AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mega Job Fair: ರಾಮನಗರದಲ್ಲಿ ಮಾ. 5ರಂದು ಬೃಹತ್ ಉದ್ಯೋಗ ಮೇಳ; ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ

ಬೆಂಗಳೂರು ದಕ್ಷಿಣ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶವೊಂದು ಬಂದಿದೆ. ರಾಮನಗರ ಜಿಲ್ಲಾಡಳಿತದ ವತಿಯಿಂದ ಮಾರ್ಚ್ 5 ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. 200ಕ್ಕೂ ಹೆಚ್ಚು ಕಂಪನಿಗಳಿಂದ 20,000ಕ್ಕೂ ಅಧಿಕ ಉದ್ಯೋಗಾವಕಾಶಗಳು ಲಭ್ಯ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ ಸೇರಿದಂತೆ ಎಲ್ಲಾ ವಿದ್ಯಾರ್ಹತೆಗಳಿಗೂ ಅವಕಾಶವನ್ನು ಕಲ್ಪಿಸಲಾಗಿದೆ.

Mega Job Fair: ರಾಮನಗರದಲ್ಲಿ ಮಾ. 5ರಂದು ಬೃಹತ್ ಉದ್ಯೋಗ ಮೇಳ; ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ
ಉದ್ಯೋಗ ಮೇಳ
ಪ್ರಶಾಂತ್​ ಬಿ.
| Edited By: |

Updated on: Mar 03, 2026 | 10:55 AM

Share

ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ ಒದಗಿಸುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಮಾರ್ಚ್ 5ರ ಗುರುವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ರಾಮನಗರ ಟೌನ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಈ ಮಹತ್ವದ ಮೇಳ ನಡೆಯಲಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 171 ಕಂಪನಿಗಳು ನೋಂದಾಯಿಸಿಕೊಂಡಿದ್ದು, ಸುಮಾರು 200ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಒಟ್ಟಾರೆ 20,000ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿದ್ದು, ವಿವಿಧ ವಿದ್ಯಾರ್ಹತೆಗಳಿಗೆ ತಕ್ಕಂತೆ ಉದ್ಯೋಗಗಳನ್ನು ನೀಡಲಾಗುತ್ತಿದೆ.

ಉತ್ಪಾದನಾ ವಲಯ, ಬ್ಯಾಂಕಿಂಗ್ ಕ್ಷೇತ್ರ, ಮಾರಾಟ, ಮಾಹಿತಿ ತಂತ್ರಜ್ಞಾನ, ಗಾರ್ಮೆಂಟ್ಸ್, ಸೇವಾ ಹಾಗೂ ಪ್ರವಾಸೋದ್ಯಮ, ಹಣಕಾಸು ಮತ್ತು ನಿರ್ವಹಣಾ ಕ್ಷೇತ್ರ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಅವಕಾಶಗಳಿವೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಉತ್ತೀರ್ಣ/ಅನುತ್ತೀರ್ಣರಿಗೆ 1,221, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪಾಸ್ ಅಭ್ಯರ್ಥಿಗಳಿಗೆ 3,118, ಐಟಿಐ 3,482, ಡಿಪ್ಲೊಮಾ (ಮೆಕ್ಯಾನಿಕಲ್/ಎಲೆಕ್ಟ್ರಿಕಲ್) 503, ಐಟಿಐ ಮತ್ತು ಡಿಪ್ಲೊಮಾ 2,793, ಪದವಿ ಹಾಗೂ ಸ್ನಾತಕೋತ್ತರ ಪದವೀಧರರಿಗೆ ನೂರಾರು ಅವಕಾಶಗಳು ಸೇರಿದಂತೆ ವಿವಿಧ ವಿದ್ಯಾರ್ಹತೆಗಳಿಗೆ ಸಾವಿರಾರು ಉದ್ಯೋಗಗಳು ಲಭ್ಯವಿವೆ.

ಇದನ್ನೂ ಓದಿ: ನಿರುದ್ಯೋಗಿಗಳಿಗೆ ಗುಡ್​ನ್ಯೂಸ್​​; ನಿಮ್ಮದೇ ಜಿಲ್ಲೆಯ ಆಧಾರ್ ಕೇಂದ್ರಗಳಲ್ಲಿ ಉದ್ಯೋಗವಕಾಶ

18 ವರ್ಷ ಮೇಲ್ಪಟ್ಟ ಯಾವುದೇ ವಿದ್ಯಾರ್ಹತೆಯ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ನೇರ ಸಂದರ್ಶನದ ಮೂಲಕ ಉದ್ಯೋಗ ಪಡೆಯಬಹುದು. ಆಸಕ್ತರು ಗೂಗಲ್ ಫಾರ್ಮ್ ಮೂಲಕ ಪೂರ್ವ ನೋಂದಣಿ ಮಾಡಿಕೊಳ್ಳಬಹುದಾಗಿದೆ. ನೋಂದಣಿ ಮಾಡದವರೂ ಮೇಳದ ದಿನದಂದು ನೇರವಾಗಿ ಹಾಜರಾಗಿ ಸಂದರ್ಶನಕ್ಕೆ ಅವಕಾಶ ಪಡೆಯಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್ ಜೈನ್ ಕೂಡ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಈ ಮೇಳವು ಜಿಲ್ಲೆಯ ಯುವಜನತೆಗೆ ಉದ್ಯೋಗದ ದಾರಿಯನ್ನು ತೆರೆದಿಡುವ ಮಹತ್ವದ ಗುರಿಯನ್ನು ಹೊಂದಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರವಿ ಬೆಳೆಗೆರೆ ಕಥೆಗೂ ಇದಕ್ಕೂ ಸಂಬಂಧವಿಲ್ಲ ಎಂದ ಓಂ ಪ್ರಕಾಶ್ ರಾವ್
ರವಿ ಬೆಳೆಗೆರೆ ಕಥೆಗೂ ಇದಕ್ಕೂ ಸಂಬಂಧವಿಲ್ಲ ಎಂದ ಓಂ ಪ್ರಕಾಶ್ ರಾವ್
ಎಂಜಾಯ್ ಮಾಡ್ತಿರುವಾಗ್ಲೇ ದಾಳಿ: ಯುದ್ಧದ ಭಯಾನಕತೆ ಬಿಚ್ಚಿಟ್ಟ ಕನ್ನಡಿಗ
ಎಂಜಾಯ್ ಮಾಡ್ತಿರುವಾಗ್ಲೇ ದಾಳಿ: ಯುದ್ಧದ ಭಯಾನಕತೆ ಬಿಚ್ಚಿಟ್ಟ ಕನ್ನಡಿಗ
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ಇಂದು ಈ ರಾಶಿಯವರು ಅನುಮಾನಗಳಿಗೆ ಆಸ್ಪದ ನೀಡಬೇಡಿ
ಇಂದು ಈ ರಾಶಿಯವರು ಅನುಮಾನಗಳಿಗೆ ಆಸ್ಪದ ನೀಡಬೇಡಿ
ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?
ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?
‘ಜೂನ್, ಜುಲೈ ಒಳಗೆ ದರ್ಶನ್ ರಿಲೀಸ್’: ಭವಿಷ್ಯ ನುಡಿದ ಓಂ ಪ್ರಕಾಶ್ ರಾವ್
‘ಜೂನ್, ಜುಲೈ ಒಳಗೆ ದರ್ಶನ್ ರಿಲೀಸ್’: ಭವಿಷ್ಯ ನುಡಿದ ಓಂ ಪ್ರಕಾಶ್ ರಾವ್
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ