Wild Elephants Menace: ಸರ್ಕಾರಕ್ಕೆ ಸೆಡ್ಡು ಹೊಡೆದು, ಕಾಡಾನೆಯಿಂದ ಬೆಳೆ ರಕ್ಷಣೆಗಾಗಿ ಖೆಡ್ಡಾ ತೋಡಲು ಮುಂದಾದ ಹಾಸನ ರೈತರು

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 26, 2022 | 2:59 PM

ಖೆಡ್ಡಾಗೆ ಬಿದ್ದ ಆನೆಯನ್ನ ಅರಣ್ಯ ಇಲಾಖೆ ಸ್ಥಳಾಂತರ ಮಾಡಿಕೊಳ್ಳಲಿ ಎಂಬುದು ರೈತರ ಲೆಕ್ಕಾಚಾರ, ಆಗ್ರಹವಾಗಿದೆ. ಕಾಡಾನೆಗಳು ಕಾಫಿ, ಅಡಿಕೆ, ಬಾಳೆ, ಮೆಣಸು ಬೆಳೆಯನ್ನು ಧ್ವಂಸ ಮಾಡಿ ಜನರ ಜೀವಕ್ಕೂ ಸಂಚಕಾರ ತರುತ್ತಿವೆ.

Wild Elephants Menace: ಸರ್ಕಾರಕ್ಕೆ ಸೆಡ್ಡು ಹೊಡೆದು, ಕಾಡಾನೆಯಿಂದ ಬೆಳೆ ರಕ್ಷಣೆಗಾಗಿ ಖೆಡ್ಡಾ ತೋಡಲು ಮುಂದಾದ ಹಾಸನ ರೈತರು
ಸರ್ಕಾರಕ್ಕೆ ಸೆಡ್ಡು ಹೊಡೆದು, ಕಾಡಾನೆಯಿಂದ ಬೆಳೆ ರಕ್ಷಣೆಗಾಗಿ ಖೆಡ್ಡಾ ತೋಡಲು ಮುಂದಾದ ಹಾಸನ ರೈತರು
Follow us on

ಹಾಸನ: ಕಾಡಾನೆ ಹಾವಳಿಯಿಂದ (Wild Elephants) ಬೇಸತ್ತಿದ್ದ ರೈತರು (Hassan Farmers), ತಮ್ಮ ತಮ್ಮ ಬೆಳೆಗಳ (Crop) ರಕ್ಷಣೆಗಾಗಿ ಖೆಡ್ಡಾ ತೋಡಿದ್ದಾರೆ. 15 ದಿನಗಳ ಹಿಂದೆ ನಡೆಸಿದ್ದ ಹೋರಾಟದಲ್ಲಿ ರೈತರು ಖೆಡ್ಡಾ ತೋಡುವುದಾಗಿ ಅರಣ್ಯ ಇಲಾಖೆಗೆ ಎಚ್ಚರಿಕೆಯನ್ನು ನೀಡಿದ್ದರು. ರೈತರ ಹೋರಾಟದ ಎಚ್ಚರಿಕೆಯ ಬಳಿಕವೂ ಸೂಕ್ತ ಕ್ರಮ‌ ವಹಿಸದ ಹಿನ್ನೆಲೆಯಲ್ಲಿ ಕಾಡಾನೆ ಹಾವಳಿ ತಡೆಯಲು ರೈತರು ಅನಿವಾರ್ಯವಾಗಿ ಖೆಡ್ಡಾ (trenches) ತೋಡುವುದಕ್ಕೆ ಕೈಹಾಕಿದ್ದಾರೆ.

ಸಕಲೇಶಪುರ ತಾಲ್ಲೂಕಿನ ಹೊಸಕೊಪ್ಪಲು ಗ್ರಾಮದಲ್ಲಿ ರೈತರು ಖೆಡ್ಡಾ ತೋಡಿ, ಆಕ್ರೋಶ ಹೊರಹಾಕಿದ್ದಾರೆ. 20 ಅಡಿ ಆಳ, 20 ಅಡಿ ಅಗಲಕ್ಕೆ ರೈತರು ಖೆಡ್ಡಾ (Trap) ತೆಗೆದಿದ್ದಾರೆ. ಹೊಸಕೊಪ್ಪಲು ಗ್ರಾಮದ ಅಮೃತ್ ರವರ ಗದ್ದೆ ಸಮೀಪ ಖೆಡ್ಡಾ ತೋಡುತ್ತಿದ್ದಾರೆ ರೈತರು. ಖೆಡ್ಡಾ ತೋಡಿ ಅದರ ಮೇಲೆ ಸೊಪ್ಪು, ಬಿದಿರು ಕಟ್ಟಿಗೆ ಹಾಕಿ ಮುಚ್ಚಿ ಆನೆ ಖೆಡ್ಡಾಗೆ ಬೀಳುವಂತೆ ಪ್ಲಾನ್ ಮಾಡಿದ್ದಾರೆ!

Also Read:

ಕಾಫಿನಾಡಲ್ಲಿ ಎರಡು ಕಾಡಾನೆಗಳನ್ನು ಸೆರೆ ಹಿಡಿದ ಅರಣ್ಯ ಇಲಾಖೆ: ಮತ್ತೊಂದು ಕಾಡಾನೆ ಸೆರೆಗೆ ಬಲೆ

ಖೆಡ್ಡಾಗೆ ಬಿದ್ದ ಆನೆಯನ್ನ ಅರಣ್ಯ ಇಲಾಖೆ ಸ್ಥಳಾಂತರ ಮಾಡಿಕೊಳ್ಳಲಿ ಎಂಬುದು ರೈತರ ಲೆಕ್ಕಾಚಾರ, ಆಗ್ರಹವಾಗಿದೆ. ಆಲೂರು, ಸಕಲೇಶಪುರ, ಬೇಲೂರು ಭಾಗದಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದೆ. ಕಾಡಾನೆಗಳು ಕಾಫಿ, ಅಡಿಕೆ, ಬಾಳೆ, ಮೆಣಸು ಬೆಳೆಯನ್ನು ಧ್ವಂಸ ಮಾಡಿ ಜನರ ಜೀವಕ್ಕೂ ಸಂಚಕಾರ ತರುತ್ತಿವೆ. ಸರ್ಕಾರ ಏನೂ ಕ್ರಮ ವಹಿಸುತ್ತಿಲ್ಲ ಎಂದು ರೊಚ್ಚಿಗೆದ್ದು ಖೆಡ್ಡಾ ತೋಡಿ ಅರಣ್ಯ ಇಲಾಖೆ ಹಾಗು ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ ಸ್ಥಳೀಯ ಜನ.

ರಸ್ತೆ ಬದಿಯಲ್ಲಿ ಆಶ್ರಯ ಪಡೆದಿದ್ದ ಕೂಲಿ ದಂಪತಿ ಮೇಲೆ ಕಾಡಾನೆ ದಾಳಿ:

ಇದಕ್ಕೂ ಮುನ್ನ ರಸ್ತೆ ಬದಿಯಲ್ಲಿ ಆಶ್ರಯ ಪಡೆದಿದ್ದವರ ಮೇಲೆ ಕಾಡಾನೆ ದಾಳಿ ನಡೆಸಿದ ಪ್ರಸಂಗ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್​​ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಾಡಾನೆ ದಾಳಿಯಿಂದ ನಾಗವಲ್ಲಿ, ಗಂಡುಗುಸೆ ದಂಪತಿಗೆ ಗಾಯಗಳಾಗಿವೆ. ಭಾನುವಾರ ರಾತ್ರಿ ಬಣಕಲ್ ನ ಪಶು ವೈದ್ಯಕೀಯ ಆಸ್ಪತ್ರೆ ಬಳಿ ಮಲಗಿದ್ದಾಗ ಕಾಡಾನೆ ದಾಳಿ ಗಾಯಾಳುಗಳಿಗೆ ಮೂಡಿಗೆರೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕೂಲಿ ಕೆಲಸಕ್ಕೆ ಹಾಸನ ಜಿಲ್ಲೆ ಹಗರೆ ಗ್ರಾಮದಿಂದ ದಂಪತಿ ಬಂದಿದ್ದರು. ಅದೃಷ್ಟವಶಾತ್ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಡಾನೆ ಹಾವಳಿಯನ್ನು ನಿಯಂತ್ರಿಸುವಂತೆ ಗ್ರಾಮಸ್ಥರು ಆಗ್ರಹಿಸಲಾಗಿ, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:44 pm, Mon, 26 December 22