ಹಾಸನ: ಜಿಲ್ಲೆಯ ಆಲೂರು ತಾಲೂಕಿನ ಚಂದ್ರು(17) ವಿದ್ಯಾರ್ಥಿ ಜನವರಿ 8 ರಂದು ಆಲೂರು ಸಮೀಪ ಕಾರು ಡಿಕ್ಕಿಯಾಗಿ ಗಾಯಗೊಂಡಿದ್ದ ಚಂದ್ರುಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದರು. ಇದೀಗ ಮೆದುಳು ನಿಷ್ಕ್ರಿಯ ಗೊಂಡಿದ್ದರಿಂದ ಪೋಷಕರಾದ ಹೊಲ್ಲಹಳ್ಳಿಯ ಸೋಮಶೇಖರ್ ಮೀನಾಕ್ಷಿ ದಂಪತಿ ಮಗನ ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ನಿನ್ನೆ(ಜ.13) ಬೆಂಗಳೂರಿನಲ್ಲಿ ಅಂಗಾಂಗ ದಾನ ಮಾಡಲಾಗಿದ್ದು, ಇಂದು ಆಲೂರಿನ ತಾಲೂಕು ಮೈದಾನದಲ್ಲಿ ತಾಲ್ಲೂಕಿನ ಜನತೆ ಅಗಲಿದ ವಿದ್ಯಾರ್ಥಿಗೆ ಅಂತಿಮ ನಮನ ಸಲ್ಲಿಸಲಿದ್ದಾರೆ. ಮಗನ ಸಾವಿನ ನೋವಿನಲ್ಲಿಯೂ ಅಂಗಾಗ ದಾನ ನಿರ್ಧಾರ ಮಾಡಿರುವುದು ನಿಜಕ್ಕೂ ಶ್ಲಾಘನೀಯ.
ಸಾರ್ವಜನಿಕ ಸ್ಥಳದಲ್ಲಿ ಏರ್ ಪಿಸ್ತೂಲ್ ನೋಡಿ ಬೆಚ್ಚಿಬಿದ್ದ ಜನ
ಕಲಬುರಗಿ: ಸಾರ್ವಜನಿಕ ಸ್ಥಳದಲ್ಲಿ ಏರ್ ಪಿಸ್ತೂಲ್ ನೋಡಿ ನಿಜವಾದ ಪಿಸ್ತೂಲ್ ಎಂದು ಭಾವಿಸಿ ಭಯಪಟ್ಟಿರುವ ಘಟನೆ ಕಲಬುರಗಿ ನಗರದ ಉದನೂರು ರಸ್ತೆ ಬಳಿ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಸಬ್ ಅರ್ಬನ್ ಠಾಣೆ ಪೊಲೀಸರು
ಪರಿಶೀಲನೆ ನಡೆಸಿದ ಮೇಲೆ ನಿಜವಾದ ಪಿಸ್ತೂಲ್ ಅಲ್ಲ, ಏರ್ ಪಿಸ್ತೂಲ್ ಎನ್ನುವುದು ಕನ್ಪರ್ಮ್ ಮಾಡಿದ ಮೇಲೆ ಸುತ್ತಮುತ್ತಲಿನ ಜನ ನಿರಾಳರಾಗಿದ್ದಾರೆ. ಕಳೆದ ರಾತ್ರಿ ಪಾರ್ಟಿ ಮಾಡಿ, ಏರ್ ಪಿಸ್ತೂಲ್ ಬಿಟ್ಟು ಹೋಗಿರುವ ಸಾಧ್ಯತೆಯಿದೆ ಎಂದಿದ್ದಾರೆ. ಇನ್ನು ಈ ಘಟನೆಯು ಸಬ್ ಅರ್ಬನ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ