ಹಾಸನ: ಚಲಿಸುತ್ತಿದ್ದ KSRTC ಬಸ್ನಲ್ಲೇ ಮಹಿಳೆಯೊಬ್ಬರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಡರಾತ್ರಿ ಮಡಿಕೇರಿಯಿಂದ ಹುಬ್ಬಳ್ಳಿಗೆ ತೆರಳುವ ಸರ್ಕಾರಿ ಬಸ್ನಲ್ಲಿ ಗರ್ಭಿಣಿ ಮಹಿಳೆ ಪ್ರಯಾಣ ಮಾಡುತ್ತಿದ್ದರು. ಹಾಸನದ ಸರ್ಕಾರಿ ಬಸ್ ನಿಲ್ದಾಣದ ಸಮೀಪ ಹಂಪ್ ದಾಟಿ ಬರುವ ವೇಳೆ ಬಸ್ನಲ್ಲೇ ಮಹಿಳೆಗೆ ಹೆರಿಗೆಯಾಗಿದೆ.
ಹಾಸನ ಸರ್ಕಾರಿ ಬಸ್ ನಿಲ್ದಾಣದಲ್ಲಿರುವ 3-4 ಹಂಪ್ ನೆಗೆದ ವೇಗಕ್ಕೆ KSRTC ಬಸ್ನಲ್ಲೇ ಸಬೀನಾ ಎಂಬುವರು ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ಆಂಬುಲೆನ್ಸ್ ಮೂಲಕ ತಾಯಿ ಹಾಗೂ ಮಗುವನ್ನು ಹಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
Published On - 10:13 am, Wed, 19 February 20