ಕೆರೆ ನೀರಿನಲ್ಲಿ ಒಂಟಿ ಸಲಗ ಚೆಲ್ಲಾಟ: ಗಜರಾಜನ ಆರ್ಭಟಕ್ಕೆ ಹಳೆಬೀಡು ಮಂದಿ ಪರದಾಟ

|

Updated on: Feb 04, 2020 | 5:44 PM

ಹಾಸನ: ಬೇಲೂರು ತಾಲೂಕಿನ ಹಳೆಬೀಡಿನ ದ್ವಾರಸಮುದ್ರ ಕೆರೆಯಲ್ಲಿ ನಿನ್ನೆ ದಿಢೀರ್ ಅಂತಾ ಈ ಒಂಟಿ ಸಲಗ ಪ್ರತ್ಯಕ್ಷವಾಗಿತ್ತು. ತುಂಬಿದ ಕೆರೆಯಲ್ಲಿ ಅತ್ತಿಂದಿತ್ತ, ಇತ್ತಿಂದತ್ತ ಓಡಾಡ್ತಿತ್ತು. ಆದ್ರೆ ಆನೆಯ ಎಂಟ್ರಿಯಿಂದ ಊರೂರೇ ದಿಗಿಲಾಗಿತ್ತು. ಯಾಕಂದ್ರೆ ಆನೆ ಎಲ್ಲಿ ಹೊರ ಬಂದು ಊರೊಳಗೆ ನುಗ್ಗುತ್ತೋ ಎನ್ನೋ ಆತಂಕದಲ್ಲಿದ್ರು. ಗ್ರಾಮಕ್ಕೆ ನುಗ್ಗಿ ಎಲ್ಲಿ ದಾಳಿ ಮಾಡುತ್ತೋ ಅಂತಾ ಭಯ ಪಡ್ತಿದ್ರು. ಇತಿಹಾಸದಲ್ಲೇ ಮೊದಲ ಬಾರಿಗೆ ಕಾಡಾನೆ ಎಂಟ್ರಿ: ಇನ್ನು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಳೆಬೀಡು ಗ್ರಾಮಕ್ಕೆ ಕಾಡಾನೆ ಎಂಟ್ರಿ ಕೊಟ್ಟಿತ್ತು. […]

ಕೆರೆ ನೀರಿನಲ್ಲಿ ಒಂಟಿ ಸಲಗ ಚೆಲ್ಲಾಟ: ಗಜರಾಜನ ಆರ್ಭಟಕ್ಕೆ ಹಳೆಬೀಡು ಮಂದಿ ಪರದಾಟ
Follow us on

ಹಾಸನ: ಬೇಲೂರು ತಾಲೂಕಿನ ಹಳೆಬೀಡಿನ ದ್ವಾರಸಮುದ್ರ ಕೆರೆಯಲ್ಲಿ ನಿನ್ನೆ ದಿಢೀರ್ ಅಂತಾ ಈ ಒಂಟಿ ಸಲಗ ಪ್ರತ್ಯಕ್ಷವಾಗಿತ್ತು. ತುಂಬಿದ ಕೆರೆಯಲ್ಲಿ ಅತ್ತಿಂದಿತ್ತ, ಇತ್ತಿಂದತ್ತ ಓಡಾಡ್ತಿತ್ತು. ಆದ್ರೆ ಆನೆಯ ಎಂಟ್ರಿಯಿಂದ ಊರೂರೇ ದಿಗಿಲಾಗಿತ್ತು. ಯಾಕಂದ್ರೆ ಆನೆ ಎಲ್ಲಿ ಹೊರ ಬಂದು ಊರೊಳಗೆ ನುಗ್ಗುತ್ತೋ ಎನ್ನೋ ಆತಂಕದಲ್ಲಿದ್ರು. ಗ್ರಾಮಕ್ಕೆ ನುಗ್ಗಿ ಎಲ್ಲಿ ದಾಳಿ ಮಾಡುತ್ತೋ ಅಂತಾ ಭಯ ಪಡ್ತಿದ್ರು.

ಇತಿಹಾಸದಲ್ಲೇ ಮೊದಲ ಬಾರಿಗೆ ಕಾಡಾನೆ ಎಂಟ್ರಿ:
ಇನ್ನು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಳೆಬೀಡು ಗ್ರಾಮಕ್ಕೆ ಕಾಡಾನೆ ಎಂಟ್ರಿ ಕೊಟ್ಟಿತ್ತು. ಹೀಗಾಗಿ ಮಾಹಿತಿ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಆನೆ ಓಡಿಸಲು ಕಾರ್ಯಾಚರಣೆ ಶುರು ಮಾಡಿದ್ರು. ಬಿದಿರೆಕೆರೆ, ಮಾಯಗೊಂಡನಹಳ್ಳಿ, ಸೊಪ್ಪಿನಹಳ್ಳಿ ಮಾರ್ಗವಾಗಿ ಬಂದು ಕೆರೆ ಸೇರಿದ್ದ ಈ ಆನೆಯನ್ನ ನೋಡೋಕೆ ಜನ ಕೂಡ ಸೇರಿದ್ರು. ಹೀಗಾಗಿ ಅರಣ್ಯ ಇಲಾಖೆ ಪಟಾಕಿ ಸಿಡಿಸಿ, ರಬ್ಬರ್ ಬುಲೆಟ್ ಹೊಡೆದು ಆನೆ ಕೆರೆಯಿಂದ ಹೊರ ಬರದಂತೆ ನೋಡಿಕೊಂಡ್ರು.

ಇನ್ನು ದಿನವಿಡೀ ಆನೆ ಹೊರಬರದಂತೆ ಕಾದ ಅಧಿಕಾರಿಗಳು ಸಂಜೆ ವೇಳೆಗೆ ಆನೆಯನ್ನ ಮರಳಿ ಕಾಡಿಗಟ್ಟುವಲ್ಲಿ ಯಶಸ್ವಿಯಾದ್ರು. ಅದೇನೆ ಇರ್ಲಿ, ಸಾಕಿರೋ ಆನೆ ಕಂಡ್ರೆನೇ ಭಯ ಬೀಳೋ ಜನ ಕಾಡಾನೆ ಕಂಡ್ರೆ ಕೇಳ್ಬೇಕಾ. ಹೀಗಾಗಿ ಅಧಿಕಾರಿಗಳು ಆನೆಯನ್ನ ಕಾಡಿಗಟ್ಟಲು ಯಶಸ್ವಿಯಾಗಿದ್ರೂ ಆತಂಕ ಮಾತ್ರ ತಪ್ಪಿಲ್ಲ.