ಎಲ್ಲರಿಗೂ ಮಾದರಿ ಈ ಪುಟಾಣಿ ಮಕ್ಕಳ ಕಾರ್ಯ

| Updated By:

Updated on: Jun 06, 2020 | 7:37 AM

ಹಾವೇರಿ: ಪರಿಸರ ದಿನಾಚರಣೆ ಬಂತು ಅಂದರೆ ಸಾಕು ಒಂದೆರಡು ಗಿಡಗಳನ್ನು ನೆಟ್ಟು, ನೀರು ಹಾಕಿ ಪರಿಸರ ರಕ್ಷಣೆ ಬಗ್ಗೆ ಉದ್ದುದ್ದ ಭಾಷಣ ಮಾಡುವವರು ಸಾಕಷ್ಟು ಜನರಿದ್ದಾರೆ. ಆದರೆ ಹಾವೇರಿಯ ಬಸವೇಶ್ವರ ನಗರದ ಸಿ ಬ್ಲಾಕ್​ನಲ್ಲಿನ ಕೆಲವು ಪುಟಾಣಿ ಮಕ್ಕಳು ಕಳೆದ ಕೆಲವು ದಿನಗಳಿಂದ ಎಲ್ಲರಿಗೂ ಮಾದರಿ ಆಗುವಂತಹ ಕೆಲಸ ಮಾಡುತ್ತಿವೆ. ಬಸವೇಶ್ವರ ನಗರದಲ್ಲಿನ ತಮ್ಮ‌ತಮ್ಮ ಮನೆಗಳ ಅಕ್ಕಪಕ್ಕದ ರಸ್ತೆಗಳ ಪಕ್ಕದಲ್ಲಿ ಅರಣ್ಯ ಇಲಾಖೆಯವರು ಸಸಿಗಳನ್ನು ನೆಟ್ಟು ಹೋಗಿದ್ದಾರೆ. ಈ ಸಸಿಗಳಲ್ಲಿ ಒಂದೊಂದನ್ನು ತಮ್ಮದೆಂದು ಆಯ್ದುಕೊಂಡಿರುವ ಮಕ್ಕಳು ಸಸಿಗಳ […]

ಎಲ್ಲರಿಗೂ ಮಾದರಿ ಈ ಪುಟಾಣಿ ಮಕ್ಕಳ ಕಾರ್ಯ
Follow us on

ಹಾವೇರಿ: ಪರಿಸರ ದಿನಾಚರಣೆ ಬಂತು ಅಂದರೆ ಸಾಕು ಒಂದೆರಡು ಗಿಡಗಳನ್ನು ನೆಟ್ಟು, ನೀರು ಹಾಕಿ ಪರಿಸರ ರಕ್ಷಣೆ ಬಗ್ಗೆ ಉದ್ದುದ್ದ ಭಾಷಣ ಮಾಡುವವರು ಸಾಕಷ್ಟು ಜನರಿದ್ದಾರೆ. ಆದರೆ ಹಾವೇರಿಯ ಬಸವೇಶ್ವರ ನಗರದ ಸಿ ಬ್ಲಾಕ್​ನಲ್ಲಿನ ಕೆಲವು ಪುಟಾಣಿ ಮಕ್ಕಳು ಕಳೆದ ಕೆಲವು ದಿನಗಳಿಂದ ಎಲ್ಲರಿಗೂ ಮಾದರಿ ಆಗುವಂತಹ ಕೆಲಸ ಮಾಡುತ್ತಿವೆ.

ಬಸವೇಶ್ವರ ನಗರದಲ್ಲಿನ ತಮ್ಮ‌ತಮ್ಮ ಮನೆಗಳ ಅಕ್ಕಪಕ್ಕದ ರಸ್ತೆಗಳ ಪಕ್ಕದಲ್ಲಿ ಅರಣ್ಯ ಇಲಾಖೆಯವರು ಸಸಿಗಳನ್ನು ನೆಟ್ಟು ಹೋಗಿದ್ದಾರೆ. ಈ ಸಸಿಗಳಲ್ಲಿ ಒಂದೊಂದನ್ನು ತಮ್ಮದೆಂದು ಆಯ್ದುಕೊಂಡಿರುವ ಮಕ್ಕಳು ಸಸಿಗಳ ಪಾಲನೆ ಪೋಷಣೆಯಲ್ಲಿ ತೊಡಗಿದ್ದಾರೆ.

ಪ್ರತಿದಿನ ಬೆಳಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಇಲ್ಲಿನ ಹತ್ತಕ್ಕೂ ಅಧಿಕ ಪುಟಾಣಿ ಮಕ್ಕಳು ಅರಣ್ಯ ಇಲಾಖೆಯವರು ನೆಟ್ಟು ಹೋಗಿರುವ ಸಸಿಗಳಿಗೆ ನೀರು ತಂದು ಹಾಕುತ್ತಿದ್ದಾರೆ. ನೀರು ಹಾಕುವುದರ ಜೊತೆಗೆ ಸುತ್ತಮುತ್ತಲಿನ ರೈತರ ಮನೆಗಳಿಗೆ ಹೋಗಿ ಸಸಿಗಳಿಗೆ ಸಗಣಿ ತಂದು ಗೊಬ್ಬರವನ್ನಾಗಿ ಹಾಕುತ್ತಿದ್ದಾರೆ. ಇದರಿಂದ ಬಸವೇಶ್ವರ ನಗರದ ಸಿ ಬ್ಲಾಕ್ ನಲ್ಲಿ ಅರಣ್ಯ ಇಲಾಖೆಯವರು ನೆಟ್ಟು ಹೋಗಿರುವ ಸಸಿಗಳು ಬೆಳೆದು ದೊಡ್ಡವಾಗುತ್ತಿವೆ. ಹಸಿರಿನಿಂದ ಕಂಗೊಳಿಸುತ್ತಿವೆ.

ಒಂದೊಂದು ಸಸಿಗೂ ಒಬ್ಬೊಬ್ಬರದು ಹೆಸರು
ಬಸವೇಶ್ವರ ನಗರದ ಸಿ ಬ್ಲಾಕ್ ನಲ್ಲಿ ವಾಸವಾಗಿರುವ ಮಕ್ಕಳು ರಸ್ತೆ ಪಕ್ಕದಲ್ಲಿ ಅರಣ್ಯ ಇಲಾಖೆ ನೆಟ್ಟು ಹೋಗಿರುವ ಸಸಿಗಳನ್ನು ತಮ್ಮವು ಎಂಬಂತೆ ಭಾವಿಸಿ ಸಸಿಗಳಿಗೆ ನೀರು, ಸಗಣಿ ಗೊಬ್ಬರ ಹಾಕಿ ಪೋಷಣೆ ಮಾಡುತ್ತಿದ್ದಾರೆ. ಇದರ ಜೊತೆಗೆ ತಾವೆ ತಮ್ಮ ಕೈ ಬರಹಗಳಿಂದ ತಮ್ಮ‌ತಮ್ಮ ಹೆಸರುಗಳನ್ನು ಬರೆದು ಸಸಿಗಳಿಗೆ ನಾಮಫಲಕ ಹಾಕಿದ್ದಾರೆ. ಪ್ರತಿಯೊಂದು ಮಕ್ಕಳು ತಮ್ಮ ತಮ್ಮ ಹೆಸರುಗಳು ಇರುವ ಸಸಿಗಳನ್ನು ನೀರೆರೆದು, ಗೊಬ್ಬರ ಹಾಕಿ ಪೋಷಣೆ ಮಾಡುತ್ತಿದ್ದಾರೆ.

ಪರಿಸರ ದಿನಾಚರಣೆ ಬಂದಾಗ ಮಾತ್ರ ಪರಿಸರ ರಕ್ಷಣೆ ಮಾತುಗಳನ್ನು ಅಡುವ ಜನರ ನಡುವೆ ನಿತ್ಯವೂ ಪರಿಸರ ರಕ್ಷಣೆ ಕಾಯಕದಲ್ಲಿ ತೊಡಗಿರುವ ಪುಟಾಣಿ ಮಕ್ಕಳ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ. ನಿತ್ಯವೂ ಈ ರಸ್ತೆಯಲ್ಲಿ ಓಡಾಡುವ ಜನರಿಗಂತೂ ಮಕ್ಕಳ ಕಾರ್ಯ ಸಖತ್ ಖುಷಿ ಕೊಡುತ್ತದೆ.

Published On - 7:36 am, Sat, 6 June 20