ಹೋರಿಯ ಹೆಸರಲ್ಲಿ ದೇವಸ್ಥಾನ ಕಟ್ಟಿದ್ದು ನೋಡಿದ್ದೀರಾ?

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕದರಮಂಡಲಗಿಯಲ್ಲಿ, KDM KING-108 ಹೆಸರಿನ ಕೊಬ್ಬರಿ ಹೋರಿಯೊಂದು ಹೃದಯಾಘಾತದಿಂದ ಮೃತಪಟ್ಟಿದೆ. 12 ವರ್ಷಗಳ ಕಾಲ ಸೋಲಿಲ್ಲದ ಸರದಾರನಾಗಿದ್ದ ಈ ಚಾಂಪಿಯನ್ ಹೋರಿಗಾಗಿ ಮಾಲೀಕ ಕಾಂತೇಶ ನಾಯಕ್ ದೇವಸ್ಥಾನ ನಿರ್ಮಿಸಲು ಮುಂದಾಗಿದ್ದಾರೆ. ಸೆಲೆಬ್ರಿಟಿಗಳಂತೆ ಹೋರಿಗೂ ಅಭಿಮಾನಿಗಳಿದ್ದು, ಅದರ ಸಾಧನೆಗಳಿಗೆ ಗೌರವವಾಗಿ ಈ ದೇವಸ್ಥಾನ ಕಟ್ಟಲಾಗುತ್ತಿದೆ.

ಹೋರಿಯ ಹೆಸರಲ್ಲಿ ದೇವಸ್ಥಾನ ಕಟ್ಟಿದ್ದು ನೋಡಿದ್ದೀರಾ?
ಹೋರಿಗಾಗಿ ದೇವಸ್ಥಾನ ನಿರ್ಮಿಸಲು ಮುಂದಾದ ಮಾಲೀಕ

Updated on: Dec 12, 2025 | 2:34 PM

ಹಾವೇರಿ, ಡಿಸೆಂಬರ್ 12: ದೇಶದಲ್ಲಿ ಹಲವಾರು ಸೆಲೆಬ್ರಿಟಿಗಳ ದೇವಸ್ಥಾನವನ್ನು ನೀವು ನೋಡಿರಬಹುದು. ಅದೇ ರೀತಿ ಹಾವೇರಿ (Haveri) ಜಿಲ್ಲೆ ಬ್ಯಾಡಗಿ ತಾಲ್ಲೂಕಿನಲ್ಲಿ ಹೋರಿಗೂ ಒಂದು ದೇವಸ್ಥಾನ ಕಟ್ಟಲು ಅದರ ಮಾಲೀಕ ಮುಂದಾಗಿದ್ದಾನೆ. ಕದರಮಂಡಲಗಿ ಗ್ರಾಮದಲ್ಲಿ KDM KING-108 ಎಂಬ ಹೋರಿ ಹೃದಯಾಘಾತದಿಂದ ಮೃತಪಟ್ಟಿದ್ದು, ಮನೆಯ ಮುಂದೆಯೇ ಅದರ ಅಂತ್ಯಸಂಸ್ಕಾರಕ್ಕೆ

ಹೋರಿಯ ಹೆಸರಲ್ಲಿ ದೇವಸ್ಥಾನ

ದೇಶದ ಹಲವು ಸೆಲೆಬ್ರಿಟಿಗಳಿಗೆ ಕೋಟ್ಯಾಂತರ ಅಭಿಮಾನಿಗಳ ಬಳಗವಿದ್ದು, ತಮ್ಮ ನೆಚ್ಚಿನ ಸಿನಿಮಾ ನಟರನ್ನೋ ಅಥವಾ ಕ್ರಿಕೆಟಿಗರನ್ನೋ ಪೂಜಿಸುವ ಮಟ್ಟಿಗೆ ಪ್ರೀತಿ, ಅಭಿಮಾನ ಹೊಂದಿದ್ದಾರೆ. ಅಮಿತಾಬ್ ಬಚ್ಚನ್, ರಜನಿಕಾಂತ್ ಸೇರಿದಂತೆ ಕ್ರಿಕೆಟ್ ದೇವರೆಂದೇ ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಇವರೆಲ್ಲರ ಅಪ್ಪಟ ಅಭಿಮಾನಿಗಳು ಈ ವ್ಯಕ್ತಿಗಳ ಹೆಸರಿನ ದೇವಸ್ಥಾನಗಳನ್ನು ಕಟ್ಟಿಸಿದ್ದಿದೆ. ಆದರೆ ಹಾವೇರಿಯಲ್ಲೊಬ್ಬ ಕಾಂತೇಶ ನಾಯಕ್ ಎಂಬಾತ ತನ್ನ ಮೃತ ಕೊಬ್ಬರಿ ಹೋರಿ KDM KING-108 ಹೆಸರಿನಲ್ಲಿ ದೇವಸ್ಥಾನ ಕಟ್ಟಿಸಲು ಮುಂದಾಗಿದ್ದಾನೆ.

12 ವರ್ಷದಿಂದ ಸೋಲಿಲ್ಲದ ಸರದಾರನಾಗಿದ್ದ ಹೋರಿ

ಕರ್ನಾಟಕದಲ್ಲಿ ಹೋರಿ ಹಬ್ಬಗಳಲ್ಲಿ  ಭಾಗವಹಿಸುವ ಹೋರಿಗಳಿಗೆ ಕೊಬ್ಬರಿ ಹೋರಿ ಎನ್ನಲಾಗುತ್ತದೆ.  ಹಾವೇರಿಯ ಪ್ರಸಿದ್ಧ ಕೊಬ್ಬರಿ ಹೋರಿಯೊಂದು ಮೃತಪಟ್ಟಿದೆ. ಹೋರಿಯ ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಲು ನೂರಾರು ಅಭಿಮಾನಿಗಳು ಕಾಂತೇಶ್ ಮನೆ ಮುಂದೆ ಜಮಾಯಿಸಿದ್ದು, ಗ್ರಾಮದಲ್ಲಿ ಮೆರವಣಿಗೆ ನಡೆಸಿ ಮನೆಯ ಮುಂದೆ ಹಿಂದೂಸಂಪ್ರಾದಯದಂತೆ ಅಂತ್ಯಕ್ರಿಯೆಗೆ ಎಡೆಮಾಡಲಾಗಿದೆ. 12 ವರ್ಷ ಇತಿಹಾಸದಲ್ಲಿ ಸೋಲೇ ಇಲ್ಲದ ಸರದಾರವಾಗಿದ್ದ ಹೋರಿ, 11 ಬೈಕಗಳು, ಬಂಗಾರ, ಎತ್ತಿನಬಂಡಿ ,ಟಿವಿ ಸೇರಿದಂತೆ ಹಲವು ಬಹುಮಾನ ಗೆದ್ದಿತ್ತು. ಮಸಣದ ದೊರೆ, ಕಿಲ್ಲಿಂಗ್ ಸ್ಟಾರ್, ಮಲೆನಾಡ ಜನಗಳ ಜೀವಾ, ಕಾಂತೇಶನ ವರಪ್ರಸಾದ ಎಂಬ ಬಿರುದು ಪಡೆದಿದ್ದ KDM ಕಿಂಗ್ ಕೊಬ್ಬರಿ ಹೋರಿಯ ದೇವಸ್ಥಾನ ನಿರ್ಮಾಣಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಅಣ್ಣಪ್ಪ ಬಾರ್ಕಿ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.