ಮಗಳನ್ನು ಚುಡಾಯಿಸಿದಂತೆ ಬುದ್ಧಿವಾದ ಹೇಳಿದ್ದಕ್ಕೆ ಅಪ್ಪನ ಮೇಲೆ ಮಾರಣಾಂತಿಕ ಹಲ್ಲೆ; ಗ್ರಾಪಂ ಸದಸ್ಯನ ವಿರುದ್ಧ ದೂರು ದಾಖಲು

| Updated By: guruganesh bhat

Updated on: Sep 18, 2021 | 4:57 PM

ತಲೆ, ಕುತ್ತಿಗೆ, ಕೈ, ಎದೆಗೆ ಮನಸೋ ಇಚ್ಚೆ ಹಲ್ಲೆ ನಡೆಸಲಾಗಿದ್ದು, ತೀವ್ರವಾಗಿ ಗಾಯಗೊಂಡಿರುವ ಪ್ರದೀಪ್, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಮಗಳನ್ನು ಚುಡಾಯಿಸಿದಂತೆ ಬುದ್ಧಿವಾದ ಹೇಳಿದ್ದಕ್ಕೆ ಅಪ್ಪನ ಮೇಲೆ ಮಾರಣಾಂತಿಕ ಹಲ್ಲೆ; ಗ್ರಾಪಂ ಸದಸ್ಯನ ವಿರುದ್ಧ ದೂರು ದಾಖಲು
ಚಿಕಿತ್ಸೆ ಪಡೆಯುತ್ತಿರುವ ಪ್ರದೀಪ್
Follow us on

ಹಾಸನ: ತಮ್ಮ ಮಗಳನ್ನು ಚುಡಾಯಿಸದಂತೆ ಬುದ್ಧಿವಾದ ಹೇಳಿದ್ದಕ್ಕೆ ಬಾಲಕಿಯೋರ್ವಳ ತಂದೆಯ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ ಘಟನೆ ಹಾಸನ ಜಿಲ್ಲೆ ಆಲೂರು ತಾಲೂಕಿನ ಜಯಂತಿನಗರದಲ್ಲಿ ನಡೆದಿದೆ. ಒಂದು ತಿಂಗಳ ಹಿಂದೆ ಯುವಕನೊಬ್ಬ ಪ್ರದೀಪ್ ಎಂಬುವವರ ಪುತ್ರಿಯನ್ನು ರೇಗಿಸಿದ್ದ. ಹೀಗಾಗಿ ಆ ಯುವಕನಿಗೆ ಪ್ರದೀಪ್ ಬುದ್ಧಿವಾದ ಹೇಳಿದ್ದರು. ಆಲೂರು ತಾಲ್ಲೂಕಿನ ಹಲಸೂರು ಗ್ರಾಮದ ಪ್ರದೀಪ್ ಮೇಲೆ ಹೊಸಮಠ ಗ್ರಾಮದ ಕಾರ್ತಿಕ್ ಹಾಗು ಅರ್ಜುನ್ ಎಂಬುವವರು ಹಲ್ಲೆ ನಡೆಸಿದ್ದಾರೆ. ಕಾರ್ತಿಕ್ ಕಾರಗೋಡು ಗ್ರಾಮ ಪಂಚಾಯತ್ ಸದಸ್ಯ. ಕಾರಿನಲ್ಲಿ ಹೋಗುತ್ತಿದ್ದ ಪ್ರದೀಪ್ ಅವರನ್ನು ತಡೆದು ಹಲ್ಲೆ ನಡೆಸಲಾಗಿದೆ ಎಂದು ಆಲೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಈ ಹಿಂದೆ ತಮ್ಮ ಮಗಳನ್ನು ರೇಗಿಸಲು ಬಂದಿದ್ದ ಆರೋಪಿಗಳನ್ನು ಪ್ರದೀಪ್ ಪ್ರಶ್ನಿಸಿ ಎಚ್ಚರಿಕೆ ನೀಡಿದ್ದರು. ಆಗ ಅವರು ಹಲ್ಲೆ ನಡೆಸಿದ್ದರು. ಅದೇ ವೇಳೆ ಪ್ರದೀಪ್ ಅವರು ಸಹ ತಿರುಗೇಟು ನೀಡಿದ್ದರು. ಈ ಬಗ್ಗೆ ಎರಡು ಕಡೆಯವರಿಂದ ಆಲೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಪರಸ್ಪರ ಮುಚ್ಚಳಿಕೆ ಬರೆಸಿ ಎಚ್ಚರಿಕೆ ನೀಡಿ ಕಳಿಸಿದ್ದರು. ಆದರೆ ನಿನ್ನೆ ಪ್ರದೀಪ್ ಅವರು ಕಾರಿನಲ್ಲಿ ಹೋಗುತ್ತಿರುವಾಗ ಗ್ರಾ.ಪಂ.ಸದಸ್ಯ ಕಾರ್ತಿಕ್ ಹಾಗು ಅರ್ಜುನ ಎಂಬಾತನಿಂದ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ತಲೆ, ಕುತ್ತಿಗೆ, ಕೈ, ಎದೆಗೆ ಮನಸೋ ಇಚ್ಚೆ ಹಲ್ಲೆ ನಡೆಸಲಾಗಿದ್ದು, ತೀವ್ರವಾಗಿ ಗಾಯಗೊಂಡಿರುವ ಪ್ರದೀಪ್, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಇದನ್ನೂ ಓದಿ: 

ದೇಶದಲ್ಲಿ ಶೀಘ್ರದಲ್ಲೇ ನಿರ್ಮಾಣವಾಗಲಿದೆ ಮೊದಲ ಎಲೆಕ್ಟ್ರಿಕ್​ ಹೆದ್ದಾರಿ; ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

GST Rate: ಜಿಎಸ್​ಟಿ ಸಮಿತಿ ಸಭೆಯ ನಂತರ ಯಾವ ಸರಕು ತೆರಿಗೆ ದರ ಎಷ್ಟಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

(Hassan fatal assault on a man for someone shouts his daughter he want Complaint against Panchayat member)