ಹಾವೇರಿ: ಸೇತುವೆ ನಿರ್ಮಾಣ ಕೋರಿ ಪ್ರಧಾನಿ ಮೋದಿಗೆ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಂದ ಪತ್ರ

ಹಾವೇರಿ ತಾಲೂಕಿನ ಶಾಕಾರ ಮತ್ತು ಹಾವನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ತುಂಗಾಭದ್ರ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಜನರ ಕಷ್ಟಗಳನ್ನು ವಿವರಿಸಲಾಗಿದೆ.

ಹಾವೇರಿ: ಸೇತುವೆ ನಿರ್ಮಾಣ ಕೋರಿ ಪ್ರಧಾನಿ ಮೋದಿಗೆ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಂದ ಪತ್ರ
ಸೇತುವೆ ನಿರ್ಮಾಣ ಕೋರಿ ಪ್ರಧಾನಿ ಮೋದಿಗೆ ಪತ್ರ ಬರೆದ ಶಾಕಾರ ಗ್ರಾಮದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
Updated By: Rakesh Nayak Manchi

Updated on: Aug 14, 2023 | 4:27 PM

ಹಾವೇರಿ, ಆಗಸ್ಟ್ 14: ತಾಲೂಕಿನ ಶಾಕಾರ ಗ್ರಾಮದಿಂದ ಹಾವನೂರು ಗ್ರಾಮಕ್ಕೆ ಹೋಗಲು ತುಂಬಾಭದ್ರಾ ನದಿಗೆ ಅಡ್ಡಲಾಗಿ ಸೇರುವೆ ನಿರ್ಮಾಣ ಮಾಡುವಂತೆ ಕೋರಿ ಶಾಕಾರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಪತ್ರ ಬರೆದಿದ್ದಾರೆ. ಆ ಮೂಲಕ ನಾಲ್ಕು ದಶಕಗಳ ಗ್ರಾಮದ ಸಮಸ್ಯೆಗೆ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

ಶಾಕಾರ ಗ್ರಾಮದಲ್ಲಿ ಉತ್ತಮ ಆಸ್ಪತ್ರೆ ಸೌಲಭ್ಯ ಇಲ್ಲ. ಗರ್ಭಿಣಿಯರು, ವಯೋವೃದ್ಧರು ಮಾತ್ರವಲ್ಲದೆ, ಆರೋಗ್ಯ ಸಮಸ್ಯೆ ಕಾಣಿಸಿಕೊಂಡವರು ಹಾವನೂರು ಗ್ರಾಮದಲ್ಲಿರುವ ಆಸ್ಪತ್ರೆಗೆ ಹೋಗಬೇಕು. ಆದರೆ ಈ ಗ್ರಾಮಕ್ಕೆ ಹೋಗಲು ನದಿ ದಾಟಿ ಹೋಗಬೇಕಾಗಿದೆ. ಸಣ್ಣಪುಟ್ಟ ಕೆಲಸ ಕಾರ್ಯಗಳಿಗೂ ಜೀವ ಬಿಗಿ ಹಿಡಿದು ತೆಪ್ಪದ ಮೂಲಕ ನದಿ ದಾಟುವ ಸಾಹಸ ಮಾಡಬೇಕಿದೆ.

ಇದನ್ನು ಓದಿ: ಫಸಲ್ ಬಿಮಾ ಯೋಜನೆಯಲ್ಲಿ ರಾಜ್ಯಕ್ಕೆ ಬೀದರ್ ನಂಬರ್ ಒನ್​: ರೈತರ ಆಸಕ್ತಿಗೆ ಪ್ರಧಾನಿ ಮೋದಿ ಶ್ಲಾಘನೆ

ಜೀನದ ಬಂಡಿ ಸಾಗಿಲು ಹಲವಾರು ಮಂದಿ ಕೂಲಿ ಕೆಲಸಕ್ಕೆ ಅಥವಾ ಕೃಷಿ ಕೆಲಸಕ್ಕೆ ಹಾವನೂರು ಗ್ರಾಮಕ್ಕೆ ಹೋಗುತ್ತಿದ್ದಾರೆ. ಹೀಗೆ ಹೋಗುವವರು ಪ್ರತಿನಿತ್ಯ ತೆಪ್ಪದ ಮೂಲಕ ಹೋಗುತ್ತಿದ್ದಾರೆ. ಈ ಎರಡು ಗ್ರಾಮಗಳನ್ನು ಸಂಪರ್ಕಿಸಲು ಸೇತುವೆ ನಿರ್ಮಾಣ ಮಾಡುವಂತೆ ಜನಪ್ರತಿನಿಧಿ ಹಾಗೂ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರೂ ಇದುವರೆಗೂ ಸ್ಪಂದಿಸಿಲ್ಲ.

ಹೀಗಾಗಿ, ನರೇಂದ್ರ ಮೋದಿ ಮೇಲೆ ನಂಬಿಕೆ ಇಟ್ಟ ವಿದ್ಯಾರ್ಥಿಗಳು, ಪ್ರಧಾನಿಗೆ ಪತ್ರವೊಂದನ್ನು ಬರೆದು ಕಳುಹಿಸಿದ್ದಾರೆ. ಈ ಪತ್ರದಲ್ಲಿ ಶಾಕಾರ ಗ್ರಾಮದ ಜನರ ಸಂಪರ್ಕ ವ್ಯವಸ್ಥೆ ಇಲ್ಲದೆ ಪಡುವ ಕಷ್ಟಗಳನ್ನು ವಿವರವಾಗಿ ಬರೆದಿದ್ದಾರೆ. ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಬಗ್ಗೆ ವಿದ್ಯಾರ್ಥಿಗಳು ಟಿವಿ9ಗೆ ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ