ಹಾಸನ: ಮದುವೆ ಮುಂಜಿ ಅಂದ್ರೆ ಅದರ ಸಂಭ್ರಮವೇ ಬೇರೆ. ಮನೆಯಲ್ಲಿ ಎಲ್ಲಿಲ್ಲದ ಸಡಗರ ಮತ್ತು ಬಂಧುಬಳಗದ ಕಲರವ ಮನೆ ತುಂಬಾ ಹರಡಿರುತ್ತೆ. ಆದ್ರೆ ಇದಕ್ಕೆಲ್ಲಾ ಬ್ರೇಕ್ ಹಾಕೋದಕ್ಕೆ ಅಂತಾನೆ ಮಹಾಮಾರಿ ಕೊರೊನಾ ವಕ್ಕರಿಸಿದೆ.
ಯಾಕಂದ್ರೆ ಈ ಕೊರೊನಾ ಮಾರಿ ಯಾವಾಗ ಹೇಗೆ ಮತ್ತು ಯಾವ ರೂಪದಲ್ಲಿ ಬರುತ್ತೆ ಅಂತಾ ಹೇಳೋಕೇನೇ ಆಗ್ತಿಲ್ಲ. ಇಷ್ಟೆಲ್ಲಾ ಪೀಠಿಕೆ ಯಾಕಪ್ಪ ಅಂದ್ರೆ, ಮದುವೆ ಮಾತುಕತೆಗೆ ಅಂತಾ ಮನೆಗೆ ಬಂದವರು ಈಗ ಕೊರೊನಾ ಅನ್ನೋ ಮಾರಿಯನ್ನ ಗಿಫ್ಟ್ ಕೊಟ್ಟಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಿಂದ ಮದುವೆ ಮಾತುಕತೆಗೆ ಅಂತಾ ಬಂದ ಸಂಬಂಧಿಕರಿಂದ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಎಬಿಎಂ ಹಳ್ಳಿಯ ಕುಟುಂಬ ಈಗ ಸಂಕಷ್ಟಕ್ಕೀಡಾಗಿದೆ.
ಮದುವೆ ಮಾತುಕತೆಗೆ ಬಂದವ್ರು ಕೊರೊನಾ ಕೊಟ್ಟೋದ್ರು!
ಜೂನ್ 7ನೇ ತಾರಿಖಿನಂದು ಸಂಬಂಧಿಕರು ಮದುವೆ ಮಾತುಕತೆಗೆ ಬಂದಿದ್ರು. ಆಗ ಮನೆಯಲ್ಲಿದ್ದ ಐದು ವರ್ಷದ ಮಗುವನ್ನ ಎತ್ತಿ ಮುದ್ದಾಡಿದ್ದಾರೆ. ಇದಾದ ನಂತರ ಮಾತುಕತೆಯಾಯಿತು, ಊಟ ಉಪಚಾರಾನೂ ಆಯಿತು. ನಂತರ ಬೀಗರು ಹಿಂದಿರುಗಿ ಹೋಗಿದ್ದೂ ಆಯಿತು. ಆದ್ರೆ ಅವರೊಂದಿಗೆ ಬಂದಿದ್ದ ಕೊರೊನಾ ಮಾರಿ ಮಾತ್ರ ಹೋಗಲಿಲ್ಲ.
ಆದ್ರೆ ಜೂನ್ 11ರಂದು ಮಗುಗೆ ಜ್ವರ ಕಾಣಿಸಿಕೊಂಡಿತು. ಆಗ ಆಸ್ಪತ್ರೆಗೆ ಕರೆದೊಯ್ದಾಗ ಮಗುವನ್ನ ಐಎಲ್‌ಐ ಕೇಸ್ ಅಂತಾ ಪರಿಗಣಿಸಿ ಸ್ವಾಬ್ ಟೆಸ್ಟ್ ಮಾಡಿದ್ದಾರೆ. ಆಗ ಹೊರಬಿದ್ದಿದೆ ನೋಡಿ ಆಘಾತಕಾರಿ ಕೊರೊನಾ ವಕ್ಕರಿಸಿರುವುದರ ಸುಳಿವು!
ಕಮ್ಯುನಿಟಿ ಟ್ರಾನ್ಸಮಿಶನ್ ಆತಂಕ?
ಇದಾದ ನಂತರ ಆರೋಗ್ಯಾಧಿಕಾರಿಗಳು ಮಗುವಿನ ಜತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಕುಟುಂಬದವರನ್ನ ಕ್ವಾರಂಟೈನ್ ಮಾಡಿದ್ದಾರೆ. ಅವರ ಗಂಟಲು ದ್ರವವನ್ನ ಲ್ಯಾಬ್ ಟೆಸ್ಟ್‌ಗೆ ಕಳಿಸಿದ್ದಾರೆ. ನಂತರ ಅವರ ಗ್ರಾಮವನ್ನ ಸೀಲ್‌ಡೌನ್ ಮಾಡಿದ್ದಾರೆ. ಆದ್ರೆ ಕೊರೊನಾ ಈಗ ಒಬ್ಬರಿಂದ ಒಬ್ಬರಿಗೆ ಹಬ್ಬದೇ, ಇಡಿಯಾಗಿ ಕಮ್ಯುನಿಟಿಗೇ ಟ್ರಾನ್ಸ್‌ಮೀಟ್ ಆಗ್ತಿರೋದು ವೈದ್ಯರಲ್ಲಿ ಆತಂಕ ಮೂಡಿಸಿದೆ.
Published On - 6:28 pm, Sat, 13 June 20