ಹಾಸನ: ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಇಡೀ ದೇಶವನ್ನ ಲಾಕ್‌ಡೌನ್ ಮಾಡಲಾಗಿದೆ. ಕಟ್ಟು ನಿಟ್ಟಿನ ಆದೇಶಗಳನ್ನು ಸರ್ಕಾರ ಕೈಗೊಂಡಿದೆ. ಈ ನಡುವೆ ಜನ ರಸ್ತೆಗಿಳಿಯದಂತಾಗಿದೆ. ಎಲ್ಲೂ ಹೋಗಲಾಗದೆ. ಮನೆಯಲ್ಲೂ ಇರಲಾಗದಂತಹ ಪರಿಸ್ಥತಿ ಉಂಟಾಗಿದೆ. ಹೀಗಾಗಿ ಮನೆಯಲ್ಲೇ ಬಂಧಿಯಾದ ಜನರಿಗೆ ಮನೆಯಲ್ಲೇ ಸಮಯ ಕಳೆಯಲು ಶಾಸಕ ಪ್ರೀತಂಗೌಡ ಇನ್ ಡೋರ್ ಗೇಮ್ ಕಿಟ್ ವಿತರಣೆ ಮಾಡಿದ್ದಾರೆ.
ಶಾಸಕ ಪ್ರೀತಂಗೌಡ ಹಾಸನ ನಗರದ ವಿವಿಧ ಬಡಾವಣೆಗಳಿಗೆ ತೆರಳಿ ಚೆಸ್ ಬೋರ್ಡ್, ಹಾವು ಏಣಿ ಆಟ ಸೇರಿದಂತೆ ವಿವಿಧ ಬಗೆಯ ಮನೆಯಲ್ಲೇ ಕುಳಿತು ಆಡುವ ಆಟಗಳ ಬೋರ್ಡ್ ನೀಡಿದ್ದಾರೆ. ಆಟದ ಸಾಮಗ್ರಿ ಖರೀದಿಗೆ ಅಂಗಡಿಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಜನರಿಗೆ, ಮಕ್ಕಳಿಗೆ ಟೈಂ ಪಾಸ್ ಮಾಡಲು ಗೇಮ್ ಕಿಟ್ ವಿತರಿಸಿ ತಮ್ಮ ಲಾಕ್‌ಡೌನ್ ಸಮಯವನ್ನು ಕೊಂಚ ಆಟವಾಡುವ ಮೂಲಕ ಕಳೆಯಬಹುದು ಎಂದು ತಿಳಿಸಿದ್ದಾರೆ.
Published On - 3:06 pm, Mon, 27 April 20