾರಂಟಿ ಕಾಂಗ್ರೆಸ್​ನ ಗ್ಯಾರಂಟಿಗಳಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಕೊಟ್ಟಿರುವ ಗ್ಯಾರಂಟಿಗಳು ಯಾವುದೂ ಪೂರ್ಣವಾಗಿಲ್ಲ. ಜನರನ್ನ ಮೂರ್ಖರನ್ನಾಗಿ ಮಾಡಿ ಸಿದ್ದರಾಮಯ್ಯ ಸರ್ಕಾರ ಬಂದಿದೆ ಎಂದರು.

ಇದನ್ನೂ ಓದಿ: ಮೋದಿ ಜೀ ಭರವಸೆಯನ್ನು ಪೂರೈಸಿದ್ದಾರೆ: ಸಿಎಎ ಸ್ವಾಗತಿಸಿದ ಪಾಕ್ ಮಹಿಳೆ ಸೀಮಾ ಹೈದರ್

ಮೋದಿ ಗ್ಯಾರಂಟಿ ಅನ್ನೋದು ಗ್ಯಾರಂಟಿಗಳ ಗ್ಯಾರಂಟಿ. ನರೇಂದ್ರ ಮೋದಿಯವರ ಟ್ರಾಕ್ ರೆಕಾರ್ಡ್ ನೋಡಿದರೆ ಗೊತ್ತಾಗುತ್ತದೆ. ಕೋಟ್ಯಾಂತರ ಜನರಿಗೆ ನೀರು, ವಿದ್ಯುತ್, ಶೌಚಾಲಯ ಸಿಕ್ಕಿದೆ. ಮೋದಿಯವರ ಯೋಜನೆ ಪಡೆದುಕೊಳ್ಳಲು ಯಾರಿಗೂ ಒಂದು ರೂಪಾಯಿ ಕೊಡುವುದು ಬೇಡ. ಆ ಯೋಜನೆಗಳು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆಯಾಗುತ್ತದೆ ಎಂದರು.

ನಿನ್ನೆ ಮೋದಿ ಅವರು ಒಂದು ಮಿಸೈಲ್ ಬಗ್ಗೆ ಟ್ವೀಟ್ ಮಾಡಿದರು. ಹಾಗದರೆ ಈ ಮಿಸೈಲ್​ಗಳಿಂದ ನಮಗೇನು ಲಾಭ ಅಂತ ಕೆಲವರು ಕೇಳಬಹುದು. ಆದರೆ ಭಾರತದ ತಾಕತ್ತನ್ನ ಬೇರೆ ದೇಶಗಳ ಎದುರು ನಾವು ತೋರಿಸುತ್ತಿದ್ದೇವೆ. ಚೀನಾ, ಅಮೆರಿಕಾದ ಸರಿಸಮಾನವಾಗಿ ಭಾರತದ ಶಕ್ತಿಯುತವಾಗುತ್ತಿದೆ ಎಂದರು.

ದೇಶ ವಿರೋಧಿಗಳಿಗೆ ಸಿದ್ದರಾಮಯ್ಯ ಸರ್ಕಾರ ಬೆಂಬಲ

ದೇಶ ವಿರೋಧಿ ಜನರಿಗೆ ಸಿದ್ದರಾಮಯ್ಯ ಸರ್ಕಾರ ಬೆಂಬಲ ಕೊಡುತ್ತಿದೆ. ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನ ಬೆಂಬಲಿಸುವ ಸರ್ಕಾರ ಎಂಥದ್ದು? ಕರ್ನಾಟಕದಲ್ಲಿ ಕಾಂಗ್ರೆಸ್ ಬಂದ ನಂತರ ದೇಶವಿರೋಧಿಗಳಿಗೆ ಬಲ ಬಂದಿದೆ. ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ಆಗಿದೆ. ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಎಲ್ಲಾ ರಾಜ್ಯಗಳು ಬೆಂಬಲ ಕೊಡಲಿದೆ. ವೋಟ್ ಬ್ಯಾಂಕ್​ಗಾಗಿ ದೇಶದ್ರೋಹಿಗಳನ್ನ ಯಾರೂ ಬೆಂಬಲಿಸಬಾರದು. ಯಾವುದೇ ದೇಶ ವಿರೋಧಿ ಘಟನೆಗಳನ್ನು ಆಯಾ ಸರ್ಕಾರಗಳು ಖಂಡಿಸಬೇಕು ಎಂದರು.

ನಾವು ಬಿಜೆಪಿ ವೋಟ್ ಹಾಕುತ್ತಿಲ್ಲ, ಭಾರತಕ್ಕಾಗಿ ಮತ ಚಲಾಯಿಸುತ್ತಿದ್ದೇವೆ. ನರೇಂದ್ರ ಮೋದಿ ನಾಯಕತ್ವದಲ್ಲಿ ನಾವು ಉತ್ತರ ಕೊಡಬೇಕಿದೆ. ಬೂತ್ ಮಟ್ಟದಲ್ಲಿ ನಾವು ಪಕ್ಷ ಗಟ್ಟಿ ಮಾಡಬೇಕು. ಪ್ರತೀ ಬೂತ್​ಗಳಲ್ಲಿ ಮೋದಿ ಸರ್ಕಾರದ ಫಲಾನುಭವಿಗಳನ್ನ ಭೇಟಿ ಮಾಡುವಂತೆ ಸಲಹೆ ನೀಡಿದರು.

ನಳಿನ್ ಕುಮಾರ್‌ ಕಟೀಲ್ ಅವರ ಅವಧಿಯಲ್ಲಿ ಬಹಳ ಅಭಿವೃದ್ಧಿಯಾಗಿದೆ. ಅವರು ಜನರ ನಡುವೆ ಇರೋ ಪಕ್ಷದ ಒಬ್ಬ ನಾಯಕ ಎಂದು ಹೇಳಿದ ಫಡ್ನವಿಸ್, ನಮ್ಮ ಸ್ವಾಭಿಮಾನಕ್ಕಾದ ಅಪಮಾನದಿಂದ ಹೊರಬಂದು ರಾಮಮಂದಿರ ನಿರ್ಮಿಸಲಾಗಿದೆ. ನವ ಭಾರತ ನಿರ್ಮಿಸುವ ಕೆಲಸಕ್ಕೆ ನರೇಂದ್ರ ಮೋದಿ ಪಣ ತೊಟ್ಟಿದ್ದಾರೆ. ಹೀಗಾಗಿ ನಾವೆಲ್ಲ ಅವರ ಕಾರ್ಯಕ್ಕೆ ಕೈ ಜೋಡಿಸಬೇಕಿದೆ. ಕರ್ನಾಟಕದಲ್ಲಿ ಸರ್ಕಾರ ಇಲ್ಲದಿದ್ದರೂ ಈ ಬಾರಿ ಯಾವುದೇ ಕ್ಷೇತ್ರದಲ್ಲಿ ಬಿಜೆಪಿ ಸೋಲಬಾರದು. ಬಿಜೆಪಿ ಮತ್ತು ಮೈತ್ರಿ ಅಭ್ಯರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲಬೇಕು. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಎಲ್ಲಾ ಕಡೆ ಮೋದಿ ಹವಾ ಇದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Ashok
Ashok

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸುದ್ದಿಬಿಡುಗಡೆ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಪ್ರಜಾ ಟಿ.ವಿಯ ಉಡುಪಿ ಜಿಲ್ಲಾ ವರದಿಗಾರರಾಗಿ ಒಂದು ವರ್ಷ ಏಳು ತಿಂಗಳು ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ, ಒಂದು ವರ್ಷ ನಾಲ್ಕು ತಿಂಗಳಿನಿಂದ ಟಿ.ವಿ 9 ವಾಹಿನಿಯಲ್ಲಿ ದಕ್ಷಿಣಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ ಇಂಡಿಯಾ ಟೆಲಿವಿಷನ್​ . ಕಾಮ್​ 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್