AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಾಪಾರಸ್ಥರ ಆಟಕ್ಕೆ ರೈತರ ರೋಷಾವೇಶ: ರಸ್ತೆಗೆ ಬೆಳ್ಳುಳ್ಳಿ ಚೆಲ್ಲಿ ಅನ್ನದಾತರ ಆಕ್ರೋಶ

ಹಾವೇರಿ: ಹೊತ್ತೊತ್ತಿಗೆ ಸರಿಯಾಗಿ ಊಟ ಮಾಡ್ಲಿಲ್ಲ. ನಿದ್ದೆಗೆಟ್ಟು ರಾತ್ರಿಯೆಲ್ಲಾ ಕಾದ್ರು. ಬೆಳೆ ಕೈಸೇರಿತು.. ಅಷ್ಟೋ ಇಷ್ಟೋ ಕಾಸು ಮಾಡ್ಬೋದು ಅಂತಾ ಖುಷಿಯಲ್ಲೇ ಮಾರುಕಟ್ಟೆಗೆ ಬಂದ್ರು. ಆದ್ರೆ ಅಲ್ಲಿನ ಅಂಧಾದರ್ಬಾರ್ ನೋಡಿ ಸಿಡಿದೆದ್ದಿದ್ರು. ಕ್ಷಣಾರ್ಧದಲ್ಲೇ ಮಾರ್ಕೆಟ್​ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ರು. ಸಿಟ್ಟು ನೆತ್ತಿಗೇರಿತ್ತು.. ಚೀಲದಲ್ಲಿದ್ದ ಬೆಳ್ಳುಳ್ಳಿ ಬೀದಿ ಪಾಲಾಗಿದ್ವು. ವ್ಯಾಪಾರಸ್ಥರ ವಿರುದ್ಧ ರೈತರು ರೊಚ್ಚಿಗೆದ್ದಿದ್ರು. ಪೊಲೀಸರ ಮಾತಿಗೂ ಜಗ್ಗದೆ ಪ್ರತಿಭಟನೆಗೆ ಕುಂತಿದ್ರು. ನೋಡ ನೋಡ್ತಿದ್ದಂತೆ ಅಲ್ಲಿ ದೊಡ್ಡ ಗಲಾಟೆಯೇ ಶುರು ಆಗಿತ್ತು. ಅಷ್ಟಕ್ಕೂ ಇಂಥಾದ್ದೊಂದು ಹೈಡ್ರಾಮಾಕ್ಕೆ ಕಾರಣ ವ್ಯಾಪಾರಿಗಳ […]

ವ್ಯಾಪಾರಸ್ಥರ ಆಟಕ್ಕೆ ರೈತರ ರೋಷಾವೇಶ: ರಸ್ತೆಗೆ ಬೆಳ್ಳುಳ್ಳಿ ಚೆಲ್ಲಿ ಅನ್ನದಾತರ ಆಕ್ರೋಶ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Mar 02, 2020 | 7:34 PM

Share

ಹಾವೇರಿ: ಹೊತ್ತೊತ್ತಿಗೆ ಸರಿಯಾಗಿ ಊಟ ಮಾಡ್ಲಿಲ್ಲ. ನಿದ್ದೆಗೆಟ್ಟು ರಾತ್ರಿಯೆಲ್ಲಾ ಕಾದ್ರು. ಬೆಳೆ ಕೈಸೇರಿತು.. ಅಷ್ಟೋ ಇಷ್ಟೋ ಕಾಸು ಮಾಡ್ಬೋದು ಅಂತಾ ಖುಷಿಯಲ್ಲೇ ಮಾರುಕಟ್ಟೆಗೆ ಬಂದ್ರು. ಆದ್ರೆ ಅಲ್ಲಿನ ಅಂಧಾದರ್ಬಾರ್ ನೋಡಿ ಸಿಡಿದೆದ್ದಿದ್ರು. ಕ್ಷಣಾರ್ಧದಲ್ಲೇ ಮಾರ್ಕೆಟ್​ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ರು.

ಸಿಟ್ಟು ನೆತ್ತಿಗೇರಿತ್ತು.. ಚೀಲದಲ್ಲಿದ್ದ ಬೆಳ್ಳುಳ್ಳಿ ಬೀದಿ ಪಾಲಾಗಿದ್ವು. ವ್ಯಾಪಾರಸ್ಥರ ವಿರುದ್ಧ ರೈತರು ರೊಚ್ಚಿಗೆದ್ದಿದ್ರು. ಪೊಲೀಸರ ಮಾತಿಗೂ ಜಗ್ಗದೆ ಪ್ರತಿಭಟನೆಗೆ ಕುಂತಿದ್ರು. ನೋಡ ನೋಡ್ತಿದ್ದಂತೆ ಅಲ್ಲಿ ದೊಡ್ಡ ಗಲಾಟೆಯೇ ಶುರು ಆಗಿತ್ತು. ಅಷ್ಟಕ್ಕೂ ಇಂಥಾದ್ದೊಂದು ಹೈಡ್ರಾಮಾಕ್ಕೆ ಕಾರಣ ವ್ಯಾಪಾರಿಗಳ ಹಾವು ಏಣಿ ಆಟ.

ಕಷ್ಟಪಟ್ಟು ಕಾದು ಮಾರುಕಟ್ಟೆಗೆ ತಂದ್ರೂ ಸಿಗ್ಲಿಲ್ಲ ಬೆಲೆ: ನಿಜ.. ಒಂದೊತ್ತು ಊಟ ಮಾಡದಿದ್ರೂ ಹೊಲದಲ್ಲಿನ ಬೆಳೆಯನ್ನ ರೈತ ಕಣ್ಣ ರೆಪ್ಪೆಯಂತೆ ಜೋಪಾನ ಮಾಡ್ತಾನೆ. ಅದ್ರಲ್ಲೂ ಕೆಲ ತಿಂಗಳ ಹಿಂದೆ ಹಾವೇರಿಯಲ್ಲಿ ಸುರಿದ ಧಾರಾಕಾರ ಮಳೆ ರೈತರ ಬದುಕಿನ ಮೇಲೆ ದೊಡ್ಡ ಹೊಡೆತ ನೀಡಿತ್ತು. ಹೇಗೋ ಚೇತರಿಸಿಕೊಂಡು ಬೆಳ್ಳುಳ್ಳಿ ಬೆಳೆದ್ರೆ, ಇನ್ನೇನು ಕೈಸೇರಿತು ಅನ್ನೋ ಟೈಮಲ್ಲಿ ಕಳ್ಳರ ಕಾಟ ಶುರುವಾಗಿತ್ತು. ಹೀಗಾಗಿ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಹಗಲಿರುಳು ಕಾದು ರೈತರು ಬೆಳ್ಳುಳ್ಳಿಯನ್ನ ಮಾರಾಲು ರಾಣೆಬೆನ್ನೂರು ನಗರದ ಎಪಿಎಂಸಿಗೆ ತಂದಿದ್ರು.

ಆದ್ರಿಲ್ಲಿ ವ್ಯಾಪಾರಸ್ಥರು ಆಡಿದ್ದೇ ಆಟ ಅನ್ನುವಂತೆ ಆಗಿದ್ಯಂತೆ. ಯಾಕಂದ್ರೆ ಬೆಳ್ಳುಳ್ಳಿ ಬೆಲೆ ದಿಢೀರ್ ಕುಸಿದಿತ್ತು. ಇದ್ರಿಂದ ಸಿಟ್ಟಾದ ರೈತರು ಮಾರ್ಕೆಟ್​ನಲ್ಲಿದ್ದ ವ್ಯಾಪಾರಸ್ಥರ ಬೆಳ್ಳುಳ್ಳಿ ಚೀಲಗಳನ್ನ ರಸ್ತೆ, ಮಾರ್ಕೆಟ್ ತುಂಬ ಚೆಲ್ಲಾಡಿ ಆಕ್ರೋಶ ವ್ಯಕ್ತಪಡಿಸಿದ್ರು.

ವ್ಯಾಪಾರಸ್ಥರ ಬೆಳ್ಳುಳ್ಳಿ ಚೀಲ ರಸ್ತೆಗೆ ಎರಚಿ ಪ್ರತಿಭಟನೆ: ಇನ್ನು ಕಳೆದ ವಾರವಷ್ಟೇ ಕ್ವಿಂಟಾಲ್ ಬೆಳ್ಳುಳ್ಳಿಗೆ 12ಸಾವಿರ ರೂಪಾಯಿವರೆಗೆ ಮಾರಾಟ ಆಗಿತ್ತು. ಆದ್ರೆ ನಿನ್ನೆ ರಾಣೆಬೆನ್ನೂರು ಮಾರುಕಟ್ಟೆಗೆ ಬೇರೆ ಬೇರೆ ಜಿಲ್ಲೆಗಳಿಂದ ಬೆಳ್ಳುಳ್ಳಿ ಬಂದಿತ್ತು. ಹೀಗಾಗಿ ವ್ಯಾಪಾರಸ್ಥರು ದಿಢೀರ್ ಬೆಳ್ಳುಳ್ಳಿ ಬೆಲೆ ಕುಸಿತ ಕಾಣುವಂತೆ ಮಾಡಿದ್ರು. ಇದ್ರಿಂದ ಕೋಪಗೊಂಡ ರೈತರು ಮಾರುಕಟ್ಟೆಯಲ್ಲಿದ್ದ ವ್ಯಾಪಾರಸ್ಥರ ಬೆಳ್ಳುಳ್ಳಿ ಚೀಲಗಳನ್ನ ರಸ್ತೆ ಮತ್ತು ಮಾರ್ಕೆಟ್ ತುಂಬಾ ಸುರಿದು ಆಕ್ರೋಶ ವ್ಯಕ್ತಪಡಿಸಿದ್ರು.

ಸ್ಥಳೀಯ ರೈತರ ಬೆಳ್ಳುಳ್ಳಿಗೆ ಉತ್ತಮ ದರ ನೀಡಿ ಖರೀದಿಸುವಂತೆ ಒತ್ತಾಯಿಸಿದ್ರು. ಕೆಲಕಾಲ ವ್ಯಾಪಾರಸ್ಥರು ಮತ್ತು ಎಪಿಎಂಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ಪೊಲೀಸರ ಜೊತೆಗೂ ಮಾತಿನ ಚಕಮಕಿ ನಡೆಸಿದ್ರು. ಪ್ರತಿಭಟನೆ ವೇಳೆ ರೈತ ಮಹಿಳೆಯೊಬ್ರು ಅಸ್ವಸ್ಥಗೊಂಡಿದ್ರು. ಇನ್ನು ವ್ಯಾಪಾರಸ್ಥರು ಬಂದು ಬೆಲೆ ಹೆಚ್ಚು ನೀಡ್ತೀವಿ ಅಂದ್ರೂ ರೈತರು ಮಾರಾಟಕ್ಕೆ ತಂದಿದ್ದ ಬೆಳ್ಳುಳ್ಳಿಯನ್ನ ವಾಪಸ್ ತಗೊಂಡೋದ್ರು.

Published On - 7:33 pm, Mon, 2 March 20

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ