ಹಾಸನ: ಮದುವೆ ನಿರಾಕರಿಸಿದ ಹುಡುಗಿಯನ್ನ ಮದುವೆಯಾಗಲೇ ಬೇಕು ಎಂದು ಹಠಕ್ಕೆ ಬಿದ್ದ ಮನು, ತನ್ನ ಸ್ನೇಹಿತರ ಸಹಾಯದಿಂದ ಯುವತಿಯನ್ನ ಕಿಡ್ನ್ಯಾಪ್ ಮಾಡಿ ಚಲಿಸುತ್ತಿದ್ದ ಕಾರಿನಲ್ಲೇ ಬಲವಂತವಾಗಿ ಮದುವೆಯಾಗಿದ್ದಾನೆ. ಮನು ಯುವತಿ ತಂದೆಯ ಅಕ್ಕನ ಮಗ.
ಮಗಳ ಮೇಲಿನ ದೌರ್ಜನ್ಯದ ವಿಡಿಯೋ ನೋಡಿ ಮನ ನೊಂದಿದ್ದ ಯುವತಿಯ ತಂದೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡಿರೋ ನಾಗರಾಜ್ಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ರೀತಿ ಕಾರಿನಲ್ಲಿ ಬಲವಂತವಾಗಿ ಮಗಳಿಗೆ ಅಕ್ಕನ ಮಗ ಮನು ತಾಳಿ ಕಟ್ಟಿರುವ ವಿಷಯ ಕುಟುಂಬಸ್ಥರಿಗೆ ನೋವನ್ನುಂಟು ಮಾಡಿದೆ.
ಪಾಗಲ್ ಪ್ರೇಮಿ ಅಂದರ್:
ಯುವತಿ ಹೊತ್ತೊಯ್ದು ಬಲವಂತವಾಗಿ ತಾಳಿಕಟ್ಟಿದ್ದಕ್ಕೆ ಆರೋಪಿ ಯುವಕ ಮನುನನ್ನು ರಾಮನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಯುವತಿಯನ್ನು ರಕ್ಷಿಸಲಾಗಿದೆ. ಯುವತಿಯ ಪೋಷಕರು ಹಾಸನ ತಾಲೂಕಿನ ದುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರು ಆಧರಿಸಿ ಮನುನನ್ನು ವಶಕ್ಕೆ ಪಡೆಯಲಾಗಿದೆ.
Published On - 11:08 am, Wed, 5 February 20