ಪ್ರೀತಿಸಿದ ಹುಡುಗನಿಗಾಗಿ ನಿಶ್ಚಿತಾರ್ಥ ಮಾಡಿಕೊಂಡ ಯುವಕನಿಗೆ ಚಾಕು ಇರಿದ ಅಪ್ರಾಪ್ತ ಬಾಲಕಿ

|

Updated on: Apr 08, 2023 | 12:05 PM

ಪ್ರೀತಿಸಿದವನನ್ನು ಬಿಟ್ಟು ಮತ್ತೊಬ್ಬನ ಜೊತೆ ನಿಶ್ಚಿತಾರ್ಥವಾದ ಹಿನ್ನಲೆ ಅಪ್ರಾಪ್ತ ಬಾಲಕಿಯೊಬ್ಬಳು ಭಾವಿ ಪತಿಯ ಕುತ್ತಿಗೆಗೆ ಚಾಕು ಇರಿದ ಘಟನೆ ಜಿಲ್ಲೆಯ ರಾಣೇಬೆನ್ನೂರು ಪಟ್ಟಣದ ಹೊರವಲಯದ ಓಂ ಪಬ್ಲಿಕ್ ಸ್ಕೂಲ್ ಬಳಿ ನಡೆದಿದೆ.

ಪ್ರೀತಿಸಿದ ಹುಡುಗನಿಗಾಗಿ ನಿಶ್ಚಿತಾರ್ಥ ಮಾಡಿಕೊಂಡ ಯುವಕನಿಗೆ ಚಾಕು ಇರಿದ ಅಪ್ರಾಪ್ತ ಬಾಲಕಿ
ಸಾಂದರ್ಭಿಕ ಚಿತ್ರ
Follow us on

ಹಾವೇರಿ: ಪ್ರೀತಿಸಿದ ಹುಡುಗನಿಗಾಗಿ ನಿಶ್ಚಿತಾರ್ಥ ಮಾಡಿಕೊಂಡ ಯುವಕನ ಕುತ್ತಿಗೆಗೆ ಅಪ್ರಾಪ್ತ ಬಾಲಕಿಯೊಬ್ಬಳು ಚಾಕು ಇರಿದ ಘಟನೆ ಜಿಲ್ಲೆಯ ರಾಣೇಬೆನ್ನೂರು ಪಟ್ಟಣದ ಹೊರವಲಯದ ಓಂ ಪಬ್ಲಿಕ್ ಸ್ಕೂಲ್ ಬಳಿ ನಡೆದಿದೆ. ಹೌದು ಅಪ್ರಾಪ್ತ ಬಾಲಕಿ ಭಾವಿ ಪತಿಗೆ ಪಾರ್ಕ್​ಗೆ ಕರೆದಿದ್ದಾಳೆ. ನಿನಗೆ ಒಂದು ಗಿಪ್ಟ್ ಕೊಡಬೇಕು ರೀಲ್ಸ್ ಮಾಡೋಣ ನಿನ್ನ ಕೈ ಕಟ್ಟಿ ಪೋಟೊ ತೆಗೆಯುತ್ತೇನೆ ಎಂದಿದ್ದು, ಯುವಕ ಕೂಡ ಪ್ರೀತಿಯಿಂದ ಹೇಳುತ್ತಿದ್ದಾಳೆ ಎಂದು ಒಪ್ಪಿದ್ದಾನೆ. ಇದಕ್ಕೆ ಒಪ್ಪಿಕೊಂಡು ಶಿಲುಬೆ ಥರ ಕೈ ಕಟ್ಟಿಸಿಕೊಂಡಿದ್ದ ನಿಶ್ಚಿತಾರ್ಥದವಾದ ಯುವಕನಿಗೆ ‘ ನೋಡು ನನ್ನ ಗಿಪ್ಟ್ ಎಂದು ದೇವೆಂದ್ರಗೌಡ ಎಂಬ ಯುವಕನ ಕುತ್ತಿಗೆಗೆ 17 ವರ್ಷದ ಅಪ್ರಾಪ್ತ ಬಾಲಕಿ ಚೂರಿ ಹಾಕಿದ್ದಾಳೆ.

ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ದೇವೆಂದ್ರಗೌಡ ಎಂಬ ಯುವಕ ಹರಪನಹಳ್ಳಿ ತಾಲೂಕಿನಲ್ಲಿ ಸೇಲ್ಸ್​ ಮನ್ ಆಗಿ ಕೆಲಸ ಮಾಡುತ್ತಿದ್ದ, ಮಾರ್ಚ್ 3 ರಂದು ಅಪ್ರಾಪ್ತ ಬಾಲಕಿ ಜೊತೆ ಎಂಗೇಜ್ಮೇಂಟ್​ ಆಗಿದ್ದನು. ಆದರೀಗ ಲವ್ ಮಾಡಿದ್ದ ಹುಡುಗನಿಗಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದವನನ್ನೆ ಕೊಲ್ಲಲು ಯತ್ನಿಸಿದ ಈ ಖತರ್ನಾಕ್ ಬಾಲಕಿಯ ಕೃತ್ಯಕ್ಕೆ ಪೋಲಿಸರೇ ಬೆಚ್ಚಿಬಿದ್ದಿದ್ದಾರೆ. ಯುವಕನ ಪೋಷಕರಿಂದ ಅಪ್ರಾಪ್ತ ಬಾಲಕಿಯ ಮೇಲೆ ದೂರು ಕೊಡಲಾಗಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದ ಹಿನ್ನಲೆ ಆರೋಪಿ ಯುವತಿಯನ್ನ ಅರೆಸ್ಟ್ ಮಾಡಲಾಗಿದೆ. ಈ ಕುರಿತು ಹಲಗೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Hassan: ಹಾಸನದಲ್ಲಿ 85 ವರ್ಷದ ವೃದ್ಧೆಯನ್ನು ಕೊಲೆ ಮಾಡಿ ಅತ್ಯಾಚಾರ ಎಸಗಿದ ಆರೋಪಿ ಅರೆಸ್ಟ್

ಕಾಡಾನೆ ದಾಳಿಗೆ 18 ವರ್ಷದ ಯುವತಿ ಸಾವು

ದಾವಣಗೆರೆ: ಜಿಲ್ಲೆಯಲ್ಲಿ‌ ಮತ್ತೆ ಕಾಡಾನೆಗಳ ಹಾವಳಿ ಶುರುವಾಗಿದ್ದು, ಕವನಾ ಎಂಬ 18 ವರ್ಷದ ಯುವತಿ ಕಾಡಾನೆ ದಾಳಿಗೆ ಸಾವನ್ನಪ್ಪಿರುವ ಘಟನೆ ಚನ್ನಗಿರಿ ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ನಡೆದಿದೆ. ಹೌದು ಅವರೆ ಕಾಯಿ ಹರಿಯಲು ಜಮೀ‌ನಿಗೆ ಹೋದ ವೇಳೆ ಮೂರು ಕಾಡಾನೆಗಳು‌ ಏಕಕಾಲಕ್ಕೆ ದಾಳಿ ನಡೆಸಿದ್ದು ಆನೆಗಳ ಕಾಲ್ತುಳಿತದಿಂದ ತೀವ್ರಗಾಯಗೊಂಡ ಬಾಲಕಿಯನ್ನ ಜಿಲ್ಲಾಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಇನ್ನು ಕಳೆದ ಎರಡು ವರ್ಷಗಳಿಂದ ಸೋಮಲಾಪುರ ಹಾಗೂ ಸೂಳೆಕೆರೆ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಹಿಂಡು ಸುತ್ತಾಡುತ್ತಿದ್ದು, ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಆನೆಗಳನ್ನ ಅರಣ್ಯಕ್ಕೆ ಅಟ್ಟಲು ಗ್ರಾಮಸ್ಥರು ವಿನಂತಿಸಿದ್ದಾರೆ. ಇತ್ತ ಮಗಳನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:02 pm, Sat, 8 April 23