ರಾಷ್ಟ್ರೀಯ ಹೆದ್ದಾರಿಗೆ ಲಗ್ಗೆ ಇಟ್ಟ ಗಜಪಡೆ, ಕೂದಲೆಳೆ ಅಂತರದಲ್ಲಿ ವಾಹನ ಸವಾರರು ಪಾರು!

| Updated By: Rakesh Nayak Manchi

Updated on: May 29, 2022 | 2:46 PM

ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಮೇಲೆ ಏಕಾಏಕಿ ಕಾಡಾನೆಗಳು ಆಗಮಿಸಿದ್ದು, ವಾಹನ ಸವಾರರು ಕೂದಳೆಲೆ ಅಂತರಲ್ಲಿ ಪಾರಾಗಿದ್ದಾರೆ.

ಹಾಸನ: ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 (Bengaluru-Mangalore NH 75) ಗೆ ಬೆಳಗ್ಗೆ ಎಂಟ್ರಿ ಕೊಟ್ಟ ಗಜಪಡೆ ಕೆಲ ಕಾಲ ವಾಹನ ಸವಾರರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಹಾಸನ ಜಿಲ್ಲೆಯಸಕಲೇಶಪುರ ತಾಲ್ಲೂಕಿನ ಗುಲಗಳಲೆ ಕ್ರಾಸ್​ನಲ್ಲಿ ವಾಹನಗಳ ಸಂಚಾರದ ನಡುವೆ ಇಂದು ಬೆಳಗ್ಗೆ  ಏಕಾಏಕಿ ಮೂರು ಕಾಡಾನೆ(Elephant)ಗಳು ಹೆದ್ದಾರಿ ಮೇಲೆ ಬಂದುಬಿಟ್ಟಿವೆ. ಅಲ್ಲದೆ ಅವುಗಳ ಹತ್ತಿರವೇ ನಿಂತಿದ್ದ ಇನ್ನೋವಾ, ಓಮ್ನಿ ಸೇರಿದಂತೆ ಒಟ್ಟು ಐದು ಕಾರುಗಳು ಹಾಗೂ 1 ಬೈಕ್​ ಕಡೆ ಆನೆಗಳು ಆಗಮಿಸಿವೆ. ಈ ವೇಳೆ ಆತಂಕಕ್ಕೊಳಗಾದ ವಾಹನ ಸವಾರರು, ತಮ್ಮ ವಾಹನಗಳನ್ನು ರಿವರ್ಸ್​ ತೆಗೆದುಕೊಂಡರೆ, ಇನ್ನೊಂದಷ್ಟು ಮಂದಿ ವಾಹನವನ್ನು ತಿರುಗಿಸಿ ಹೋಗುವ ಮೂಲಕ ಅಪಾಯದಿಂದ ಪರಾಗಿದ್ದಾರೆ. ಕಾಡಾನೆಗಳು ಹೆದ್ದಾರಿಯಿಂದ ತೋಟದ ಕಡೆಗೆ ದಾಟಿದ ಮೇಲೆ ವಾಹನಗಳ ಸುಗಮ ಸಂಚಾರ ಆರಂಭವಾಯಿತು.

ಇದನ್ನೂ ಓದಿ: ಅಪ್ಪು ಅಗಲಿ 7 ತಿಂಗಳು; ವಿಶೇಷ ವಿಡಿಯೋ ಹಂಚಿಕೊಂಡ ರಾಘವೇಂದ್ರ ರಾಜ್​ಕುಮಾರ್

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ