ಹಾಸನ: ಪುರಾತನ ಕಾಲದ ಶಿವಲಿಂಗವನ್ನು ಅಗೆದು ಹೊರ ತೆಗೆದ ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದೆ. ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ಪೊಲೀಸರು ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಂಡಿದ್ದಾರೆ. ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಸೇರಿ ಏಳು ಜನರ ವಿರುದ್ಧ ದೂರು ದಾಖಲಾಗಿದ್ದು, ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚೀಕನಹಳ್ಳಿಯ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಕೇಶವಮೂರ್ತಿ, ಜಗನ್ನಾಥ್, ಪ್ರಶಾಂತ, ಶಿವು, ನಾಗೇನಹಳ್ಳಿ ಸಂತೋಷ, ಕರ್ಕಿಹಳ್ಳಿ ಗ್ರಾಮದ ದಿನೇಶ್ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿಗಳು ಜಗನ್ನಾಥ್ ತೋಟದಲ್ಲಿದ್ದ ಶಿವಲಿಂಗವನ್ನು ಅಗೆದು ತೆಗೆದು ಸ್ಥಳಾಂತರ ಮಾಡಿದ್ದರು. ಬೆಟ್ಟದಕೇಶವಿ ಗ್ರಾಮದ ಶ್ರೀಧರಗಿಡಿ ಮಠಕ್ಕೆ ಶಿವಲಿಂಗ ಸಾಗಿಸಿದ್ದ ಬಗ್ಗೆ ಗ್ರಾಮಸ್ಥರು ದೂರು ನೀಡಿದ್ದರು. ದೂರು ದಾಖಲಾಗುತ್ತಲೆ ಆರೋಪಿಗಳು ಗ್ರಾಮದ ವ್ಯಕ್ತಿಯೊಬ್ಬರ ಶೆಡ್ನಲ್ಲಿ ವಿಗ್ರಹವನ್ನು ತಂದು ಇಟ್ಟಿದ್ದರು. ಸದ್ಯ ಅರೆಹಳ್ಳಿ ಪೊಲೀಸರು ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದು, ಘಟನಾ ಸ್ಥಳಕ್ಕೆ ತಹಶೀಲ್ದಾರ್ ಸೇರಿ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
2 ವರ್ಷ ಕಳೆದರೂ ಜಮೀನಿನಲ್ಲಿ ಸಿಕ್ಕಿದ್ದ ವಿಗ್ರಹಗಳು ಅನಾಥ
ಮೈಸೂರು: ಜಿಲ್ಲೆಯ ಅರಸಿನಕೆರೆಯ ಜಮೀನಿನಲ್ಲಿ ಸಿಕ್ಕಿದ್ದ ಜೋಡಿ ನಂದಿ ವಿಗ್ರಹಗಳಿಗೆ 2 ವರ್ಷವಾದರೂ ಕಾಯಕಲ್ಪ ಸಿಕ್ಕಿಲ್ಲ. ಎರಡು ವರ್ಷವಾದರೂ ಜೋಡಿ ಬಸವ ವಿಗ್ರಹಗಳು ಯಥಾ ಸ್ಥಿತಿಯಲ್ಲಿವೆ. ಅಲ್ಲದೆ ಪೂರ್ಣ ಪ್ರಮಾಣದಲ್ಲಿ ನಂದಿ ವಿಗ್ರಹಗಳನ್ನು ಅಧಿಕಾರಿಗಳು ಮಣ್ಣಿನಿಂದ ಹೊರಕ್ಕೆ ತೆಗೆದಿಲ್ಲ. ಒಂದು ಸುಮಾರು 12 ಅಡಿ ಮತ್ತೊಂದು 10 ಅಡಿ ಉದ್ದ ಇರುವ ಸಾಧ್ಯತೆ ಇದೆ. 2019ರಲ್ಲಿ ಜಮೀನಿನ ನೀರಿನ ಹೊಂಡದಲ್ಲಿ ಜೋಡಿ ಬಸವಗಳು ಕಾಣಿಸಿಕೊಂಡಿದ್ದವು. ಇದರ ಜೊತೆಗೆ ಹಲವು ಶಿಲ್ಪಾಕೃತಿಗಳು ಪತ್ತೆಯಾಗಿದ್ದವು.
2 ವರ್ಷದ ಹಿಂದೆ ಗ್ರಾಮದ ಬಳಿ ನಂದಿ ವಿಗ್ರಹಗಳ ಜೊತೆಗೆ ಕೆಲವು ಕಲಾಕೃತಿಗಳೂ ಪತ್ತೆಯಾಗಿದ್ದಾಗ ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಸ್ಥಳವನ್ನು ಪ್ರವಾಸಿತಾಣ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಈವರೆಗೂ ವಿಗ್ರಹಗಳನ್ನು ಹೊರಗೆ ತೆಗೆದೇ ಇಲ್ಲ. ವಿಗ್ರಹಗಳಿಗೆ ಕಾಯಕಲ್ಪ ನೀಡಿಲ್ಲ. ಕೊಟ್ಟಿದ್ದ ಭರವಸೆ ಇಡೇರಿಸಿಲ್ಲ. ಹೀಗಾಗಿ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
ಇದನ್ನೂ ಓದಿ
ಸೇಡು ತೀರಿಸಿಕೊಂಡ ಅಮೆರಿಕಾ; ಐಸಿಎಸ್ ಉಗ್ರರ ಮೇಲೆ ಡ್ರೋನ್ ಮೂಲಕ ಏರ್ಸ್ಟ್ರೈಕ್ ದಾಳಿ, ಹತರಾದವರ ಸಂಖ್ಯೆ ಅಲಭ್ಯ
(A case has been registered against accused of exposing the Antique Idol from earth in Hassan)