AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೊಜ್ಜು ಹೃದಯಕ್ಕಷ್ಟೇ ಅಲ್ಲ, ಕಿಡ್ನಿಗೂ ಅಪಾಯಕಾರಿಯಾಗಬಹುದು! ಈ ಲಕ್ಷಣ ಕಂಡು ಬಂದಾಗ ನಿರ್ಲಕ್ಷಿಸಬೇಡಿ

ಬೊಜ್ಜು ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗಳು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹಕ್ಕೆ ಕಾರಣವಾಗಬಹುದು ಎಂಬುದು ತಿಳಿದ ವಿಚಾರ. ಆದರೆ ಇದು ಮೂತ್ರಪಿಂಡದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾದರೆ ನಮ್ಮ ಕಿಡ್ನಿಗೂ ಬೊಜ್ಜಿಗೂ ಏನು ಸಂಬಂಧ, ಯಾವ ರೀತಿಯ ಲಕ್ಷಣಗಳನ್ನು ಕಡೆಗಣಿಸಬಾರದು ಜೊತೆಗೆ ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿಯ ಸಲಹೆಗಳನ್ನು ಪಾಲಿಸಬೇಕು ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ಬೊಜ್ಜು ಹೃದಯಕ್ಕಷ್ಟೇ ಅಲ್ಲ, ಕಿಡ್ನಿಗೂ ಅಪಾಯಕಾರಿಯಾಗಬಹುದು! ಈ ಲಕ್ಷಣ ಕಂಡು ಬಂದಾಗ ನಿರ್ಲಕ್ಷಿಸಬೇಡಿ
Obesity And Kidney HealthImage Credit source: Getty images
ಪ್ರೀತಿ ಭಟ್​, ಗುಣವಂತೆ
|

Updated on: Jun 03, 2026 | 6:53 PM

Share

ಇತ್ತೀಚಿನ ದಿನಗಳಲ್ಲಿ ಸ್ಥೂಲಕಾಯತೆ (Obesity) ದೊಡ್ಡ ಆರೋಗ್ಯ ಸಮಸ್ಯೆಯಾಗುತ್ತಿದೆ. ಸಾಮಾನ್ಯವಾಗಿ ಜನರು ಬೊಜ್ಜು ಅಥವಾ ಸ್ಥೂಲಕಾಯತೆಯನ್ನು ಹೃದಯ ರೋಗ, ಹೈ ಬಿಪಿ ಮತ್ತು ಡಯಾಬಿಟಿಸ್‌ಗೆ ಸಂಬಂಧಿಸಿದ ಸಮಸ್ಯೆಯಾಗಿ ನೋಡುತ್ತಾರೆ. ಆದರೆ ತೂಕ ಹೆಚ್ಚಿದ್ದರೆ ಅದು ಕಿಡ್ನಿ ಆರೋಗ್ಯದ (Kidney Health) ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ನಮ್ಮ ಕಿಡ್ನಿಗೂ ಬೊಜ್ಜಿಗೂ ಏನು ಸಂಬಂಧ, ಯಾವ ರೀತಿಯ ಲಕ್ಷಣಗಳನ್ನು ಕಡೆಗಣಿಸಬಾರದು ಜೊತೆಗೆ ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿಯ ಸಲಹೆಗಳನ್ನು ಪಾಲಿಸಬೇಕು ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ಕಿಡ್ನಿಯ ಆರೋಗ್ಯಕ್ಕೂ ಸ್ಥೂಲಕಾಯತೆಗೂ ಇರುವ ಸಂಬಂಧವೇನು?

ಸಾಮಾನ್ಯವಾಗಿ ಕಿಡ್ನಿ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವುದು, ದೇಹದ ದ್ರವ ಸಮತೋಲನವನ್ನು ಕಾಪಾಡುವುದು ಮತ್ತು ರಕ್ತದ ಒತ್ತಡ ನಿಯಂತ್ರಿಸುವಂತಹ ಪ್ರಮುಖ ಕೆಲಸಗಳನ್ನು ಮಾಡುತ್ತವೆ. ಆದರೆ ದೇಹದ ತೂಕ ಹೆಚ್ಚಾದಾಗ ಕಿಡ್ನಿಗಳು ಸಾಮಾನ್ಯಕ್ಕಿಂತ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇದರಿಂದ ಅವುಗಳ ಮೇಲೆ ಹೆಚ್ಚುವರಿ ಒತ್ತಡ ಬೀಳಬಹುದು. ನ್ಯಾಷನಲ್ ಕಿಡ್ನಿ ಫೌಂಡೇಶನ್ ಮಾಹಿತಿ ಪ್ರಕಾರ, ಸ್ಥೂಲಕಾಯವು ಕ್ರೋನಿಕ್ ಕಿಡ್ನಿ ಡಿಸೀಸ್ (CKD) ಅಪಾಯವನ್ನು ಹೆಚ್ಚಿಸಬಹುದು. ಜೊತೆಗೆ ಹೈ ಬ್ಲಡ್ ಪ್ರೆಶರ್ ಮತ್ತು ಟೈಪ್-2 ಡಯಾಬಿಟಿಸ್ ಸಮಸ್ಯೆಗಳು ಕೂಡ ಕಿಡ್ನಿ ಹಾನಿಗೆ ಕಾರಣವಾಗುವ ಪ್ರಮುಖ ಅಂಶಗಳಾಗಿವೆ.

ಯಾವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು?

ಕಿಡ್ನಿ ಸಮಸ್ಯೆಗಳಲ್ಲಿ ಆರಂಭಿಕ ಹಂತದಲ್ಲಿ ಸ್ಪಷ್ಟ ಲಕ್ಷಣಗಳು ಕಂಡುಬರದಿರಬಹುದು. ಆದರೆ ಕೆಲವರಲ್ಲಿ ಈ ರೀತಿಯ ಲಕ್ಷಣಗಳು ಕಾಣಿಸಬಹುದು;

  • ಕಾಲು, ಮುಖ ಅಥವಾ ಪಾದಗಳಲ್ಲಿ ಊತ
  • ಅತಿಯಾದ ದಣಿವು
  • ಪದೇಪದೇ ಮೂತ್ರ ವಿಸರ್ಜನೆ
  • ಮೂತ್ರದಲ್ಲಿ ಬದಲಾವಣೆ
  • ಹಸಿವು ಕಡಿಮೆಯಾಗುವುದು
  • ದೇಹದಲ್ಲಿ ದುರ್ಬಲತೆ

ಇದನ್ನೂ ಓದಿ: ಅಪ್ಪಿತಪ್ಪಿಯೂ ಈ ಆಹಾರಗಳ ಸೇವನೆ ಮಾಡಬೇಡಿ ಇದು ಕಿಡ್ನಿ ಸ್ಟೋನ್ ಆಗಲು ಕಾರಣವಾಗುತ್ತೆ ಎಚ್ಚರ!

ಕಿಡ್ನಿ ಆರೋಗ್ಯ ಕಾಪಾಡಲು ಏನು ಮಾಡಬೇಕು?

ಸಮತೋಲನಯುತ ಆಹಾರ ಸೇವನೆ: ಜಂಕ್ ಫುಡ್, ಹೆಚ್ಚು ಸಕ್ಕರೆ ಮತ್ತು ಪ್ರೊಸೆಸ್ಡ್ ಆಹಾರಗಳನ್ನು ಕಡಿಮೆ ಮಾಡುವುದು ಉತ್ತಮ.

ನಿಯಮಿತ ವ್ಯಾಯಾಮ: ಪ್ರತಿದಿನ ಶಾರೀರಿಕ ಚಟುವಟಿಕೆ ನಡೆಸುವುದರಿಂದ ತೂಕ ನಿಯಂತ್ರಣದಲ್ಲಿರುತ್ತದೆ.

ಸಾಕಷ್ಟು ನೀರು ಕುಡಿಯಿರಿ: ದೇಹದಲ್ಲಿ ನೀರಿನ ಕೊರತೆ ಆಗದಂತೆ ನೋಡಿಕೊಳ್ಳುವುದು ಕಿಡ್ನಿಗಳಿಗೆ ಸಹಾಯಕ.

ಬಿಪಿ ಮತ್ತು ಶುಗರ್ ನಿಯಂತ್ರಣ: ಹೈ ಬಿಪಿ ಹಾಗೂ ಡಯಾಬಿಟಿಸ್ ಇದ್ದರೆ ನಿಯಮಿತ ತಪಾಸಣೆ ಮಾಡಿಸಿಕೊಳ್ಳುವುದು ಮುಖ್ಯ.

ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ: ಇವು ಕಿಡ್ನಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.

ಸ್ಥೂಲಕಾಯವು ಕೇವಲ ದೇಹದ ತೂಕ ಹೆಚ್ಚಳವಲ್ಲ, ಇದು ಕಿಡ್ನಿ ಸೇರಿದಂತೆ ಹಲವು ಅಂಗಗಳ ಆರೋಗ್ಯಕ್ಕೂ ಅಪಾಯಕಾರಿಯಾಗಿದೆ. ಆದ್ದರಿಂದ ಆರೋಗ್ಯಕರ ಜೀವನಶೈಲಿ, ಸರಿಯಾದ ಆಹಾರ ಮತ್ತು ನಿಯಮಿತ ಆರೋಗ್ಯ ತಪಾಸಣೆ ಮೂಲಕ ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ