ಸುಮಾರು ವರ್ಷಗಳಿಂದ ಅವರೆಲ್ಲ ಕೃಷಿಯನ್ನೆ ನಂಬಿ ಜೀವನ ಸಾಗಿಸ್ತಿದ್ದಾರೆ. ಈಗ ಕೈಗಾರಿಕಾ ಕಾರಿಡಾರ್ ಮಾಡೋದಾಗಿ ಸರಕಾರ ಅವರ ಜಮೀನು (agricultural land) ಸ್ವಾಧೀನಕ್ಕೆ ಮುಂದಾಗಿದೆ. ರೈತರಿಗೆ ಗೊತ್ತಿಲ್ಲದಂತೆ ರೈತರ ಭೂಮಿ ಸ್ವಾಧೀನಕ್ಕೆ ನೊಟೀಸ್ ಹೊರಡಿಸಿದೆ. ಇದರ ವಿರುದ್ಧ ಮೊನ್ನೆ ಪಾದಯಾತ್ರೆ ಮಾಡಿ ತಹಶಿಲ್ದಾರರ ಕಚೇರಿ ಬಂದ್ ಮಾಡಿ ರೈತರು ಪ್ರತಿಭಟನೆ (farmers protest) ಮಾಡಿದ್ದರು. ಮುಂದಿನ ದಿನಗಳಲ್ಲಿ ಹೆದ್ದಾರಿ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ (byadgi taluk) ಮೋಟೆಬೆನ್ನೂರು, ಅಳಲಗೇರಿ, ಅರಬಗೊಂಡ ಗ್ರಾಮದ ರೈತರು ತಮ್ಮ ಎತ್ತು, ಚಕ್ಕಡಿಗಳೊಂದಿಗೆ ತಹಶೀಲ್ದಾರ ಕಚೇರಿ ಅಂಗಳಕ್ಕೆ ಬಂದುನಿಂತಿದ್ದಾರೆ. ಇವರೆಲ್ಲರೂ ತಮ್ಮ ಪಾಡಿಗೆ ತಾವು ಅಂತಾ ಪಿತ್ರಾರ್ಜಿತವಾಗಿ ಬಂದಿದ್ದ ತಮ್ಮ ಜಮೀನಿನಲ್ಲಿ ಕೃಷಿ ಮಾಡ್ಕೊಂಡು ಜೀವನ ಸಾಗಿಸ್ತಿದ್ದವರು. ಆದ್ರೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಕೈಗಾರಿಕಾ ಕಾರಿಡಾರ್ ಮಾಡ್ತೀವಿ ಅಂತಾ ಮೂರು ಗ್ರಾಮಗಳ 1,017 ಎಕರೆ 17 ಗುಂಟೆ ಜಮೀನು ಸ್ವಾಧೀನಕ್ಕೆ ಮುಂದಾಗಿದೆ.
ರೈತರ ಗಮನಕ್ಕೆ ತಾರದೆ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿಗಳು ರೈತರಿಗೆ ಫೋರ್ ಒನ್ ನೊಟೀಸ್ ಹೊರಡಿಸಿದ್ದಾರೆ. ಇದು ಭೂಮಿ ಕಳೆದುಕೊಳ್ಳಲಿರೋ ರೈತರನ್ನು ಕೆರಳಿಸಿದೆ. ಹೀಗಾಗಿ ರೈತರು ಈಗ ಸರಕಾರದ ವಿರುದ್ಧ ಕೆರಳಿ ನಿಂತಿದ್ದಾರೆ. ತಹಶಿಲ್ದಾರರ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ಸತ್ಯಾಗ್ರಹ ನಡೆಸಿದ್ದಾರೆ. ಡಿಸೆಂಬರ್ 12 ರಂದು ಮೊಟ್ಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಮೂರು ಗ್ರಾಮಗಳ 1,017 ಎಕರೆ 17 ಗುಂಟೆ ಜಮೀನು ಸ್ವಾಧೀನಕ್ಕೆ ಕೆಐಎಡಿಬಿ ಈಗಾಗಲೆ ಫೋರ್ ಒನ್ ನೊಟೀಸ್ ನೀಡಿದೆ. ಕೈಗಾರಿಕಾ ಕಾರಿಡಾರ್ ಗೆ ಭೂಮಿ ಸ್ವಾಧೀನಕ್ಕೆ ಒಳಪಡೋ ಜಮೀನಿನಲ್ಲಿ ಬ್ಯಾಡಗಿ ಬಿಜೆಪಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹಾಗೂ ಕುಟುಂಬಸ್ಥರ ಒಂದು ನೂರು ಎಕರೆಗೂ ಅಧಿಕ ಜಮೀನಿದೆ. ಆದ್ರೆ ಜಮೀನು ಭೂಸ್ವಾಧೀನಕ್ಕೆ ಒಳಪಡ್ತಿರೋದು ಶಾಸಕರು ಮತ್ತು ಮತ್ತವರ ಕುಟುಂಬದವರಿಗೂ ಗೊತ್ತಿಲ್ವಂತೆ!
ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಕುಟುಂಬಸ್ಥರು ಸಹ ಕೈಗಾರಿಕಾ ಕಾರಿಡಾರ್ ಗೆ ಯಾವುದೇ ಕಾರಣಕ್ಕೂ ಭೂಮಿ ಕೊಡೋದಿಲ್ಲ ಅಂತಾ ರೈತರ ಪ್ರತಿಭಟನಾ ಧರಣಿಯಲ್ಲಿ ಕುಳಿತಿದ್ದಾರೆ. ಇನ್ನು ಈಗ ಕೆಐಎಡಿಬಿ ಸ್ವಾಧೀನಕ್ಕೆ ಮುಂದಾಗಿರೋ ಜಮೀನುಗಳಲ್ಲಿ ಬಹುತೇಕ ರೈತರು ನೀರಾವರಿ ಕೃಷಿ ಮಾಡ್ಕೊಂಡು ಜೀವನ ಸಾಗಿಸ್ತಿದ್ದಾರೆ. ಅಡಿಕೆ, ಹತ್ತಿ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ಜೀವನ ಸಾಗಿಸ್ತಿದ್ದಾರೆ. ಆದ್ರೆ ಅದ್ಯಾಕೋ ಸರಕಾರ ಕೈಗಾರಿಕಾ ಕಾರಿಡಾರ್ ಮಾಡೋಕೆ ಅಂತಾ ಫಲವತ್ತಾದ ರೈತರ ಜಮೀನಿನ ಮೇಲೆ ಕಣ್ಣು ಹಾಕಿದೆ. ಆದ್ರೆ ಇತ್ತ ರೈತರು ನಮ್ಮ ಭೂಮಿಯನ್ನ ನಮಗೆ ವಾಪಸ್ಸು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕೆಐಎಡಿಬಿ ರೈತರ ಜಮೀನು ಸ್ವಾಧೀನಕ್ಕೆ ಹೊರಡಿಸಿರೋ ನೊಟೀಸ್ ನಲ್ಲಿ ರೈತರು ಸ್ವಾಧೀನಕ್ಕೆ ಒಳಪಡೋ ಜಮೀನುಗಳನ್ನು ಮಾರಾಟ ಮಾಡುವುದಾಗಿ, ಜಮೀನಿನ ವಿನಿಮಯ, ಜಮೀನಿನಲ್ಲಿಯ ಮಣ್ಣು ತೆಗೆದುವುದಾಗಲಿ ಹೀಗೆ ಅನೇಕ ರೀತಿಯ ಷರತ್ತುಗಳನ್ನು ಹಾಕಿದೆ. ಸುಮಾರು ವರ್ಷಗಳಿಂದ ಪಿತ್ರಾರ್ಜಿತವಾಗಿ ಬಂದಿರೋ ಜಮೀನು ಉಳಿಮೆ ಮಾಡ್ತಿರೋ ಮೂರು ಗ್ರಾಮಗಳ ರೈತರು ಕೆಐಎಡಿಬಿ ನೊಟೀಸ್ ಕಂಡು ಕಂಗಾಲಾಗಿದ್ದಾರೆ. (ವರದಿ: ರವಿ ಹೂಗಾರ, ಟಿವಿ 9, ಹಾವೇರಿ)