ಹಾಸನ: ಗ್ರಾಮದ ರಸ್ತೆ ಕಾಮಗಾರಿಗೆ ಒತ್ತಾಯಿಸಿ ಪ್ರಧಾನಿ ಮೋದಿಗೆ ಪತ್ರ ಬರೆದ ಗ್ರಾಮಸ್ಥರು

| Updated By: ವಿವೇಕ ಬಿರಾದಾರ

Updated on: Feb 03, 2023 | 2:48 PM

ಗ್ರಾಮದ ರಸ್ತೆ ಕಾಮಗಾರಿಗೆ ಒತ್ತಾಯಿಸಿ ಜಿಲ್ಲೆಯ ಸಕಲೇಶಪುರ ತಾಲೂಕಿನ ನೆಲಗಹಳ್ಳಿ ಗ್ರಾಮಸ್ಥರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಹಾಸನ: ಗ್ರಾಮದ ರಸ್ತೆ ಕಾಮಗಾರಿಗೆ ಒತ್ತಾಯಿಸಿ ಪ್ರಧಾನಿ ಮೋದಿಗೆ ಪತ್ರ ಬರೆದ ಗ್ರಾಮಸ್ಥರು
ಗ್ರಾಮದ ರಸ್ತೆ ಕಾಮಗಾರಿಗೆ ಒತ್ತಾಯಿಸಿ ಪ್ರಧಾನಿ ಮೋದಿಗೆ ಟ್ವೀಟ್​​
Follow us on

ಹಾಸನ: ಗ್ರಾಮದ ರಸ್ತೆ ಕಾಮಗಾರಿಗೆ ಒತ್ತಾಯಿಸಿ ಜಿಲ್ಲೆಯ ಸಕಲೇಶಪುರ ತಾಲೂಕಿನ ನೆಲಗಹಳ್ಳಿ ಗ್ರಾಮಸ್ಥರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಕಳೆದೊಂದು ದಶಕದಿಂದ ರಸ್ತೆ ಹಾಳಾಗಿ ಗ್ರಾಮಸ್ಥರು ಪರದಾಡುತ್ತಿದ್ದಾರೆ. ನೆಲಗಹಳ್ಳಿ ಗ್ರಾಮದಲ್ಲಿ 70 ಕುಟುಂಬದ 200 ಜನ ವಾಸಿಸುತ್ತಿದ್ದು, ಗ್ರಾಮಕ್ಕೆ ಸರಿಯಾದ ರಸ್ತೆ ಸೌಲಭ್ಯ ನೀಡುವಂತೆ ಒತ್ತಾಯಿಸಿದ್ದಾರೆ. ಗ್ರಾಮಸ್ಥರು ಹಾಳಾದ ರಸ್ತೆ ಫೋಟೋ, ವಿಡಿಯೋ ಟ್ವೀಟ್​ ಮಾಡಿ, ಪ್ರಧಾನಿ ಮೋದಿ ಅವರ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿದ್ದಾರೆ.

ಹಾಕಿ ಒಂದೇ ದಿನದೊಳಗೆ ಕಿತ್ತು ಬಂದ ರಸ್ತೆ ಡಾಂಬರ

ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನ ದುಮ್ಮಸಂದ್ರ ಗ್ರಾಮದಲ್ಲಿ ಕಳಪೆ ರಸ್ತೆ ಕಾಮಗಾರಿ ನಡೆದಿದ್ದು, ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುಮ್ಮಸಂದ್ರ-ಬೆಳ್ಳೂರಿಗೆ ಸಂಪರ್ಕ ಕಲ್ಪಿಸುವ 4 ಕಿಲೋ ಮೀಟರ್ ರಸ್ತೆಗೆ ಹಾಕಿದ ಡಾಂಬರು ಒಂದೇ ದಿನದೊಳಗೆ ಕಿತ್ತು ಬಂದಿದೆ. ಗುತ್ತಿಗೆದಾರ ಕಾಮಗಾರಿಗೆ ಜಲ್ಲಿ ಬಳಸದೆ ಬರೀ ಡಾಂಬಾರು ಹಾಕಿದ್ದಾನೆ. ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಸಿದ್ದಾರೆ. ಮತ್ತು ಸೂಕ್ತ ರಸ್ತೆ ನಿರ್ಮಾಣ ಮಾಡಿ ಕೊಡುವಂತೆ ಪಟ್ಟು ಹಿಡಿದಿದ್ದಾರೆ.

ಒಂದು ವರ್ಷದಿಂದ ನೆನೆಗುದಿಗೆ ಬಿದ್ದ 60 ಅಡಿ ರಸ್ತೆ ಕಾಮಗಾರಿ

ಮೈಸೂರು: ಮೈಸೂರಿನ ನಂಜನಗೂಡಿನ 2 ಕಟ್ಟಡಕ್ಕಾಗಿ 60 ಅಡಿ ಹೌಸಿಂಗ್ ಬೋರ್ಡ್ ರಸ್ತೆ ಕಾಮಗಾರಿ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿದೆ. 1 ಕೋಟಿ 30 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ. ಸುಮಾರು ಒಂದು ವರೆ ಕಿಲೋ ಮೀಟರ್ ರಸ್ತೆ ಇದಾಗಿದೆ. ಮಾಜಿ ನಗರ ಸಭಾ ಸದಸ್ಯೆ ಹಾಗೂ ಅರುಣ್ ಎಂಬುವವರಿಗೆ ಸೇರಿದ ಕಟ್ಟಡ ಇದಾಗಿದ್ದು, ಅಧಿಕಾರಿಗಳು ಜನಪ್ರತಿನಿಧಿಗಳಾಗಲಿ ಕ್ರಮ ಕೈಗೊಂಡಿಲ್ಲ. ಈಗ ಅಧಿಕಾರಿಗಳು ಅವರಿಗೋಸ್ಕರ 40 ಅಡಿ ರಸ್ತೆ ಮಾಡಲು ಮುಂದಾಗಿದ್ದರು. ಸಾರ್ವಜನಿಕರ ವಿರೋಧದ ನಂತರ ಅದನ್ನು ಅಧಿಕಾರಿಗಳು ಕೈ ಬಿಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:42 pm, Fri, 3 February 23