ಲಿವ್-ಇನ್ ಸಂಬಂಧದಲ್ಲಿದ್ದ ಯುವತಿಯನ್ನು ಬಿಟ್ಟು ಪ್ರಿಯಕರ ಎಸ್ಕೇಪ್ ಪ್ರಕರಣ: ಪ್ರಿಯಕರನ ಮನೆ ಎದುರು ಧರಣಿ ಕುಳಿತ ಪ್ರೇಯಸಿ!

ಮದುವೆಯಾಗುವುದಾಗಿ ನಂಬಿಸಿ ಐದು ತಿಂಗಳು ಲಿವ್-ಇನ್ ಸಂಬಂಧದಲ್ಲಿದ್ದು, ಇದೀಗ ತಲೆಮರೆಸಿಕೊಂಡಿರುವ ಪ್ರಿಯಕರ ಸೂರ್ಯನ ಮನೆ ಎದುರು ಕಾಸರಗೋಡು ಮೂಲದ ಯುವತಿ ಧರಣಿ ಕುಳಿತಿದ್ದಾಳೆ. ಹಾಸನದ ಚನ್ನರಾಯಪಟ್ಟಣದ ಕಲ್ಲೇಸೋಮನಹಳ್ಳಿಯಲ್ಲಿ ಸುರಿಯುವ ಮಳೆಯ ನಡುವೆಯೂ ಮನೆ ಮುಂದೆ ನರಳುತ್ತಿರುವ ಯುವತಿಯ ಹೋರಾಟ ಹಾಗೂ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಸಂಪೂರ್ಣ ವರದಿ ಇಲ್ಲಿದೆ.

ಲಿವ್-ಇನ್ ಸಂಬಂಧದಲ್ಲಿದ್ದ ಯುವತಿಯನ್ನು ಬಿಟ್ಟು ಪ್ರಿಯಕರ ಎಸ್ಕೇಪ್ ಪ್ರಕರಣ: ಪ್ರಿಯಕರನ ಮನೆ ಎದುರು ಧರಣಿ ಕುಳಿತ ಪ್ರೇಯಸಿ!
ಸೂರ್ಯ
Edited By:

Updated on: Oct 26, 2026 | 8:07 AM

ಮುಖ್ಯಾಂಶಗಳು

  • ಮದುವೆಯಾಗುವುದಾಗಿ ನಂಬಿಸಿ ಪ್ರಿಯಕರ ಎಸ್ಕೇಪ್, ಪ್ರೇಮಿ ಮನೆ ಎದುರು ಪ್ರೇಯಸಿ ಧರಣಿ.
  • ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಕಲ್ಲೇಸೋಮನಹಳ್ಳಿಯಲ್ಲಿ ಧರಣಿ ನಡೆಸುತ್ತಿರುವ ಕಾಸರಗೋಡು ಮೂಲದ ಯುವತಿ
  • ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಮನೆಗೆ ಬೀಗಹಾಕಿ ಪೋಷಕರು ಪರಾರಿ.

ಹಾಸನ, ಅಕ್ಟೋಬರ್ 26: ಮದುವೆಯಾಗುವುದಾಗಿ ನಂಬಿಸಿ ಲಿವ್ ಇನ್ ಸಂಬಂಧದಲ್ಲಿದ್ದ ಪ್ರಿಯಕರ ತನಗೆ ಮೋಸ ಮಾಡಿ ಪರಾರಿಯಾಗಿದ್ದಾನೆಂದು ಯುವತಿಯೊಬ್ಬಳು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಆದರೂ ನ್ಯಾಯ ಸಿಗದ ಹಿನ್ನೆಲೆ ತಲೆಮರೆಸಿಕೊಂಡಿರುವ ಪ್ರಿಯಕರನ ಹಾಸನದಲ್ಲಿರುವ ಮನೆ ಎದುರು ಹಗಲು-ರಾತ್ರಿ ಧರಣಿ ನಡೆಸುತ್ತಿದ್ದಾಳೆ.

ಘಟನೆ ಏನು?

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾಸರಗೋಡು ಮೂಲದ ಯುವತಿ ಹಾಗೂ ಹಾಸನ ಜಿಲ್ಲೆಯ ಕಲ್ಲೇಸೋಮನಹಳ್ಳಿಯ ಸೂರ್ಯ (26) ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ಐದು ತಿಂಗಳಿಂದ ಬೆಂಗಳೂರಿನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದ ಇವರ ಮದುವೆಗೆ ಸೂರ್ಯನ ಪೋಷಕರೂ ಆರಂಭದಲ್ಲಿ ಒಪ್ಪಿದ್ದರು. ಆದರೆ ನಂತರದ ದಿನಗಳಲ್ಲಿ ಸೂರ್ಯನ ಪೋಷಕರಾದ ರಾಜಕುಮಾರ್ ಮತ್ತು ಪ್ರೇಮ್‌ಕುಮಾರಿ ಯುವತಿ ಬೇರೆ ಜಾತಿಯವಳು ಎಂಬ ವಿಷಯವನ್ನಿಟ್ಟುಕೊಂಡು, ಅಲ್ಲದೆ ಸೂರ್ಯನ ಸ್ನೇಹಿತನ ಮಾತನ್ನು ನಂಬಿ ಮದುವೆಗೆ ನಿರಾಕರಿಸಿದ್ದರು.

ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ

ಪೋಷಕರ ಮಾತು ಕೇಳಿ ಸೂರ್ಯ ಆಫೀಸ್‌ಗೆ ಹೋದವನು ಸೆಪ್ಟೆಂಬರ್ 24 ರಿಂದ ತಲೆಮರೆಸಿಕೊಂಡಿದ್ದ. ಪ್ರಿಯಕರ ಕೈಕೊಟ್ಟಿದ್ದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ, ಚಿಕಿತ್ಸೆಯ ನಂತರ ಈಗ ನ್ಯಾಯಕ್ಕಾಗಿ ಹೋರಾಟಕ್ಕಿಳಿದಿದ್ದಾಳೆ. ಲೈಂಗಿಕ ದೌರ್ಜನ್ಯ ಎಸಗಿ ಮೋಸ ಮಾಡಿರುವ ಬಗ್ಗೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ ಅಂತರ್ಜಾತಿ ಮದುವೆಗೆ ಯುವಕನ ಪೋಷಕರ ವಿರೋಧ: ಪ್ರಿಯಕರ ಪರಾರಿ, ಲಿವ್-ಇನ್​ ಸಂಬಂಧದಲ್ಲಿದ್ದ ಯುವತಿಯಿಂದ ದೂರು ದಾಖಲು!

ಮನೆಗೆ ಬೀಗ ಹಾಕಿ ಪೋಷಕರೂ ಪರಾರಿ!

ಕಳೆದ ಅಕ್ಟೋಬರ್ 22 ರಂದು ಯುವತಿ ಚನ್ನರಾಯಪಟ್ಟಣಕ್ಕೆ ಆಗಮಿಸಿದ್ದಾಗ, ಗ್ರಾಮಾಂತರ ಪೊಲೀಸರು ಮಧ್ಯಪ್ರವೇಶಿಸಿ ಪೋಷಕರೊಂದಿಗೆ ಮಾತುಕತೆ ನಡೆಸಿದ್ದರು. ಭಾನುವಾರದೊಳಗೆ ಮಗನನ್ನು ಕರೆಸುವುದಾಗಿ ಹೇಳಿದ್ದ ಪೋಷಕರು, ಇದೀಗ ಮನೆಗೆ ಬೀಗ ಹಾಕಿ ತಲೆಮರೆಸಿಕೊಂಡಿದ್ದಾರೆ. ಇದರಿಂದ ಕಂಗಾಲಾದ ಯುವತಿ, ಮಳೆ, ಗಾಳಿಗೂ ಲೆಕ್ಕಿಸದೆ ಪ್ರಿಯಕರನ ಮನೆ ಮುಂಭಾಗವೇ ಧರಣಿ ಕುಳಿತಿದ್ದು, ಆಕ್ರೋಶ ವ್ಯಕ್ತಪಡಿಸುತ್ತಿದ್ದಾಳೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
Loading...
Unable to load recommendations.
Follow Us