ಹಾವೇರಿ: ಎತ್ತುಗಳಿಗೆ ಫುಲ್ ಸಿಂಗಾರ.. ಎತ್ತಿನ ಬಂಡಿಗೆ ಅದ್ಧೂರಿ ಅಲಂಕಾರ. ರಸ್ತೆಯುದ್ಧಕ್ಕೂ ಝಲ್ ಝಲ್ ಅಂಥಾ ಮಾರ್ಧನಿಸ್ತಿರೋ ಗಂಟೆ ನಾದ. ಹೊಯ್.. ಹೊಯ್.. ಹೈಯ್ಯಾ.. ಹೈಯ್ಯಾ ಅಂತ ಬಂಡಿ ಓಡಿಸ್ತಿರೋ ಮಂದಿ.. ಇದೇ ಕಣ್ರೀ ಹಳ್ಳೀ ಸೊಗಡಿನ ಖದರ್ ಅಂದ್ರೆ.
ಯೆಸ್.. ಹಳ್ಳಿ ಲೈಫ್ ಗಮ್ಮತ್ತೇ ಅಂಥಾದ್ದು. ಇಂಥಾ ಸೊಬಗು, ಮೋಜು ಸಿಗೋದು ಹಳ್ಳಿಗಾಡಿನಲ್ಲೇ ಬಿಡಿ. ದೇಶಕ್ಕೆ ರೈತ ಬೆನ್ನೆಲುಬಾದ್ರೆ, ಅದೇ ರೈತನಿಗೆ ಈ ಎತ್ತುಗಳೇ ಜೀವನಾಡಿ. ಅದ್ರೆ ಹಾವೇರಿ ಜಿಲ್ಲೆಯಲ್ಲಿ ಬಸ್, ಕಾರು, ಬೈಕ್ಗೆ ಹೊಡಿ ಗೋಲಿ, ಎತ್ತಿನಬಂಡಿಯಲ್ಲಿ ಸಾಗೋದೆ ಜಾಲಿ ಅಂತಿದ್ದಾರೆ.
ಮೈಲಾರ ಜಾತ್ರೆಗೆ ಹರಿದು ಬರುತ್ತಿರುವ ಜನ:
ಇನ್ನು, ಜಾತ್ರೆಗೆ ಅಂತನಾ ಎತ್ತಿನಬಂಡಿಗಳಿಗೆ ಕೊಲ್ಹಾರಿ ಕಟ್ಟಿ, ಎತ್ತುಗಳಿಗೆ ಜೂಲಾ ಹಾಕಿ, ಕೋಡಿಗೆ ಅಲಂಕಾರ ಮಾಡಿರ್ತಾರೆ. ಕೆಲವರು ಜಾತ್ರೆ ಆರಂಭದ ದಿನವೇ ಮೈಲಾರ ತಲುಪುವಂತೆ ಹೋದ್ರೆ, ಇನ್ನು
ಕೆಲವರು ಕಾರ್ಣಿಕ ವಾಣಿ ಕೇಳೋ ದಿನಕ್ಕೆ ಹೋಗ್ತಾರೆ. ನೂರಾರು ಕಿಲೋಮೀಟರ್ ಎತ್ತಿನ ಬಂಡಿಯಲ್ಲೇ ಸಾಗೋದ್ರಿಂದ ಊಟ, ತಿಂಡಿ ಕಟ್ಟಿಕೊಂಡಿರ್ತಾರೆ. ಅದ್ರಲ್ಲೂ ಜಾತ್ರೆಗೆ ಹೋಗೋ ಖುಷಿ ಒಂದ್ಕಡೆ, ಮತ್ತೊಂದ್ಕಡೆ ಎತ್ತಿನಗಾಡಿಯಲ್ಲಿ ಸಾಗೋದ್ರಲ್ಲೂ ಎಲ್ಲರೂ ಫುಲ್ ಎಂಜಾಯ್ ಮಾಡ್ತಾರೆ.
ಒಟ್ನಲ್ಲಿ, ಆಧುನಿಕತೆ ಬೆಳೆದಂತೆ ಹಳ್ಳಿಗಾಡಿನ ಸೊಬಗು, ಹಳ್ಳಿಯಲ್ಲಿನ ಸಂಪ್ರದಾಯಗಳ ಕಣ್ಮರೆಯಾಗ್ತಿವೆ. ಅದ್ರೀಗ, ಇಲ್ಲಿ ನಡೆಯೋ ಸ್ಪೆಷಲ್ ಜಾತ್ರೆ.. ಎತ್ತಿನಬಂಡಿಯಲ್ಲಿ ಫ್ಯಾಮಿಲಿ ಜೊತೆ ಟೂರ್ ಹೋಗ್ತಿರೋದು ನೋಡಿದ್ರೆ ಹಿಂದಿನ ಕಾಲದ ಸಂಸ್ಕೃತಿಗೆ ಜೀವಕಳೆ ಬಂದಿದೆ.