ಹೊರಬೀಡು ಆಚರಣೆ: ಊರಿಗೆ ಊರೇ ಖಾಲಿ ಖಾಲಿ!

|

Updated on: Feb 18, 2020 | 12:05 PM

ಹಾವೇರಿ: ಜಾತ್ರೆ ಎಂದಾಕ್ಷಣ ಆ ಗ್ರಾಮದಲ್ಲಿ ಸಂಭ್ರಮ ಜೋರಾಗಿರುತ್ತೆ. ಸುತ್ತಮುತ್ತ 10 ಹಳ್ಳಿಯ ಜನರು ಜಾತ್ರೆಯಲ್ಲಿ ಭಾಗಿಯಾಗಿ ಸಂಭ್ರಮಕ್ಕೆ ಸಾಕ್ಷಿಯಾಗ್ತಾರೆ. ಆದ್ರೆ ಕೆಲವೊಂದು ಗ್ರಾಮಗಳಲ್ಲಿ ಜಾತ್ರೆಯನ್ನ ವಿಶಿಷ್ಟವಾಗಿ ಆಚರಣೆ ಮಾಡುತ್ತಾರೆ. ಶಿಗ್ಗಾಂವಿ ತಾಲೂಕಿನ ಹೋತನಹಳ್ಳಿ ಗ್ರಾಮದಲ್ಲಿ 5 ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವಿ ಜಾತ್ರೆಗೆ ಇಡೀ ಊರನ್ನೇ ಗ್ರಾಮಸ್ಥರು ತೊರೆಯುತ್ತಿದ್ದಾರೆ. ಹೋತನಹಳ್ಳಿ ಗ್ರಾಮದಲ್ಲಿ ಹಿಂದಿನಿಂದಲೂ ವಿಶಿಷ್ಟ ಆಚರಣೆ ಚಾಲ್ತಿಯಲ್ಲಿದ್ದು, ಗ್ರಾಮದೇವಿ ಜಾತ್ರೆ ಪ್ರಯುಕ್ತ ಹೊರಬೀಡು ಆಚರಣೆಗೆ ಊರಿಗೆ ಊರೇ ಗ್ರಾಮಸ್ಥರು ಖಾಲಿ ಮಾಡುತ್ತಾರೆ. ಮನೆಯಲ್ಲಿರುವ ಎತ್ತು, ಎಮ್ಮೆ, ನಾಯಿ, […]

ಹೊರಬೀಡು ಆಚರಣೆ: ಊರಿಗೆ ಊರೇ ಖಾಲಿ ಖಾಲಿ!
Follow us on

ಹಾವೇರಿ: ಜಾತ್ರೆ ಎಂದಾಕ್ಷಣ ಆ ಗ್ರಾಮದಲ್ಲಿ ಸಂಭ್ರಮ ಜೋರಾಗಿರುತ್ತೆ. ಸುತ್ತಮುತ್ತ 10 ಹಳ್ಳಿಯ ಜನರು ಜಾತ್ರೆಯಲ್ಲಿ ಭಾಗಿಯಾಗಿ ಸಂಭ್ರಮಕ್ಕೆ ಸಾಕ್ಷಿಯಾಗ್ತಾರೆ. ಆದ್ರೆ ಕೆಲವೊಂದು ಗ್ರಾಮಗಳಲ್ಲಿ ಜಾತ್ರೆಯನ್ನ ವಿಶಿಷ್ಟವಾಗಿ ಆಚರಣೆ ಮಾಡುತ್ತಾರೆ. ಶಿಗ್ಗಾಂವಿ ತಾಲೂಕಿನ ಹೋತನಹಳ್ಳಿ ಗ್ರಾಮದಲ್ಲಿ 5 ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವಿ ಜಾತ್ರೆಗೆ ಇಡೀ ಊರನ್ನೇ ಗ್ರಾಮಸ್ಥರು ತೊರೆಯುತ್ತಿದ್ದಾರೆ.

ಹೋತನಹಳ್ಳಿ ಗ್ರಾಮದಲ್ಲಿ ಹಿಂದಿನಿಂದಲೂ ವಿಶಿಷ್ಟ ಆಚರಣೆ ಚಾಲ್ತಿಯಲ್ಲಿದ್ದು, ಗ್ರಾಮದೇವಿ ಜಾತ್ರೆ ಪ್ರಯುಕ್ತ ಹೊರಬೀಡು ಆಚರಣೆಗೆ ಊರಿಗೆ ಊರೇ ಗ್ರಾಮಸ್ಥರು ಖಾಲಿ ಮಾಡುತ್ತಾರೆ. ಮನೆಯಲ್ಲಿರುವ ಎತ್ತು, ಎಮ್ಮೆ, ನಾಯಿ, ಕೋಳಿ, ಕುರಿ ಸಮೇತ ಗ್ರಾಮಸ್ಥರು ಊರು ತೊರೆದು ಜಮೀನುಗಳಲ್ಲಿ ವಾಸಿಸುತ್ತಾರೆ.

ಸೂರ್ಯೋದಯಕ್ಕೂ ಮುನ್ನ ಊರು ತೊರೆಯುವ ಗ್ರಾಮಸ್ಥರು, ಸೂರ್ಯಾಸ್ಥದವರೆಗೆ ಗ್ರಾಮದ ಬಳಿ ಇರುವ ಜಮೀನುಗಳಲ್ಲಿ ವಾಸ ಮಾಡುತ್ತಾರೆ. ತಿಂಡಿ, ಊಟ ಎಲ್ಲವೂ ಜಮೀನುಗಳಲ್ಲೇ ಮಾಡುತ್ತಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ ಹೊರಬೀಡು ಆಚರಣೆ ವೇಳೆ ಗ್ರಾಮದಲ್ಲಿ ದೇವಿ ಓಡಾಡುತ್ತಾಳೆ ಅನ್ನೋ ನಂಬಿಕೆ. ಹಾಗಾಗಿಯೇ ಎರಡು ಮಂಗಳವಾರ ಗ್ರಾಮಸ್ಥರು ಊರು ತೊರೆಯುವ ಪದ್ಧತಿ ಇದೆ.






Published On - 11:45 am, Tue, 18 February 20