AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆರೆ ನೀರಿನಲ್ಲಿ ಒಂಟಿ ಸಲಗ ಚೆಲ್ಲಾಟ: ಗಜರಾಜನ ಆರ್ಭಟಕ್ಕೆ ಹಳೆಬೀಡು ಮಂದಿ ಪರದಾಟ

ಹಾಸನ: ಬೇಲೂರು ತಾಲೂಕಿನ ಹಳೆಬೀಡಿನ ದ್ವಾರಸಮುದ್ರ ಕೆರೆಯಲ್ಲಿ ನಿನ್ನೆ ದಿಢೀರ್ ಅಂತಾ ಈ ಒಂಟಿ ಸಲಗ ಪ್ರತ್ಯಕ್ಷವಾಗಿತ್ತು. ತುಂಬಿದ ಕೆರೆಯಲ್ಲಿ ಅತ್ತಿಂದಿತ್ತ, ಇತ್ತಿಂದತ್ತ ಓಡಾಡ್ತಿತ್ತು. ಆದ್ರೆ ಆನೆಯ ಎಂಟ್ರಿಯಿಂದ ಊರೂರೇ ದಿಗಿಲಾಗಿತ್ತು. ಯಾಕಂದ್ರೆ ಆನೆ ಎಲ್ಲಿ ಹೊರ ಬಂದು ಊರೊಳಗೆ ನುಗ್ಗುತ್ತೋ ಎನ್ನೋ ಆತಂಕದಲ್ಲಿದ್ರು. ಗ್ರಾಮಕ್ಕೆ ನುಗ್ಗಿ ಎಲ್ಲಿ ದಾಳಿ ಮಾಡುತ್ತೋ ಅಂತಾ ಭಯ ಪಡ್ತಿದ್ರು. ಇತಿಹಾಸದಲ್ಲೇ ಮೊದಲ ಬಾರಿಗೆ ಕಾಡಾನೆ ಎಂಟ್ರಿ: ಇನ್ನು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಳೆಬೀಡು ಗ್ರಾಮಕ್ಕೆ ಕಾಡಾನೆ ಎಂಟ್ರಿ ಕೊಟ್ಟಿತ್ತು. […]

ಕೆರೆ ನೀರಿನಲ್ಲಿ ಒಂಟಿ ಸಲಗ ಚೆಲ್ಲಾಟ: ಗಜರಾಜನ ಆರ್ಭಟಕ್ಕೆ ಹಳೆಬೀಡು ಮಂದಿ ಪರದಾಟ
ಸಾಧು ಶ್ರೀನಾಥ್​
|

Updated on: Feb 04, 2020 | 5:44 PM

Share

ಹಾಸನ: ಬೇಲೂರು ತಾಲೂಕಿನ ಹಳೆಬೀಡಿನ ದ್ವಾರಸಮುದ್ರ ಕೆರೆಯಲ್ಲಿ ನಿನ್ನೆ ದಿಢೀರ್ ಅಂತಾ ಈ ಒಂಟಿ ಸಲಗ ಪ್ರತ್ಯಕ್ಷವಾಗಿತ್ತು. ತುಂಬಿದ ಕೆರೆಯಲ್ಲಿ ಅತ್ತಿಂದಿತ್ತ, ಇತ್ತಿಂದತ್ತ ಓಡಾಡ್ತಿತ್ತು. ಆದ್ರೆ ಆನೆಯ ಎಂಟ್ರಿಯಿಂದ ಊರೂರೇ ದಿಗಿಲಾಗಿತ್ತು. ಯಾಕಂದ್ರೆ ಆನೆ ಎಲ್ಲಿ ಹೊರ ಬಂದು ಊರೊಳಗೆ ನುಗ್ಗುತ್ತೋ ಎನ್ನೋ ಆತಂಕದಲ್ಲಿದ್ರು. ಗ್ರಾಮಕ್ಕೆ ನುಗ್ಗಿ ಎಲ್ಲಿ ದಾಳಿ ಮಾಡುತ್ತೋ ಅಂತಾ ಭಯ ಪಡ್ತಿದ್ರು.

ಇತಿಹಾಸದಲ್ಲೇ ಮೊದಲ ಬಾರಿಗೆ ಕಾಡಾನೆ ಎಂಟ್ರಿ: ಇನ್ನು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಳೆಬೀಡು ಗ್ರಾಮಕ್ಕೆ ಕಾಡಾನೆ ಎಂಟ್ರಿ ಕೊಟ್ಟಿತ್ತು. ಹೀಗಾಗಿ ಮಾಹಿತಿ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಆನೆ ಓಡಿಸಲು ಕಾರ್ಯಾಚರಣೆ ಶುರು ಮಾಡಿದ್ರು. ಬಿದಿರೆಕೆರೆ, ಮಾಯಗೊಂಡನಹಳ್ಳಿ, ಸೊಪ್ಪಿನಹಳ್ಳಿ ಮಾರ್ಗವಾಗಿ ಬಂದು ಕೆರೆ ಸೇರಿದ್ದ ಈ ಆನೆಯನ್ನ ನೋಡೋಕೆ ಜನ ಕೂಡ ಸೇರಿದ್ರು. ಹೀಗಾಗಿ ಅರಣ್ಯ ಇಲಾಖೆ ಪಟಾಕಿ ಸಿಡಿಸಿ, ರಬ್ಬರ್ ಬುಲೆಟ್ ಹೊಡೆದು ಆನೆ ಕೆರೆಯಿಂದ ಹೊರ ಬರದಂತೆ ನೋಡಿಕೊಂಡ್ರು.

ಇನ್ನು ದಿನವಿಡೀ ಆನೆ ಹೊರಬರದಂತೆ ಕಾದ ಅಧಿಕಾರಿಗಳು ಸಂಜೆ ವೇಳೆಗೆ ಆನೆಯನ್ನ ಮರಳಿ ಕಾಡಿಗಟ್ಟುವಲ್ಲಿ ಯಶಸ್ವಿಯಾದ್ರು. ಅದೇನೆ ಇರ್ಲಿ, ಸಾಕಿರೋ ಆನೆ ಕಂಡ್ರೆನೇ ಭಯ ಬೀಳೋ ಜನ ಕಾಡಾನೆ ಕಂಡ್ರೆ ಕೇಳ್ಬೇಕಾ. ಹೀಗಾಗಿ ಅಧಿಕಾರಿಗಳು ಆನೆಯನ್ನ ಕಾಡಿಗಟ್ಟಲು ಯಶಸ್ವಿಯಾಗಿದ್ರೂ ಆತಂಕ ಮಾತ್ರ ತಪ್ಪಿಲ್ಲ.

ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!