ಹಾಸನ: ತೆಲಂಗಾಣದಲ್ಲಿ ಸಿಲಿಂಡರ್ ಸ್ಪೋಟಗೊಂಡು (cylinder explosive) ಗಂಭೀರ ಗಾಯಗೊಂಡ ಜಿಲ್ಲೆಯ ಸಕಲೇಶಪುರ ಮೂಲದ ಕಾರ್ಮಿಕನಿಗೆ ಚಿಕಿತ್ಸೆ ಕೊಡಿಸದೆ ಬೇಕರಿ ಮಾಲೀಕ ಅಮಾನವೀಯತೆ ತೋರಿರುವಂತಹ ಘಟನೆ ಒಂದು ಬೆಳಕಿದೆ ಬಂದಿದೆ. ಅಭಿ ಗಾಯಗೊಂಡಿರುವ ಯುವಕ. ಹಾಲ್ತೋರೆ ಗ್ರಾಮದ ನಿವಾಸಿ ಪ್ರತಾಪ್‌ಗೌಡ ಮಾಲೀಕತ್ವದ ಬೇಕರಿಯಲ್ಲಿ ಯುವಕ ಕೆಲಸ ಮಾಡುತ್ತಿದ್ದ. ಅಭಿಯನ್ನು ತನ್ನ ಬೇಕರಿಯಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದ. ಜೂನ್ 2ರಂದು ಬೇಕರಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಅಭಿಗೆ ಗಂಭೀರವಾಗಿ ಗಾಯಗೊಂಡಿದ್ದು, 5 ಸಾವಿರ ಹಣ ನೀಡಿದ್ದ. ನಂತರ ಅಭಿಯನ್ನು ಬಲವಂತವಾಗಿ ಊರಿಗೆ ಕಳಿಸಿದ್ದ.
ಸದ್ಯ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಯುವಕ ಅಭಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಊಟ, ತಿಂಡಿ, ಔಷಧಿಗೆ ಹಣವಿಲ್ಲದೆ ಪರದಾಡುತ್ತಿದ್ದು, ನೆರವಿಗೆ ಬಾರದ ಬೇಕರಿ ಮಾಲೀಕ ಪ್ರತಾಪ್ ಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಚಿಕಿತ್ಸಾ ವೆಚ್ಚ, ಪರಿಹಾರ ಕೊಡಿಸುವಂತೆ ಅಭಿ ಕಣ್ಣೀರು ಹಾಕಿದ್ದಾನೆ.
ಇದನ್ನೂ ಓದಿ: Chamarajanagar News: ಆಕಸ್ಮಿಕ ಬೆಂಕಿ ಅವಘಡ, ಹೊತ್ತಿ ಉರಿದ ಶಾಲೆ: ಪಠ್ಯ ಪುಸ್ತಕ, ಡೆಸ್ಕ್ ಬೆಂಕಿಗಾಹುತಿ
ಹಾಸನದ ಹರ್ಷಮಹಲ್ ರಸ್ತೆಯಲ್ಲಿರುವ 8 ವರ್ಷಗಳಿಂದ ಹಾಸನದ ಬಾಲ ಮಂದಿರದಲ್ಲಿ ಆಶ್ರಯ ಪಡೆದಿರುವ ಅಭಿ, ಎರಡು ತಿಂಗಳ ಹಿಂದಷ್ಟೇ ತೆಲಂಗಾಣದಲ್ಲಿ ಬೇಕರಿ ಕೆಲಸಕ್ಕೆ ಸೇರಿದ್ದ.
ಚಾಮರಾಜನಗರ: ಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದ ಕರ್ನಾಟಕ ಪಬ್ಲಿಕ್ ಶಾಲೆ ಹೊತ್ತಿ ಉರಿದಿರುವಂತಹ ಘಟನೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಡೆದಿದೆ. ಕಿಡಿಗೇಡಿಗಳಿಂದ ಸಿಗರೇಟ್ ಸೇದಿ ಶಾಲೆಯೊಳಗೆ ಬೀಸಾಡಿರುವ ಶಂಕೆ ವ್ಯಕ್ತವಾಗಿದ್ದು, ಪಠ್ಯ ಪುಸ್ತಕ, ಡೆಸ್ಕ್, ಕೊಠಡಿ, ಕಿಟಕಿ ಬಾಗಿಲುಗಳು ಬೆಂಕಿಗಾಹುತಿ ಆಗಿವೆ. ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಇದನ್ನೂ ಓದಿ: ಆನೇಕಲ್: ಅಣು ಬಾಂಬ್ನಂತೆ ಸಿಡಿದ ಗ್ಯಾಸ್ ಸಿಲಿಂಡರ್; ಸ್ಫೋಟದ ಶಬ್ದಕ್ಕೆ ಬೆಚ್ಚಿ ಬಿದ್ದ ಬಡಾವಣೆ ಜನ!
ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಬಳಿ ವರವು ಕಾವಲು ಅರಣ್ಯದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಹಲವು ಗಿಡ, ಮರಗಳು ಬೆಂಕಿಗಾಹುತಿಯಾಗಿದೆ. ತಡರಾತ್ರಿವರೆಗೆ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:49 pm, Wed, 7 June 23