Kannada News Karnataka DK ಶಿವಕುಮಾರ್ ಆಸ್ತಿ ಲೆಕ್ಕ ಹಾಕುವಲ್ಲಿ ಎಡವಿತಾ CBI? ಅನುಸರಿಸಿದ ಮಾನದಂಡ ಯಾವುದು?
DK ಶಿವಕುಮಾರ್ ಆಸ್ತಿ ಲೆಕ್ಕ ಹಾಕುವಲ್ಲಿ ಎಡವಿತಾ CBI? ಅನುಸರಿಸಿದ ಮಾನದಂಡ ಯಾವುದು?
ಬೆಂಗಳೂರು: ಮೂರು ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಅವರ ಸಂಬಂಧಿಕರ ನಿವಾಸಗಳ ಮೇಲೆ ಕ್ಯಾಲುಕುಲೇಟೆಡ್ ದಾಳಿ ನಡೆಸಿದ್ದ CBI, ದಾಳಿ ವೇಳೆ ಮತ್ತೆ ಹಚ್ಚಿದ ಆಸ್ತಿ ಮೊತ್ತವನ್ನು ಕ್ಯಾಲುಕುಲೇಟ್ ಮಾಡುವಲ್ಲಿ ಎಡವಿತಾ? ಎಂಬ ಪ್ರಶ್ನೆ ಈಗೆ ಚರ್ಚೆಗೆ ಗ್ರಾಸವಾಗಿದೆ. ಸಿಬಿಐ ಲೆಕ್ಕಕ್ಕೂ, ಡಿಕೆಶಿ ಹೇಳಿದ ಮೌಲ್ಯಕ್ಕೂ ಅಜಗಜಾಂತರ: ದಾಳಿ ಹಿನ್ನೆಲೆಯಲ್ಲಿ ಸಿಬಿಐ ದಾಖಲಿಸಿದ್ದ FIR ಅನುಸಾರ 2013ರಲ್ಲಿ ಡಿಕೆಶಿ ಆಸ್ತಿ ಮೌಲ್ಯ 33 ಕೋಟಿ ರೂಪಾಯಿಯಿತ್ತು. ಆದರೆ ಡಿಕೆಶಿ ಚುನಾವಣಾ ಅಫಿಡವಿಟ್ನಲ್ಲಿ ಘೋಷಿಸಿರುವುದೇ […]
Follow us on
ಬೆಂಗಳೂರು: ಮೂರು ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಅವರ ಸಂಬಂಧಿಕರ ನಿವಾಸಗಳ ಮೇಲೆ ಕ್ಯಾಲುಕುಲೇಟೆಡ್ ದಾಳಿ ನಡೆಸಿದ್ದ CBI, ದಾಳಿ ವೇಳೆ ಮತ್ತೆ ಹಚ್ಚಿದ ಆಸ್ತಿ ಮೊತ್ತವನ್ನು ಕ್ಯಾಲುಕುಲೇಟ್ ಮಾಡುವಲ್ಲಿ ಎಡವಿತಾ? ಎಂಬ ಪ್ರಶ್ನೆ ಈಗೆ ಚರ್ಚೆಗೆ ಗ್ರಾಸವಾಗಿದೆ.
ಸಿಬಿಐ ಲೆಕ್ಕಕ್ಕೂ, ಡಿಕೆಶಿ ಹೇಳಿದ ಮೌಲ್ಯಕ್ಕೂ ಅಜಗಜಾಂತರ: ದಾಳಿ ಹಿನ್ನೆಲೆಯಲ್ಲಿ ಸಿಬಿಐ ದಾಖಲಿಸಿದ್ದ FIR ಅನುಸಾರ 2013ರಲ್ಲಿ ಡಿಕೆಶಿ ಆಸ್ತಿ ಮೌಲ್ಯ 33 ಕೋಟಿ ರೂಪಾಯಿಯಿತ್ತು. ಆದರೆ ಡಿಕೆಶಿ ಚುನಾವಣಾ ಅಫಿಡವಿಟ್ನಲ್ಲಿ ಘೋಷಿಸಿರುವುದೇ ಬೇರೆ ಎಂಬಂತಾಗಿದೆ. 2013ರಲ್ಲಿ ಡಿಕೆಶಿ ಬಳಿ 251 ಕೋಟಿ ರೂಪಾಯಿ ಆಸ್ತಿ ಇತ್ತು. 2018ರ ಏಪ್ರಿಲ್ ಅಂತ್ಯದ ವೇಳೆಗೆ 62 ಕೋಟಿ ರೂ. ಆಸ್ತಿಯಾಗಿತ್ತು. ಆದ್ರೆ ಡಿಕೆಶಿ ಬಳಿ ₹162 ಕೋಟಿ ಆಸ್ತಿ ಎಂದು FIRನಲ್ಲಿ ಉಲ್ಲೇಖಗೊಂಡಿದೆ.
ಫ್ಯಾಕ್ಚುಯಲ್ ಎರರ್? ಹಾಗಾದ್ರೆ ಆಕ್ಚುಯಲ್ಸ್ ಏನು!?
ಇನ್ನು, 2018ರಲ್ಲಿ ಡಿಕೆಶಿ ಘೋಷಿಸಿದ್ದು 840 ಕೋಟಿ ರೂ ಆಸ್ತಿ. 2018ರ ಚುನಾವಣಾ ಅಫಿಡವಿಟ್ನಲ್ಲಿ ಇದನ್ನು ಘೋಷಿಸಿದ್ದರು. ಹಾಗಾದರೆ ಡಿಕೆಶಿ ಆಸ್ತಿ ಲೆಕ್ಕ ಹಾಕುವಲ್ಲಿ CBI ಫ್ಯಾಕ್ಚುಯಲ್ ಎರರ್ ಮಾಡಿತಾ? ಸಿಬಿಐ ಕಣ್ಣಿಗೆ ಕಾಣುವಂತೆ ಎಡವಿತಾ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ. ಹಾಗಾದ್ರೆ ಆಸ್ತಿ ಲೆಕ್ಕ ಹಾಕಲು ಯಾವ ಮಾನದಂಡ ಅನುಸರಿಸಿದೆ ಸಿಬಿಐ? ಆಸ್ತಿಯ ಸಬ್ ರಿಜಿಸ್ಟ್ರಾರ್ ಮೌಲ್ಯ ಪರಿಗಣಿಸಿದೆಯೋ ಅಥವಾ ಮಾರುಕಟ್ಟೆಯ ಮೌಲ್ಯ ಪರಿಗಣಿಸಿದೆಯೋ ಎಂಬುದು ಸ್ಪಷ್ಟವಾಗಿಲ್ಲ.