ಮುಂಜಾನೆ ಮಂಜಿನ ಸೊಬಗು: ಪ್ರಕೃತಿ ಸೌಂದರ್ಯಕ್ಕೆ ಮನಸೋತ ಹಾವೇರಿ ಜನ

|

Updated on: Feb 02, 2020 | 5:54 PM

ಹಾವೇರಿ: ಜೇಡರ ಬಲೆಗಳ ಮೇಲೆ ಮುತ್ತು ಪೋಣಿಸಿದಂತೆ ಇಬ್ಬನಿಯ ಹಾಸು. ಹಸಿರೆಲೆಗಳ ಮೇಲೆ ಮಂಜಿನ ಸೊಬಗು. ಇಳೆಗೆ ಸ್ವರ್ಣ ಬಿಂಬ ತಾಕುತ್ತಿರೋ ಸೂರ್ಯೋದಯದ ಕಿರಣಗಳು. ಚುಮು ಚುಮು ಚಳಿಯಲಿ, ಮುಂಜಾನೆ ಹೊತ್ತಲ್ಲಿ ಮುಂದಕ್ಕೆ ಹೆಜ್ಜೆ ಹಾಕ್ತಿದ್ರೆ ಸ್ವರ್ಗವೇ ಭಾಸವಾಗುತ್ತೆ. ಹೆಜ್ಜೆ ಹೆಜ್ಜೆಗೂ ನೀರಿನ ಹನಿ ಸೋಕುತ್ತೆ. ತಂಗಾಳಿ ಸ್ಪರ್ಶಕ್ಕೆ ಮನಸು ಹಕ್ಕಿಯಂತೆ ಹಾರುತ್ತೆ. ಪದಗಳಿಗೆ ನಿಲುಕದ ಇಂಥ ರಮಣೀಯ ದೃಶ್ಯಗಳು ಕಂಡುಬಂದಿದ್ದು ಹಾವೇರಿ ನಗರ ಸುತ್ತಮುತ್ತ. ನಗರದಲ್ಲಿ ಕಳೆದ ಕೆಲ ದಿನಗಳಿಂದ ಚಳಿಯ ವಾತಾವರಣವಿದೆ. ಹೀಗಾಗಿ ಮುಂಜಾನೆ […]

ಮುಂಜಾನೆ ಮಂಜಿನ ಸೊಬಗು: ಪ್ರಕೃತಿ ಸೌಂದರ್ಯಕ್ಕೆ ಮನಸೋತ ಹಾವೇರಿ ಜನ
Follow us on

ಹಾವೇರಿ: ಜೇಡರ ಬಲೆಗಳ ಮೇಲೆ ಮುತ್ತು ಪೋಣಿಸಿದಂತೆ ಇಬ್ಬನಿಯ ಹಾಸು. ಹಸಿರೆಲೆಗಳ ಮೇಲೆ ಮಂಜಿನ ಸೊಬಗು. ಇಳೆಗೆ ಸ್ವರ್ಣ ಬಿಂಬ ತಾಕುತ್ತಿರೋ ಸೂರ್ಯೋದಯದ ಕಿರಣಗಳು.

ಚುಮು ಚುಮು ಚಳಿಯಲಿ, ಮುಂಜಾನೆ ಹೊತ್ತಲ್ಲಿ ಮುಂದಕ್ಕೆ ಹೆಜ್ಜೆ ಹಾಕ್ತಿದ್ರೆ ಸ್ವರ್ಗವೇ ಭಾಸವಾಗುತ್ತೆ. ಹೆಜ್ಜೆ ಹೆಜ್ಜೆಗೂ ನೀರಿನ ಹನಿ ಸೋಕುತ್ತೆ. ತಂಗಾಳಿ ಸ್ಪರ್ಶಕ್ಕೆ ಮನಸು ಹಕ್ಕಿಯಂತೆ ಹಾರುತ್ತೆ. ಪದಗಳಿಗೆ ನಿಲುಕದ ಇಂಥ ರಮಣೀಯ ದೃಶ್ಯಗಳು ಕಂಡುಬಂದಿದ್ದು ಹಾವೇರಿ ನಗರ ಸುತ್ತಮುತ್ತ. ನಗರದಲ್ಲಿ ಕಳೆದ ಕೆಲ ದಿನಗಳಿಂದ ಚಳಿಯ ವಾತಾವರಣವಿದೆ. ಹೀಗಾಗಿ ಮುಂಜಾನೆ ಧರೆಗೆ ಮುತ್ತಿಕ್ಕೋ ಮಂಜಿನ ಹನಿ ಹೊಸ ಲೋಕವನ್ನೇ ಸೃಷ್ಟಿಸಿದೆ.

ಮುಂಜಾನೆ ಮಂಜಿನ ಹನಿಗೆ ಫುಲ್ ಫಿದಾ:
ಬೆಳ್ಳಂಬೆಳಗ್ಗೆ ಮನೆಯಿಂದ ಹೊರಟು ವಾಯುವಿಹಾರಕ್ಕೆ ಬರೋರಂತೂ ಸುಂದರ ಪರಿಸರಕ್ಕೆ ಫುಲ್ ಫಿದಾ ಆಗಿದ್ದಾರೆ. ಗಿಡಗಂಟಿಗಳಲ್ಲಿ ಕಟ್ಟಿರೋ ಜೇಡರ ಬಲೆ, ಮುಂಜಾನೆ ಬೀಳೋ ಮಂಜಿನ ಹನಿ, ಸೂರ್ಯೋದಯದ ಸೊಬಗು ಸಖತ್ ಎಂಜಾಯ್ ಮಾಡ್ತಿದ್ದಾರೆ. ಒಟ್ನಲ್ಲಿ, ಪ್ರಕೃತಿ ಸೌಂದರ್ಯ ಅಂದ್ರೇನೆ ಹಾಗೆ.. ಎಂಥವರನ್ನೂ ಮೂಕವಿಸ್ಮಿತರನ್ನಾಗಿಸೋ ಶಕ್ತಿ ಹೊಂದಿದೆ. ಸದ್ಯ ಹಾವೇರಿ ನಗರ ನಿವಾಸಿಗಳಿಗೆ ಪ್ರಕೃತಿ ಕಟ್ಟಿಕೊಟ್ಟಿರೋ ಇಬ್ಬನಿಯ ಸೊಬಗು ಕಣ್ಣಿಗೆ ಹಬ್ಬದಂತಾಗಿದೆ.