ಗಜ ಗಾಂಭೀರ್ಯ ನಡೆಗೆ ಅಡ್ಡ ಬರ್ತೀಯಾ? ರಸ್ತೆಯಲ್ಲಿ ಕಾಡಾನೆಗಳ ಕಾದಾಟ

|

Updated on: Apr 20, 2020 | 1:42 PM

ಹಾಸನ: ಎರಡು ಕಾಡಾನೆಗಳು ಪರಸ್ಪರ ಮುಖಾಮುಖಿಯಾಗಿ ಕಾಳಗ ನಡೆಸಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಇಬ್ಬಡಿ ಸುಳ್ಳಕ್ಕಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕಾಫಿತೋಟದ ರಸ್ತೆಯಲ್ಲಿ ಮದಗಜಗಳು ಕಾದಾಡಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಫಿತೋಟದ ರಸ್ತೆಯಲ್ಲಿ ಎರಡು ಗುಂಪುಗಳ ಆನೆ ಹಿಂಡು ಸಡನ್ ಆಗಿ ಮುಖಾಮುಖಿಯಾಗಿವೆ. ಈ ನಡುವೆ ಗಜ ಗಾಂಭೀರ್ಯ ನಡೆಗೆ ಧಕ್ಕೆಯಾಗಿದೆ. ನನ್ನ ದಾರಿಗೆ ಅಡ್ಡ ಬಂದೆಯಾ? ಎಂದು ಎರಡು ಬಲಿಷ್ಠ ಆನೆಗಳು ಫೈಟಿಂಗ್ ಶುರು ಮಾಡಿವೆ. ನಂತರ ತಮಗೆ ತಾವೇ ಸಮಾಧಾನ […]

ಗಜ ಗಾಂಭೀರ್ಯ ನಡೆಗೆ ಅಡ್ಡ ಬರ್ತೀಯಾ? ರಸ್ತೆಯಲ್ಲಿ ಕಾಡಾನೆಗಳ ಕಾದಾಟ
Follow us on

ಹಾಸನ: ಎರಡು ಕಾಡಾನೆಗಳು ಪರಸ್ಪರ ಮುಖಾಮುಖಿಯಾಗಿ ಕಾಳಗ ನಡೆಸಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಇಬ್ಬಡಿ ಸುಳ್ಳಕ್ಕಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕಾಫಿತೋಟದ ರಸ್ತೆಯಲ್ಲಿ ಮದಗಜಗಳು ಕಾದಾಡಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾಫಿತೋಟದ ರಸ್ತೆಯಲ್ಲಿ ಎರಡು ಗುಂಪುಗಳ ಆನೆ ಹಿಂಡು ಸಡನ್ ಆಗಿ ಮುಖಾಮುಖಿಯಾಗಿವೆ. ಈ ನಡುವೆ ಗಜ ಗಾಂಭೀರ್ಯ ನಡೆಗೆ ಧಕ್ಕೆಯಾಗಿದೆ. ನನ್ನ ದಾರಿಗೆ ಅಡ್ಡ ಬಂದೆಯಾ? ಎಂದು ಎರಡು ಬಲಿಷ್ಠ ಆನೆಗಳು ಫೈಟಿಂಗ್ ಶುರು ಮಾಡಿವೆ. ನಂತರ ತಮಗೆ ತಾವೇ ಸಮಾಧಾನ ಮಾಡಿಕೊಂಡು ಮಂದೆ ಸಾಗಿವೆ.  ಕಾದಾಟದ ವೇಳೆ ತೋಟ ಹಾಳಾಗಿದ್ದು, ಕೊಂಚ ಬೆಳೆ ನಾಶವಾಗಿದೆ. ಆನೆಗಳ ಕಾದಾಟದ ವಿಡಿಯೋ ಸ್ಥಳೀಯರ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ಆನೆ ಜಗಳ ಕೆಲ ಕಾಲ ಜನರಲ್ಲಿ ಆತಂಕ ಸೃಷ್ಟಿಸಿತ್ತು.

Published On - 1:12 pm, Mon, 20 April 20