ಕಿಡಿಗೇಡಿಗಳ ಕೃತ್ಯ: ಅನ್ಯಧರ್ಮೀಯ ಯುವತಿ ಜೊತೆ ಇದ್ದವನಿಗೆ ಬಿತ್ತು ಗೂಸ
ಹಾಸನ: ಅನ್ಯಧರ್ಮೀಯ ಯುವಕ ಯುವತಿ ಜೊತೆಗಿದ್ದ ಕಾರಣಕ್ಕೆ ಯುವಕರ ಗುಂಪೊಂದು ಹಲ್ಲೆ ನಡೆಸಿದ ಘಟನೆ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ. ಯುವಕ ಮತ್ತು ಯುವತಿ ಕೆಎ 13 ಸಿ 3030 ನಂಬರ್ ಆಟೋದಲ್ಲಿ ತೆರಳುವಾಗ ಯುವಕರ ಗುಂಪೊಂದು ಆಟೋವನ್ನ ಅಡ್ಡಗಟ್ಟಿ ಯುವಕನ ಮೇಲೆ ಹಲ್ಲೆ ನಡೆಸಿದೆ. ಅಲ್ಲದೆ ಯುವತಿಯನ್ನು ಪರ ಧರ್ಮದ ಯುವಕನ ಜೊತೆ ಓಡಾಡ್ತೀಯಾ ಎಂದು ನಿಂದಿಸಿದ್ದಾರೆ. ಯುವಕರ ದೌರ್ಜನ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲ್ಲೆ ಮಾಡಿರೊ ಯುವಕರ ವಿರುದ್ದ ತೀವ್ರ […]
ಹಾಸನ: ಅನ್ಯಧರ್ಮೀಯ ಯುವಕ ಯುವತಿ ಜೊತೆಗಿದ್ದ ಕಾರಣಕ್ಕೆ ಯುವಕರ ಗುಂಪೊಂದು ಹಲ್ಲೆ ನಡೆಸಿದ ಘಟನೆ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ. ಯುವಕ ಮತ್ತು ಯುವತಿ ಕೆಎ 13 ಸಿ 3030 ನಂಬರ್ ಆಟೋದಲ್ಲಿ ತೆರಳುವಾಗ ಯುವಕರ ಗುಂಪೊಂದು ಆಟೋವನ್ನ ಅಡ್ಡಗಟ್ಟಿ ಯುವಕನ ಮೇಲೆ ಹಲ್ಲೆ ನಡೆಸಿದೆ.
ಅಲ್ಲದೆ ಯುವತಿಯನ್ನು ಪರ ಧರ್ಮದ ಯುವಕನ ಜೊತೆ ಓಡಾಡ್ತೀಯಾ ಎಂದು ನಿಂದಿಸಿದ್ದಾರೆ. ಯುವಕರ ದೌರ್ಜನ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲ್ಲೆ ಮಾಡಿರೊ ಯುವಕರ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿದೆ.