ಮಗಳನ್ನ ಪ್ಲೈಟ್​ಗೆ​ ಹತ್ತಿಸಿ ವಾಪಾಸ್ಸಾಗುವಾಗ ಕಾರು ಅಪಘಾತ; ಚಾಲಕ ಸೇರಿ ಇಬ್ಬರ ಸಾವು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 19, 2023 | 7:57 AM

ಜಿಲ್ಲೆಯ ರಾಣೆಬೆನ್ನೂರು ಹೊರವಲಯದಲ್ಲಿ ರಸ್ತೆ ಬದಿಯ ಹುಣಸೆ ಮರಕ್ಕೆ ಆಲ್ಟೋ ಕಾರು ಡಿಕ್ಕಿಯಾಗಿ ಚಾಲಕ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಿನ್ನೆ(ಜು.18) ನಡೆದಿದೆ. ಜಯಂತಿ(50), ಕಾರು ಚಾಲಕ ವಿಠ್ಠಲ್(47) ಮೃತ ರ್ದುದೈವಿಗಳು.

ಮಗಳನ್ನ ಪ್ಲೈಟ್​ಗೆ​ ಹತ್ತಿಸಿ ವಾಪಾಸ್ಸಾಗುವಾಗ ಕಾರು ಅಪಘಾತ; ಚಾಲಕ ಸೇರಿ ಇಬ್ಬರ ಸಾವು
ಮೃತ ತಾಯಿ, ಚಾಲಕ
Follow us on

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು(Ranebennuru) ಹೊರವಲಯದಲ್ಲಿ ರಸ್ತೆ ಬದಿಯ ಹುಣಸೆ ಮರಕ್ಕೆ ಆಲ್ಟೋ ಕಾರು ಡಿಕ್ಕಿಯಾಗಿ ಚಾಲಕ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಿನ್ನೆ(ಜು.18) ನಡೆದಿದೆ. ಜಯಂತಿ(50), ಕಾರು ಚಾಲಕ ವಿಠ್ಠಲ್(47) ಮೃತ ರ್ದುದೈವಿಗಳು. ಇನ್ನು ಇವರನ್ನ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹುಲೇಕಲ್​ ಗ್ರಾಮದವರು ಎಂದು ಗುರುತಿಸಲಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಗಳನ್ನು ದುಬೈಗೆ ಕಳುಹಿಸಿ ಊರಿಗೆ ಹಿಂದಿರುಗುತ್ತಿದ್ದ ವೇಳೆ ಈ ದುರಂತ ನಡೆದಿದ್ದು, ನಿದ್ದೆ ಮಂಪರಿನಲ್ಲಿ ಕಾರು ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಮಿಕರಿಬ್ಬರ ನಡುವೆ ಜಗಳ; ಕೊಲೆಯಲ್ಲಿ ಅಂತ್ಯ

ಉಡುಪಿ: ಕಾರ್ಮಿಕರಿಬ್ಬರ ನಡುವೆ ಜಗಳವಾಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ. ಗಣೇಶ್ (40)ಮೃತ ಕೂಲಿಕಾರ್ಮಿಕ. ಒರಿಸ್ಸಾ ಮೂಲದ ಕಾರ್ಮಿಕರಾದ ಮೃತ ಗಣೇಶ್​ ಹಾಗೂ ಆರೋಪಿ ಅಖ್ಖನ್ ನಿರ್ಮಾಣ ಹಂತದ ಕಟ್ಟಡ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದ್ದು, ಇದು ತಾರಕಕ್ಕೇರಿ ಅಖ್ಖನ್ ಕಬ್ಬಿಣದ ರಾಡ್​ನಿಂದ ಗಣೇಶ್ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿ, ಎಸ್ಕೇಪ್​ ಆಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಕಾಪು ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸ್ಥಳದಲ್ಲಿದ್ದ ಇತರೆ ಕಾರ್ಮಿಕರನ್ನ ವಿಚಾಣೆಗೊಳಪಡಿಸಿದ್ದಾರೆ.

ಇದನ್ನೂ ಓದಿ:ಕುಡಿದು ಬಂದು ಅಕ್ಕನ ಪೀಡಿಸುತ್ತಿದ್ದ ಭಾವನ ಕೊಲೆ ಮಾಡಿದ ಭಾಮೈದ; ಪ್ರಕರಣ ಮುಚ್ಚಿ ಹಾಕಲು ಹೈಡ್ರಾಮ

ಸುತ್ತ ಹಳ್ಳಿಗಳಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಬೋನಿಗೆ; ನೆಮ್ಮದಿಯ ನಿಟ್ಟುಸಿರು ಬಿಟ್ಟ ಜನ

ದಾವಣಗೆರೆ: ಜಿಲ್ಲೆಯ‌ ಚನ್ನಗಿರಿ‌ತಾಲೂಕಿನ ಗರಗ ಗ್ರಾಮದ ಪಾಲಾಕ್ಷಪ್ಪ ಎಂಬ ರೈತರನ ತೋಟದ ಮನೆ ಬಳಿ ಚಿರತೆ‌ ಬೋನಿಗೆ ಬಿದ್ದಿದೆ. ಈ ಹಿಂದೆ ಹಲವಾರ ಸಲ ಪ್ರತ್ಯಕ್ಷವಾಗಿದ್ದ ಚಿರತೆ. ಕೆಲ ಜಾನುವಾರಿಗಳ ಮೇಲೂ ದಾಳಿ ನಡೆಸಿತ್ತು. ಈ ಕಾರಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದ ಗ್ರಾಮಸ್ಥರು.
ಕಳೆದ ನಾಲ್ಕು ದಿನಗಳ ಹಿಂದೆ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇಟ್ಟು ಚಿರತೆ ಸೆರೆಗೆ ಮುಂದಾಗಿದ್ದರು. ಇಂದು ಬೆಳಿಗ್ಗೆ ನಾಲ್ಕು ಗಂಟೆಗೆ ಚಿರತೆ ಬೋನಿಗೆ ಬಿದ್ದಿದೆ. ಈ ಘಟನೆ ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ