Organ Donation: ಪುತ್ರನ ಸಾವಿನಲ್ಲೂ ಸಾರ್ಥಕತೆ ಮೆರೆದ ಹಾಸನದ ಕುಟುಂಬ: ಅಪಘಾತದಲ್ಲಿ ಮೃತಪಟ್ಟ ಮಗನ ಅಂಗಾಂಗ ದಾನ

| Updated By: ಸಾಧು ಶ್ರೀನಾಥ್​

Updated on: Sep 28, 2022 | 2:39 PM

Hassan: ಹೊಳೆನರಸೀಪುರ ತಾಲ್ಲೂಕಿನ ತಿರುಮಲಾಪುರ ಗ್ರಾಮದ ಸಂಪತ್ ಕುಟುಂಬಸ್ಥರು ತಮ್ಮ ಪುತ್ರನ ಕಣ್ಣು, ಕಿಡ್ನಿ, ಲಿವರ್ ಮತ್ತು ಹೃದಯ ಸೇರಿ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.

Organ Donation: ಪುತ್ರನ ಸಾವಿನಲ್ಲೂ ಸಾರ್ಥಕತೆ ಮೆರೆದ ಹಾಸನದ ಕುಟುಂಬ: ಅಪಘಾತದಲ್ಲಿ ಮೃತಪಟ್ಟ ಮಗನ ಅಂಗಾಂಗ ದಾನ
ಪುತ್ರನ ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ: ಅಪಘಾತದಲ್ಲಿ ಮೃತ ಮಗನ ಅಂಗಾಂಗ ದಾನ
Follow us on

ಹಾಸನ- ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯ ಗೊಂಡ ಮಗನ ಅಂಗಾಂಗ ದಾನ (Organ Donation) ಮಾಡಿರುವ ಕುಟುಂಬವೊಂದು ಪುತ್ರನ ಸಾವಿನಲ್ಲಿ ಸಾರ್ಥಕತೆ ಮೆರೆದಿದೆ. ಹಾಸನದಲ್ಲಿ ನಿನ್ನೆ ಬೈಕ್ ನಲ್ಲಿ ತೆರಳುವ ವೇಳೆ ಅಪಘಾತವಾಗಿತ್ತು. ಹಾಸನ ಜಿಲ್ಲೆ (Hassan) ಹೊಳೆನರಸೀಪುರ ತಾಲ್ಲೂಕಿನ ತಿರುಮಲಾಪುರ ಗ್ರಾಮದ ಯುವಕ ಸಾಗರ್ (22) ತೀವ್ರವಾಗಿ ಗಾಯಗೊಂಡಿದ್ದ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಾಗರ್ ಮೆದುಳು ನಿಷ್ಕ್ರಿಯ ಗೊಂಡಿತ್ತು. ಹಾಗಾಗಿ ಸಾಗರ್ ಅವರ ತಂದೆ ಸಂಪತ್ ತಮ್ಮ ಪುತ್ರನ ಅಂಗಾಂಗ ದಾನ ಮಾಡಲು ನಿರ್ಧರಿಸಿದರು.

ಸಂಪತ್ ಕುಟುಂಬಸ್ಥರು ತಮ್ಮ ಪುತ್ರನ ಕಣ್ಣು, ಕಿಡ್ನಿ, ಲಿವರ್ ಮತ್ತು ಹೃದಯ ಸೇರಿ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಮೃತ ಸಾಗರ್ ಅಂಗಾಂಗಗಳನ್ನು ಬೆಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾನ ಮಾಡಲಾಗಿದೆ. ಸಾಗರ್ ಅಂತ್ಯಕ್ರಿಯೆ ಇಂದು ಸ್ಚಗ್ರಾಮ ಹೊಳೆನರಸೀಪುರ ತಾಲ್ಲೂಕಿನ ತಿರುಮಲಾಪುರದಲ್ಲಿ ನೆರವೇರಿತು.

Published On - 2:37 pm, Wed, 28 September 22