ಹಾವೇರಿ: ದೇಶದ ಗಡಿಯಲ್ಲಿ ಸೇವೆ ಸಲ್ಲಿಸಿ ಊರಿಗೆ ಮರಳಿದ ಮೂವರು ನಿವೃತ್ತ ಯೋಧರಿಗೆ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ದೇವಗಿರಿ ಗ್ರಾಮದ ಜಗದೀಶ, ಅಗಡಿ ಗ್ರಾಮದ ನಜೀರ್ ಅಹಮದ್ ಮತ್ತು ಲಕ್ಷ್ಮಣಗೆ ಊರಿನ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಭರ್ಜರಿಯಾಗಿ ಸ್ವಾಗತಿಸಿದ್ದಾರೆ.
ಜಮ್ಮು-ಕಾಶ್ಮೀರ ಸೇರಿದಂತೆ ದೇಶದ ಹಲವೆಡೆ ಸೇವೆ ಸಲ್ಲಿಸಿ ಇದೀಗ ನಿವೃತ್ತಿಯಾಗಿ ಸೈನಿಕರು ಊರಿಗೆ ಮರಳಿದ್ದಾರೆ. ಹಾವೇರಿ ನಗರಕ್ಕೆ ಎಂಟ್ರಿಯಾಗ್ತಿದ್ದಂತೆ ನಿವೃತ್ತ ಯೋಧರಿಗೆ ಹೂಗುಚ್ಛ ನೀಡಿ ಮಕ್ಕಳು ಬರಮಾಡಿಕೊಂಡರು. ಬಳಿಕ ತೆರೆದ ವಾಹನದಲ್ಲಿ ದೇಶಪ್ರೇಮ ಸಾರೋ ಗೀತೆಗಳನ್ನು ಹಾಕಿ ಹಾವೇರಿಯಿಂದ ಸೈನಿಕರ ಗ್ರಾಮದವರೆಗೆ ಮೆರವಣಿಗೆ ಮಾಡಿದರು.