ಅರಣ್ಯಾಧಿಕಾರಿ ಶಿಲ್ಪಾ ಅಮಾನತು ಆದೇಶ ರದ್ದತಿಗೆ ಒತ್ತಾಯಿಸಿ ಎಸ್​ಸಿ ಎಸ್​ಟಿ ಒಕ್ಕೂಟದಿಂದ ಪ್ರತಿಭಟನೆ

| Updated By: Rakesh Nayak Manchi

Updated on: Jan 16, 2023 | 9:42 PM

ಸಕಲೇಶಪುರ ವಲಯ ಅರಣ್ಯಾಧಿಕಾರಿ ಶಿಲ್ಪಾ ಅವರನ್ನ ಕರ್ತವ್ಯಲೋಪ ಸೇರಿದಂತೆ ಸರಣಿ ಆರೋಪ ಹಿನ್ನಲೆ ಅಮಾನತು ಮಾಡಲಾಗಿತ್ತು. ಇದನ್ನು ಖಂಡಿಸಿ ಎಸ್​​ಸಿ ಎಸ್​ಟಿ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು.

ಅರಣ್ಯಾಧಿಕಾರಿ ಶಿಲ್ಪಾ ಅಮಾನತು ಆದೇಶ ರದ್ದತಿಗೆ ಒತ್ತಾಯಿಸಿ ಎಸ್​ಸಿ ಎಸ್​ಟಿ ಒಕ್ಕೂಟದಿಂದ ಪ್ರತಿಭಟನೆ
ಅಮಾನತುಗೊಂಡ ಆರ್​ಎಫ್​ಒ ಶಿಲ್ಪಾ ಮತ್ತು ಅಮಾನತು ಆದೇಶ ವಾಪಸ್​ ಪಡೆಯುವಂತೆ ಒತ್ತಾಯಿಸಿ ಸಕಲೇಶಪುರ ಎಸ್​ಸಿ ಎಸ್​ಟಿ ಒಕ್ಕೂಟದಿಂದ ನಡೆದ ಪ್ರತಿಭಟನೆ
Follow us on

ಹಾಸನ: ಬ್ಬಂದಿಗಳನ್ನು ನಿಯಂತ್ರಿಸುವಲ್ಲಿ, ಅರಣ್ಯ ಅಪರಾಧ ಪ್ರಕರಣಗಳ ತನಿಖೆ ನಡೆಸುವಲ್ಲಿ ವಿಫಲತೆಯನ್ನ ಹೊಂದಿದ್ದ ಆರೋಪದ ಮೇಲೆ ಅರಣ್ಯಾಧಿಕಾರಿ ಶಿಲ್ಪಾ (RFO Shilpa Suspend) ಅವರನ್ನು ಅಮಾನತುಗೊಳಿಸಲಾಗಿತ್ತು. ಇದೀಗ ಅಮಾನತು ರದ್ದುಪಡಿಸುವಂತೆ ಒತ್ತಾಯಿಸಿ ಸಕಲೇಶಪುರ ತಾಲೂಕು SC, ST ಒಕ್ಕೂಟದಿಂದ ಪ್ರತಿಭಟನೆ ನಡೆಯಿತು. ಸಕಲೇಶಪುರ ತಾಲೂಕಿನಲ್ಲಿ ಕಾಡುಪ್ರಾಣಿಗಳ ಬೇಟೆ ನಿಯಂತ್ರಣ, ರೆಸಾರ್ಟ್​ನಲ್ಲಿ ಅಕ್ರಮ ಚಟುವಟಿಕೆಗೆ ಶಿಲ್ಪಾ ಕಡಿವಾಣ ಹಾಕಿದ್ದರು. ದುರುದ್ದೇಶಪೂರ್ವಕವಾಗಿ ಶಿಲ್ಪಾರನ್ನು ಅಮಾನತು ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಈ ಹಿಂದೆ 18 ಆರ್​ಎಫ್​ಓಗಳು ಕರ್ತವ್ಯ ನಿರ್ವಹಿಸಿ ಹೋಗಿದ್ದಾರೆ. ಅವರಿಂದಲೂ ತಾಲೂಕಿನಲ್ಲಿ ಕಾಡಾನೆ ಹಾವಳಿ ನಿಯಂತ್ರಿಸಲಾಗಿರಲಿಲ್ಲ. ಆದರೆ RFO ಶಿಲ್ಪಾ ಅಮಾನತು ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಶಿಲ್ಪಾ ಅವರ ಅಮಾನತು ಆದೇಶ ಹಿಂಪಡೆಯುವಂತೆ ಒತ್ತಾಯಿಸಿದರು.

ಸಿಬ್ಬಂದಿಗಳನ್ನು ನಿಯಂತ್ರಿಸುವಲ್ಲಿ, ಅರಣ್ಯ ಅಪರಾಧ ಪ್ರಕರಣಗಳ ತನಿಖೆ ನಡೆಸುವಲ್ಲಿ ವಿಫಲತೆಯನ್ನ ಹೊಂದಿದ್ದ ಅರಣ್ಯಾಧಿಕಾರಿ ಶಿಲ್ಪಾ ಅವರಿಗೆ ನೀಡಿದ ಭೌತಿಕ ಹಾಗೂ ಆರ್ಥಿಕ ಪ್ರಗತಿಯನ್ನು ಸಾಧಿಸಿಲ್ಲ. ಹಾಗೂ ಸಾರ್ವಜನಿಕರೊಂದಿಗೆ ಸಮನ್ವಯ ಸಾಧಿಸಿಕೊಂಡು ಆನೆ ಮಾನವ ಸಂಘರ್ಷ ನಿಯಂತ್ರಿಸುವಲ್ಲಿ ಕೂಡ ವಿಫಲತೆಯನ್ನ ಹೊಂದಿದ್ದಾರೆ. ಅಧಿಕಾರಿ ಸಿಬ್ಬಂದಿ ವರ್ಗದವರ ನಡುವೆ ಭಿನ್ನಾಭಿಪ್ರಾಯ ಉಂಟಾಗಲು, ವಿಭಾಗದ ಹಾಗೂ ವಲಯದ ಆಡಳಿತಾತ್ಮಕ ಸಮಸ್ಯೆ ಉಂಟಾಗಲು ನೇರ ಕಾರಣಕರ್ತರಾಗಿರುವುದರ ಜೊತೆಗೆ ಕರ್ತವ್ಯ ಲೋಪ ಹಿನ್ನಲೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಿಂದ ಅಮಾನತು ಆದೇಶ ಹೊರಡಿಸಲಾಗಿತ್ತು.

ಇದನ್ನೂ ಓದಿ: ಹಾಸನ: ಮಗನ ಅಂಗಾಂಗ ದಾನ ಮಾಡಿ ಸಾವಿನ ನೋವಲ್ಲೂ ಸಾರ್ಥಕತೆ ತೋರಿದ ಹೆತ್ತವರು

ಮೇಲಾಧಿಕಾರಿಗಳ ಯಾವುದೇ ಸೂಚನೆ ಹಾಗೂ ಆದೇಶ ಪತ್ರಗಳಿಗೆ ಹೇಗೆ ಉತ್ತರಿಸಬೇಕು ಎಂಬ ತಮ್ಮ ಕಾರ್ಯಶೈಲಿಯನ್ನು ತಿದ್ದುಕೊಂಡಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಮವಸ್ತ್ರಧಾರಿ ಅಧಿಕಾರಿಯವರು ಆಡಳಿತಾತ್ಮಕ ಗಂಭೀರ ವಿಷಯಗಳ ಬಗ್ಗೆ ಗಮನ ಹರಿಸದೇ ಸರ್ಕಾರಿ ಸ್ವತ್ತನ್ನು ರಕ್ಷಣೆ ಮಾಡುವಲ್ಲಿ ವಿಫಲರಾಗಿರುವುದರ ಜೊತೆಗೆ ಆರ್ಥಿಕ ನಷ್ಟ ಉಂಟು ಮಾಡಿದ್ದು, ಕೇಂದ್ರ ಸ್ಥಾನದಲ್ಲಿದ್ದಲ್ಲಿ ಈ ಕರ್ತವ್ಯ ಲೋಪಗಳಿಗೆ ಸಂಬಂಧಿಸಿದ ಪೂರಕ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇದೆಯೆಂದು ಉಲ್ಲೇಖಿಸಿ ಹಾಗೂ ಪೂರಕ ಸರ್ಕಾರಿ ಪರ ಸಾಕ್ಷ್ಯಗಳಿಗೆ ಬೆದರಿಕೆ ಒಡ್ಡುವ ಸಾಧ್ಯತೆ ಬಗ್ಗೆಯು ಆರೋಪವಿದ್ದು ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ, ಸಕಲೇಶಪುರ ವಲಯದ ಕರ್ತವ್ಯದಿಂದ ಶಿಲ್ಪಾರನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:42 pm, Mon, 16 January 23