ಆತ್ಮಹತ್ಯೆ ಮಾಡಿಕೊಂಡ ರೈತನ ಬಗ್ಗೆ ಹಗುರವಾಗಿ ಮಾತನಾಡಿದ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ: ವಿಡಿಯೋ ವೈರಲ್

| Updated By: ಗಂಗಾಧರ​ ಬ. ಸಾಬೋಜಿ

Updated on: Sep 09, 2022 | 12:09 PM

ಆತ್ಮಹತ್ಯೆ ಮಾಡಿಕೊಂಡ ರೈತನ ಬಗ್ಗೆ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಹಗುರವಾಗಿ ಮಾತನಾಡಿದ್ದಾರೆನ್ನಲಾದ ವಿಡಿಯೋ ವೈರಲ್ ಆಗಿದೆ.

ಆತ್ಮಹತ್ಯೆ ಮಾಡಿಕೊಂಡ ರೈತನ ಬಗ್ಗೆ ಹಗುರವಾಗಿ ಮಾತನಾಡಿದ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ: ವಿಡಿಯೋ ವೈರಲ್
ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ.
Follow us on

ಹಾವೇರಿ: ಆತ್ಮಹತ್ಯೆ ಮಾಡಿಕೊಂಡ ರೈತನ ಬಗ್ಗೆ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಹಗುರವಾಗಿ ಮಾತನಾಡಿದ್ದಾರೆನ್ನಲಾದ ವಿಡಿಯೋ ವೈರಲ್ ಆಗಿದೆ. ಮೃತ ರೈತನಿಗೆ ಮಾಲೆ ಹಾಕಲು ಬರುವಂತೆ ಕಾಂಗ್ರೆಸ್ ಕಾರ್ಯಕರ್ತ ಕರೆ ಮಾಡಿದ್ದ. ಈ ವೇಳೆ ಮೊಬೈಲ್​ನಲ್ಲಿ ಮಾತನಾಡೋದು ಮುಗಿದ್ಮೇಲೆ ಅವಾಚ್ಯ ಪದಗಳನ್ನು ಬಳಕೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ರೈತನ ಬಗ್ಗೆ ಕೋಳಿವಾಡ ಮಾತನಾಡಿದ್ದಾರೆನ್ನಲಾಗುತ್ತಿದೆ. ಕೋಳಿವಾಡ ಜಿಲ್ಲೆಯ ರಾಣೆಬೆನ್ನೂರು ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕರಾಗಿದ್ದಾರೆ. ಐದು ಬಾರಿ ಶಾಸಕರಾಗಿರೋ ಕೋಳಿವಾಡ, ಒಮ್ಮೆ ಸಚಿವರಾಗಿ, ಒಮ್ಮೆ ವಿಧಾನಸಭೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಪಕ್ಷದ ಕಾರ್ಯಕ್ರಮದ ಸಂಘಟನೆ ಮಾಡಲು ಪಕ್ಷದ ಮುಖಂಡರೊಬ್ಬರ ಮನೆಯಲ್ಲಿ ಕಾರ್ಯಕರ್ತರ ಜೊತೆ ಮಾತನಾಡ್ತಿದ್ದಾಗ ಕಾರ್ಯಕರ್ತನ ಫೋನ್ ಕರೆ ಬಂದಿದೆ. ಫೋನ್​ನಲ್ಲಿ ಮಾತನಾಡಿದ ಮೇಲೆ ಇತರೆ  ಕಾರ್ಯಕರ್ತರ ಮುಂದೆ ಕೋಳಿವಾಡ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.

ಕಾರ್ಯಕರ್ತನ ಜೊತೆ ಮೊಬೈಲ್​ನಲ್ಲಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಮಾತನಾಡಿದ್ದಾರೆನ್ನಲಾದ ಸಂಭಾಷಣೆ ಹೀಗಿದೆ.

ಹಲೋ,,,
ಹೇಳಪಾ,,
ಅದಕ್ಕೇನು ಮಾಡಾಕಕ್ಕೈತಿ
ಸುಮ್ಮನೆ ಇಂಥಾವೆಲ್ಲ ತರ್ತೀರಿ.
ಆತ್ಮಹತ್ಯೆ ಮಾಡಿಕೊಂಡಾನ, ಸತ್ತಾನ.
ರೈತ ಆತ್ಮಹತ್ಯೆ ಅಂತಾ ಮಾಡಿಸ್ರಿ ಅಂತೀರಿ, ಇಷ್ಟ.
ಮಾಡಿಸ್ರಿ ನಾನೇನ್ ಬ್ಯಾಡ ಅಂದೀನಾ.?
ಎದಕ ಮಾಲಿ ಹಾಕಬೇಕು.
ಹಂಗ ಹೊಕ್ಕೀರಲ್ರಿ ಇಷ್ಟು ರೊಕ್ಕ ಕೊಡ್ರಿ ಬರಿ ಮಾಲೆ ಹಾಕಿದರೆ ಏನು ಬಂತ್ರಿ
ಇದ ಅಲ ಉದ್ಯೋಗ.
ನಾನೇನು ಉರ್ಲು ಹಾಕ್ಕೋ ಅಂತಾ ಹೇಳಿದ್ನ್ಯಾ?
ಏನ್ ಮಾತಾಡ್ತೀರಪ್ಪ ನೀವು
ಹಿಡಿಬ್ಯಾಡ್ರಿ ಇಂಥಾವೆಲ್ಲ ನೀವು ಕಾರ್ಯಕರ್ತರು.
ಉರ್ಲು ಹಾಕ್ಕೊಂಡಾನ ಸತ್ತು ಹೊಕ್ಕಾನ.
ನಾ ಉರ್ಲು ಹಾಕ್ಕೋ ಅಂತಾ ಹೇಳಿದ್ನ್ಯಾ ಅವನಿಗೆ.
ಅವನಿಗೇನ ಮಾಲಿ ಹಾಕ್ತೀರಿ ಸತ್ತವನಿಗೆ.
ಇಂಥವೆಲ್ಲ ಬ್ಯಾಡ ಎಂದು ಕೋಳಿವಾಡ ಕರೆ ಕಟ್ ಮಾಡಿದರು.

ಕರೆ ಕಟ್ ಆದ್ಮೇಲೆ ಕಾರ್ಯಕರ್ತರ ಜೊತೆ ಮಾತು

ಸತ್ತಾನ, ಉರ್ಲು ಹಾಕ್ಕೊಂಡಾನ, ಬರ್ರಿ ಮಾಲಿ ಹಾಕ್ರಿ. ಮಾಲಿ ಹಾಕಿದ್ಮ್ಯಾಲ ಏ ಹಂಗ ಹೊಂಟೀರಲ್ರಿ, ಹಂಗ ಹೊಂಟೀರಲ್ರಿ
ಇದ‌ ಉದ್ಯೋಗ ಹೌದಿಲ್ಲ. ಹಿಂಗ ಮಾಡಿ ಮಾಡಿ‌ ನಮ್ ದೇಶ ಹಾಳಾಗಿ ಹೊಕ್ಕೈತಿ. ಹಂಗ ಹೊಕ್ಕೀರಲ್ರಿ, ಯಾವಾಗ ಉದ್ಧಾರ ಆಕ್ಕಿರೋ ಯಾವಾಗ ಶಾಣ್ಯಾರಾಕ್ಕಿರೋ,, ಶಾಣ್ಯಾರಾಗ್ರೋಪಾ. ಸತ್ತಾನಂತ, ಉರ್ಲು ಹಾಕ್ಕೊಂಡಾನಂತ, ನಾ ಹೋಗಬೇಕಂತ. ಹೋಗಿ ಅವನಿಗೆ ಉರ್ಲು ಹಾಕ್ಕೊಂಡವನಿಗೆ ಮಾಲೆ ಹಾಕಬೇಕಂತೆ. ಆ ಮಗನಿಗೆ ಯಾಕ ಮಾಲೆ ಹಾಕ್ಬೇಕು ನಾನು. ಅವಂಗೇನ್ ಉರ್ಲು ಹಾಕ್ಕೋ ಅಂತಾ ಹೇಳಿದ್ವಾ ನಾವು.? ಏನು ಮಾಡಿಕೊಂಡಾನೋ, ಎದಕ್ ಮಾಡಿಕೊಂಡಾನೋ, ಉರ್ಲು ಹಾಕ್ಕೊಂಡಾನಂತ. ಯಾರಿಗೆ ಏನ್ ಅನ್ಯಾಯ ಮಾಡಿದ್ನೋ, ಏನಾಗಿತ್ತೋ ಯಾವನಿಗೊತ್ತು. ಆಮ್ಯಾಲ‌ ಮಾಲಿ ಹಾಕಿದವರೆ ಹೊಂಟೆವಾ… ಹಂಗ ಹೊಕ್ಕೀರಲ್ರಿ.

ರಾಜದ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 10:42 am, Fri, 9 September 22