ಹಾವೇರಿ: ತಿರುಪತಿಗೆ ತೆರಳುತ್ತಿದ್ದ ನಾಲ್ವರು ರಸ್ತೆ ಅಪಘಾತದಲ್ಲಿ ಸಾವು

| Updated By: ವಿವೇಕ ಬಿರಾದಾರ

Updated on: May 24, 2024 | 2:50 PM

ಕಾರಿನಲ್ಲಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹಾವೇರಿ ಪಟ್ಟಣದ ಅಶ್ವಿನಿ ನಗರದ ನಿವಾಸಿಗಳು ದಾವಣಗೆರೆ ಜಿಲ್ಲೆಯ ರಾಣೆಬೆನ್ನೂರು‌ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಹಾವೇರಿ: ತಿರುಪತಿಗೆ ತೆರಳುತ್ತಿದ್ದ ನಾಲ್ವರು ರಸ್ತೆ ಅಪಘಾತದಲ್ಲಿ ಸಾವು
ಅಪಘಾತದಲ್ಲಿ ಕಾರು ಜಕಂ
Follow us on

ಹಾವೇರಿ, ಮೇ 24: ರಾಣೆಬೆನ್ನೂರು‌ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ (NH 4) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಸುರೇಶ್ (45), ಐಶ್ವರ್ಯ (22), ಚೇತನಾ (7) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಮೀಳಾ (28) ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಮೃತ ನಾಲ್ವರೂ ಹಾವೇರಿ ಪಟ್ಟಣದ ಅಶ್ವಿನಿ ನಗರದ ನಿವಾಸಿಗಳಾಗಿದ್ದು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುತ್ತಿದ್ದರು. ಮಧ್ಯರಾತ್ರಿ 12.30ರ ಕಾರು ಚಾಲಕನ ನಿಯಂತ್ರಣ ತಪ್ಪಿ, ಕಾರು ಪಲ್ಟಿಯಾಗಿ ಸರ್ವಿಸ್ ರಸ್ತೆಗೆ ಬಿದ್ದಿದೆ. ಘಟನಾ ಸ್ಥಳಕ್ಕೆ ಹಾವೇರಿ (Haveri) ಎಸ್‌ಪಿ ಭೇಟಿ ಮಾಡಿ ಮಾಹಿತಿ ಕಲೆ ಹಾಕಿದರು.

ಕುಡಿದ ಮತ್ತಿನಲ್ಲಿ ನೀರಿಗೆ ಈಜಲು ಹೋಗಿ ಸಾವು

ಕಲಬುರಗಿ: ಕುಡಿದ ಮತ್ತಿನಲ್ಲಿ ಯುವಕ ಈಜಾಡಲು ಹೋಗಿ ಮೃತಪಟ್ಟಿದ್ದಾನೆ. ಹೈದರಾಬಾದ್ ಮೂಲದ ಸಾಜೀದ್ (25) ಮೃತ ದುರ್ದೈವಿ. ಸಾಜೀದ್​​ ಗೆಳೆಯರ ಜೊತೆ ಚೇಂಗಟಾದ ದರ್ಗಾಕ್ಕೆ ಬಂದಿದ್ದರು. ದರ್ಗಾ ದರ್ಶನ ಬಳಿಕ ಸಾಜೀದ್​​ ಮದ್ಯ ಸೇವಿಸಿದ್ದನು.

ನಶೆಯಲ್ಲೇ ಕಮಲಾಪುರ ತಾಲೂಕಿನ ಪಟವಾದ ಬ್ರಿಜ್ ಕಂ ಬ್ಯಾರೇಜ್​​ಗೆ ​​ನಲ್ಲಿ‌ ಈಜಾಡಲು ಹೋಗಿದ್ದಾನೆ. ಆದರೆ ಈಜಲಾಗದೇ ಮುಳುಗಿ ಸಾಜೀದ್​ ಮೃತಪಟ್ಟಿದ್ದಾಬೆ. ಸಾಜೀದ್​​ ಮುಳುಗುತ್ತಿರುವ ದೃಶ್ಯ ಗೆಳೆಯರು ಸೆರೆಹಿಡಿದ್ದಾರೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿಬಿರಾರ್ಥಿಗಳಿಗೆ ಚಿತ್ರ ಹಿಂಸೆ

ತುಮಕೂರು: ಹೊರವಲಯ ಹೆಗ್ಗೆರೆಯಲ್ಲಿ ಖುರಂ ಎಂಬುವರ ಒಡೆತನದಲ್ಲಿ ನಡೆಯುತ್ತಿರುವ ಮದ್ಯ ವರ್ಜನ ಕೇಂದ್ರದಲ್ಲಿ ಕುಡಿತದ ಚಟ ಬಿಡಿಸುತ್ತೇವೆಂದು ಶಿಬಿರಾರ್ಥಿಗಳಿಗೆ ಚಿತ್ರಹಿಂಸೆ ನೀಡಿದ್ದಾರೆ. ಕೇಂದ್ರದಲ್ಲಿನ 22 ಶಿಬಿರಾರ್ಥಿಗಳಿಗೆ ಊಟ ತಿಂಡಿ ನೀಡದೆ ಚಿತ್ರಹಿಂಸೆ ನೀಡಿದ್ದಾರೆ. ಇನ್ನು ಸಂಸ್ಥೆಯಲ್ಲಿ ಥಳಿತಕ್ಕೆ ಒಳಗಾದ ರೋಗಿ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ಚಿಕಿತ್ಸೆ ಪಡೆಯುತ್ತಿದ್ದ ಫೈರೋಜ್ ಖಾನ್ (33) ಮೃತ ದುರ್ದೈವಿ.

ತುಮಕೂರು ನಗರದ ಮರಳೂರು ದಿಣ್ಣೆ ನಿವಾಸಿ ಫೈರೋಜ್ ಖಾನ್ ಮೂರು ತಿಂಗಳಿಂದ ಮದ್ಯ ವರ್ಜನ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಫೈರೋಜ್ ಖಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಮೂರು ದಿನಗಳ ಮಫೈರೋಜ್ ಖಾನ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಫೈರೋಜ್ ಸಾವಿಗೆ ಸಂಸ್ಥೆ ಸಿಬ್ಬಂದಿಯೇ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:49 am, Fri, 24 May 24