ಅಪ್ರಾಪ್ತೆ ಮೇಲೆ ಅತ್ಯಚಾರವೆಸಗಿದ 73 ವರ್ಷದ ವೃದ್ಧ, ಗರ್ಭಿಣಿಯಾದ 13 ವರ್ಷದ ಬಾಲಕಿ

| Updated By: ರಮೇಶ್ ಬಿ. ಜವಳಗೇರಾ

Updated on: Sep 17, 2023 | 12:19 PM

73 ವರ್ಷದ ವೃದ್ಧನೊಬ್ಬ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಘಟನೆಯೊಂದು ಹಾಸನ (Hasan) ಜಿಲ್ಲೆಯ ಸಕಲೇಶಪುರ (Sakleshura) ತಾಲೂಕಿನಲ್ಲಿ ನಡೆದಿದ್ದು, ಬಾಲಕಿ 2 ತಿಂಗಳ ಗರ್ಭಿಣಿಯಾಗಿದ್ದಾಳೆ. ಇದರಿಂದ ಮನನೊಂದು ಸಂತ್ರಸ್ಥೆ ಬಾಲಕಿಯ ತಾಯಿ ವಿಷ ಸೇವಿಸಿದ್ದು, ಹಾಸನ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪ್ರಾಪ್ತೆ ಮೇಲೆ ಅತ್ಯಚಾರವೆಸಗಿದ 73 ವರ್ಷದ ವೃದ್ಧ, ಗರ್ಭಿಣಿಯಾದ 13 ವರ್ಷದ ಬಾಲಕಿ
ಪ್ರಾತಿನಿಧಿಕ ಚಿತ್ರ
Follow us on

ಹಾಸನ, (ಸೆಪ್ಟೆಂಬರ್ 17): ಅಪ್ರಾಪ್ತ ಬಾಲಕಿ ಮೇಲೆ ವೃದ್ಧನೋರ್ವ ಅತ್ಯಾಚಾರ (Rape) ಎಸಗಿರುವ ಪೈಶಾಚಿಕ ಕೃತ್ಯ ಹಾಸನ (Hassan) (Hassan) ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ನಡೆದಿದೆ. ಸಾಮಾಜಿಕ ಕಾರ್ಯಕರ್ತನೆಂದು ಬಿಂಬಿಸಿಕೊಂಡಿದ್ದ 73 ಮೀಸೆ ಮಂಜಯ್ಯ ಎನ್ನುವಾತ ಹದಿಮೂರು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು, ಇದೀಗ ಬಾಲಕಿ ಎರಡು ತಿಂಗಳ ಗರ್ಭಿಣಿಯಾಗಿದ್ದಾಳೆ. ಇದರಿಂದ ಮನನೊಂದು ಸಂತ್ರಸ್ಥೆ ಬಾಲಕಿ ತಾಯಿ ವಿಷ ಸೇವಿಸಿದ್ದು, ಹಾಸನದ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾಳೆ.

ನಿರಂತರ ಅತ್ಯಾಚಾರದಿಂದ ಅಪ್ರಾಪ್ತ 13 ವರ್ಷದ ಬಾಲಕಿ ತನಗೆ ಅರಿವಿಲ್ಲದೇ 2 ತಿಂಗಳ ಗರ್ಭಿಣಿಯಾಗಿದ್ದಾಳೆ. ಇನ್ನು ತಾಯಿಗೆ ಈ ಬಗ್ಗೆ ಅನುಮಾನ ಬಂದು ವಿಚಾರಣೆ ಮಾಡಿದಾಗ ವೃದ್ಧ ಅತ್ಯಾಚಾರ ಮಾಡಿರುವ ವಿಚಾರವನ್ನು ಬಾಲಕಿ ಬಾಯಿ ಬಿಟ್ಟಿದ್ದಾಳೆ.  ಸದ್ಯ ಆರೋಪಿ ಮೀಸೆ ಮಂಜಯ್ಯನನ್ನು ಪೋಕ್ಸೊ ಕಾಯ್ದೆ ಅಡಿಯಲ್ಲಿ ಸಕಲೇಶಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ವಿಧವಾವೇತನ, ಪಿಂಚಣಿ ಹಣ ಕೊಡಿಸುವುದಾಗಿ ಹಲವು ಮಹಿಳೆಯರನ್ನು ಎಮೋಷನಲ್ ಬ್ಲಾಕ್‌ಮೇಲ್ ಮಾಡುತ್ತಿದ್ದ ಎನ್ನುವ ಆರೋಪಗಳು ಸಹ ಮೀಸೆ ಮಂಜಯ್ಯ ವಿರುದ್ಧ ಕೇಳಿಬಂದಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.