ಖಾಕಿ ವಿರುದ್ಧ ಕೊರೊನಾ ಅಟ್ಟಹಾಸ, ಮೂರು ಠಾಣೆಗಳು ಸೀಲ್​ಡೌನ್

| Updated By:

Updated on: Jul 27, 2020 | 10:24 PM

ಹಾವೇರಿ: ಮಹಾಮಾರಿ ಕೊರೊನಾ ವೈರಸ್ ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್​ಗಳನ್ನ ಬೆನ್ನು ಬಿಡದೆ ಕಾಡ್ತಿದೆ. ಕೊರೊನಾ ವಿರುದ್ಧ ಹೋರಾಡಲು ನಿಂತವರ ಕೈಕಟ್ಟಿ ಹಾಕಿದೆ. ಹಾವೇರಿ ಜಿಲ್ಲೆಯ ಕುಮಾರಪಟ್ಟಣ, ಹಿರೇಕೆರೂರು, ಕಾಗಿನೆಲೆ ಮತ್ತು ಹಾವೇರಿ ಸಂಚಾರಿ ಠಾಣೆಗೆ ಹೆಮ್ಮಾರಿ ಕೊರೊನಾ ವಕ್ಕರಿಸಿದೆ. ಹಿರೇಕೆರೂರು ಪೊಲೀಸ್ ಠಾಣೆಯ ಐವರು ಕಾನ್ಸ್ಟೇಬಲ್​ಗಳು, ಹಾವೇರಿ ಸಂಚಾರಿ ಠಾಣೆಯ ಓರ್ವ ಕಾನ್ಸ್ಟೇಬಲ್, ಕಾಗಿನೆಲೆ ಪೊಲೀಸ್ ಠಾಣೆಯ ಓರ್ವ ಕಾನ್ಸ್ಟೇಬಲ್ ಹಾಗೂ ಕುಮಾರಪಟ್ಟಣ ಪೊಲೀಸ್ ಠಾಣೆಯ ಓರ್ವ ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಕುಮಾರಪಟ್ಟಣ, ಹಿರೇಕೆರೂರು […]

ಖಾಕಿ ವಿರುದ್ಧ ಕೊರೊನಾ ಅಟ್ಟಹಾಸ, ಮೂರು ಠಾಣೆಗಳು ಸೀಲ್​ಡೌನ್
Follow us on

ಹಾವೇರಿ: ಮಹಾಮಾರಿ ಕೊರೊನಾ ವೈರಸ್ ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್​ಗಳನ್ನ ಬೆನ್ನು ಬಿಡದೆ ಕಾಡ್ತಿದೆ. ಕೊರೊನಾ ವಿರುದ್ಧ ಹೋರಾಡಲು ನಿಂತವರ ಕೈಕಟ್ಟಿ ಹಾಕಿದೆ.

ಹಾವೇರಿ ಜಿಲ್ಲೆಯ ಕುಮಾರಪಟ್ಟಣ, ಹಿರೇಕೆರೂರು, ಕಾಗಿನೆಲೆ ಮತ್ತು ಹಾವೇರಿ ಸಂಚಾರಿ ಠಾಣೆಗೆ ಹೆಮ್ಮಾರಿ ಕೊರೊನಾ ವಕ್ಕರಿಸಿದೆ. ಹಿರೇಕೆರೂರು ಪೊಲೀಸ್ ಠಾಣೆಯ ಐವರು ಕಾನ್ಸ್ಟೇಬಲ್​ಗಳು, ಹಾವೇರಿ ಸಂಚಾರಿ ಠಾಣೆಯ ಓರ್ವ ಕಾನ್ಸ್ಟೇಬಲ್, ಕಾಗಿನೆಲೆ ಪೊಲೀಸ್ ಠಾಣೆಯ ಓರ್ವ ಕಾನ್ಸ್ಟೇಬಲ್ ಹಾಗೂ ಕುಮಾರಪಟ್ಟಣ ಪೊಲೀಸ್ ಠಾಣೆಯ ಓರ್ವ ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಕುಮಾರಪಟ್ಟಣ, ಹಿರೇಕೆರೂರು ಮತ್ತು ಹಾವೇರಿ ಸಂಚಾರಿ ಪೊಲೀಸ್ ಠಾಣೆಗಳನ್ನು ಸೀಲ್​ಡೌನ್ ಮಾಡಲಾಗಿದೆ.

Published On - 2:22 pm, Mon, 27 July 20