ಹಾಸನ: ಶುಂಠಿಗೆ ಕಳೆನಾಶಕ ಸಿಂಪಡಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು, ರಕ್ತ ಪರೀಕ್ಷೆಯಲ್ಲಿ ವಿಷ ಇರೋದು ದೃಢ

| Updated By: ಆಯೇಷಾ ಬಾನು

Updated on: Aug 29, 2023 | 12:56 PM

ಹಾಸನದಲ್ಲಿ ಕೀರ್ತಿ ಎಂಬ 23 ವರ್ಷದ ಯುವಕ ಮೃತಪಟ್ಟಿದ್ದಾನೆ. ಕೀರ್ತಿ, ಸತತ 1 ವಾರ ಶುಂಠಿಗೆ ಕಳೆನಾಶಕ ಸಿಂಪಡಿಸಿದ್ದ. ಬಳಿಕ ದಿಢೀರನೆ ವಾಂತಿ, ಸುಸ್ತಿನಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದ. ಆಸ್ಪತ್ರೆಗೆ ದಾಖಲಾಗಿ 4 ದಿನಗಳ ಬಳಿಕ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾನೆ. ರಕ್ತದ ಪರೀಕ್ಷೆ ವೇಳೆ ಕೀರ್ತಿ ದೇಹದಲ್ಲಿ ವಿಷ ಇರೋದು ದೃಢವಾಗಿದೆ.

ಹಾಸನ: ಶುಂಠಿಗೆ ಕಳೆನಾಶಕ ಸಿಂಪಡಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು, ರಕ್ತ ಪರೀಕ್ಷೆಯಲ್ಲಿ ವಿಷ ಇರೋದು ದೃಢ
ಮೃತ ಯುವಕ ಕೀರ್ತಿ
Follow us on

ಹಾಸನ, ಆ.29: ಕಳೆನಾಶಕ ಸಿಂಪಡಣೆ ವೇಳೆ ಮುಂಜಾಗ್ರತಾ ಕ್ರಮ ವಹಿಸದೆ ಯಡವಟ್ಟು ಮಾಡಿಕೊಂಡಿದ್ದು ಅಮಾಯಕ ಯುವಕ ಸಾವನ್ನಪ್ಪಿದ್ದಾನೆ(Death). ಹಾಸನ(Hassan) ತಾಲೂಕಿನ ಕಾರ್ಲೆ ಗ್ರಾಮದಲ್ಲಿ ಕಿಡ್ನಿ, ಲಿವರ್, ಶ್ವಾಸಕೋಶ ನಿಷ್ಕ್ರಿಯದಿಂದ ಕೀರ್ತಿ(23) ಎಂಬ ಯುವಕ ಮೃತಪಟ್ಟಿದ್ದಾನೆ. ಕೀರ್ತಿ, ಸತತ 1 ವಾರ ಕಾಲ ಶುಂಠಿಗೆ(Ginger) ಕಳೆನಾಶಕ ಸಿಂಪಡಿಸಿದ್ದ. ಬಳಿಕ ದಿಢೀರನೆ ವಾಂತಿ, ಸುಸ್ತಿನಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದ. ಆಸ್ಪತ್ರೆಗೆ ದಾಖಲಾಗಿ 4 ದಿನಗಳ ಬಳಿಕ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾನೆ. ರಕ್ತದ ಪರೀಕ್ಷೆ ವೇಳೆ ಕೀರ್ತಿ ದೇಹದಲ್ಲಿ ವಿಷ ಇರೋದು ದೃಢವಾಗಿದೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಾರು ತಡೆದು ದರೋಡೆಗೆ ಯತ್ನ, ಕಮಿಷನರ್​ಗೆ ಟ್ವೀಟ್ ಮೂಲಕ ದೂರು​

ನೆಲಮಂಗಲ: ಮೈಕ್ರೋ ನ್ಯಾನೋ ಚಿಪ್ ಕಂಪನಿಯ ಉದ್ಯೋಗಿ ಅಶುತೋಷ್ ಸಿಂಗ್ ಮೇಲೆ ನಾಲ್ಕು ಜನ ಅಪರಿಚಿತರು ಹಲ್ಲೆಗೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರು ಉತ್ತರ ತಾಲೂಕಿನ ರಾಹುತನಹಳ್ಳಿ ರಸ್ತೆಯಲ್ಲಿ ಆಗಸ್ಟ್ 24 ರಾತ್ರಿ 12:20ಕ್ಕೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕ್ವಿಡ್ ಕಾರಿನಲ್ಲಿ ಬರ್ತಿದ್ದ ವೇಳೆ ರಸ್ತೆ ಪಕ್ಕ ಬೈಕ್ ನಿಲ್ಲಿಸಿಕೊಂಡು ಮಾತನಾಡುತ್ತ ನಿಂತಿದ್ದ ನಾಲ್ವರು ಕಾರಿನ್ನು ತಡೆದು ಹಲ್ಲೆಗೆ ಯತ್ನಿಸಿದ್ದಾರೆ. ಅಪರಿಚಿತರು ಕಾರನ್ನು ತಡೆಯಲು ಯತ್ನಿಸುತ್ತಿದ್ದಂತೆ ರಾಬರಿ ಮಾಡಲು ಬಂದಿರಬಹುದೆಂಬಂತೆ ಕಾರು ನಿಲ್ಲಿಸದೆ ಅಶುತೋಷ್ ಮುಂದೆ ಹೋಗಿದ್ದಾರೆ. ಈ ವೇಳೆ ಕಾರನ್ನ ಹಿಂಬಾಲಿಸಿ ಹಿಂದಿನ ಗ್ಲಾಸ್ ಹೊಡೆದು ದರೋಡೆ ಮಾಡಲು ಯತ್ನಿಸಿ ಎಸ್ಕೇಪ್ ಆಗಿದ್ದಾರೆ. ಈ ಬಗ್ಗೆ ಅಶುತೋಷ್ ಬೆಂಗಳೂರು ಕಮಿಷನರ್​ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಸದ್ಯ ಈ ಸಂಬಂಧ ದೂರು ದಾಖಲಾಗಿದ್ದು ಮಾದನಾಯಕನಹಳ್ಳಿ ಪೊಲೀಸರು ಆರೋಪಿಗಳಿಗಾಗಿ ಹುಡುಕಾಡುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಚಿಂತಕರು, ಸಾಹಿತಿಗಳಿಗೆ ಜೀವ ಬೆದರಿಕೆ: 7 ಜನರಿಗೆ ಒಬ್ಬನೇ ಕೊಲೆ ಬೆದರಿಕೆ ಪತ್ರ ಬರೆದಿರುವುದು ದೃಢ

ಟೋಲ್ ಗೇಟ್​ ಸಿಬ್ಬಂದಿ ಜೊತೆ ವಾಗ್ವಾದ

ಉಡುಪಿಯ ಹೆಜಮಾಡಿ ಟೋಲ್ ಗೇಟ್​ನಲ್ಲಿ ಮಾರಾಮಾರಿಯಾಗಿದೆ. ಬೆಂಗಳೂರಿನಿಂದ ಬಂದಿದ್ದ ಯುವಕರ ತಂಡ ಮತ್ತು ಸಿಬ್ಬಂದಿ ನಡುವೆ ಮಾರಾಮಾರಿಯಾಗಿದೆ. ಬೆಂಗಳೂರಿನ ಯುವಕರು ಫಾಸ್ಟ್ ಟ್ಯಾಗ್ ಇಲ್ಲದ ಕಾರಿನಲ್ಲಿ ಬಂದಿದ್ದರು. ಉಡುಪಿ ಮತ್ತು ಮಂಗಳೂರು ಗಡಿಭಾಗದಲ್ಲಿರುವ ಹೆಜಮಾಡಿ ಟೋಲ್ ಬಳಿ ಗೇಟ್ ತೆಗೆದು ಕಾರ್ ಪಾಸ್ ಮಾಡಿದ್ದರು. ಈ ವೇಳೆ ಟೋಲ್ ಸಿಬ್ಬಂದಿ ದುರಹಂಕಾರದಿಂದ ವರ್ತಿಸಿ, ರೌಡಿಗಳಂತೆ ಮುಗಿಬಿದ್ದಿದ್ದಾರೆ. ಸಿಬ್ಬಂದಿ ವರ್ತನೆಯಿಂದ ಆಕ್ರೋಶಗೊಂಡ ಯುವಕರ ತಂಡ ಜಗಳಕ್ಕೆ ಮುಂದಾಗಿದ್ದು ಟೋಲ್ ಸಿಬ್ಬಂದಿ ಮತ್ತು ಯುವಕರ ನಡುವೆ ವಾಗ್ವಾದ ನಡೆದಿದೆ. ಬಳಿಕ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಹೀಗೆ ಜಗಳದಿಂದಾಗಿ ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:37 pm, Tue, 29 August 23