ಪೂರ್ತಿ ವಿಡಿಯೋ ಬೇಕಾದ್ರೆ ಫಾಲೋ- ಲೈಕ್ ಮಾಡುವಂತೆ ಪೋಸ್ಟ್ ಹಾಕುವವರೇ ಹುಷಾರ್
ಸೋಶಿಯಲ್ ಮಿಡೀಯಾದಲ್ಲಿ ಇತ್ತೀಚಿಗೆ ಲೈಕ್, ಕಾಮೆಂಟ್, ಫಾಲೋಗೋಸ್ಕರ ಹಲವಾರು ಅನೇಕ ರೀತಿಯ ಸರ್ಕಸ್, ರಿಸ್ಕ್ ಗಳನ್ನ ತೆಗೆದುಕೊಳ್ಳುತ್ತಿದ್ದಾರೆ.ಇದರಲ್ಲಿ ಒಂದಷ್ಟು ಜನ ಅಡ್ಡದಾರಿ ಕೂಡ ಹಿಡಿದ್ದಾರೆ. ಅಂತಹ ಸೋಷಿಯಲ್ ಮೀಡಿಯಾ ಅಕೌಂಟ್ ಗಳ ಬಳಕೆ ಮಾಡುವ ಕೆಲವರ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲು ಮಾಡಿ ಶಾಕ್ ಕೊಟ್ಟಿದ್ದಾರೆ.

ಬೆಂಗಳೂರು, (ಡಿಸೆಂಬರ್ 21): ಸೋಶಿಯಲ್ ಮೀಡಿಯಾ (Social Media) ಎನ್ನುವುದನ್ನು ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ದರು ಬಳಕೆ ಮಾಡುತ್ತಿರುವ ಮಾಧ್ಯಮ. ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವಂತೆ ಪ್ರತಿ ದಿನ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಪರವಾಗಿಲ್ಲ ಮೊಬೈಲ್ ಗೆ (Mobile ನೆಟ್ ಇರಬೇಕು ಅನ್ನೋ ಪರಿಸ್ಥಿತಿ ನಿರ್ಮಾಣ ಆಗಿದೆ. ಇದರ ಮಧ್ಯೆ ಕಟೆಂಟ್ ಕ್ರಿಯೆಟ್ ಹೆಸರಲ್ಲಿ ಹಲವರು ಲೈಕ್, ಫಾಲೋ, ಕಾಮೆಂಟ್ ಗಾಗಿ ನಾನಾ ರೀತಿ ಸರ್ಕಸ್ ಕೂಡ ಮಾಡುತ್ತಿದ್ದಾರೆ. ಕೆಲವರಂತೂ ತಪ್ಪು ದಾರಿ ಹಿಡಿಯುತ್ತಿದ್ದಾರೆ. ಅಶ್ಲೀಲತೆ ಮೂಲಕ ತಮ್ಮ ಫಾಲೋವರ್ಸ್ ಹೆಚ್ಚಳಕ್ಕೆ ಕೈ ಹಾಕಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೌದು..ಲೈಕ್, ಫಾಲೋವರ್ಸ್ಗಾಗಿ ಅಡ್ಡದಾರಿ ಹಿಡಿದಿರುವ ಸೋಷಿಯಲ್ ಮೀಡಿಯಾ ಅಕೌಂಟ್ ಗಳ ಬಳಕೆ ಮಾಡುವ ಕೆಲವರ ವಿರುದ್ಧ ಬೆಂಗಳೂರು ಪೊಲೀಸರು (Bengaluru Police) ಪ್ರಕರಣ ದಾಖಲಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಹೆಚ್ಚಿಸಿಕೊಳ್ಳುವ ಹುಚ್ಚಿನಿಂದ ಕೆಲವರು ಅಶ್ಲೀಲ ವಿಡಿಯೋ ತುಣುಕು, ಅಥವಾ ಪೋಟೋಗಳನ್ನ ಹಾಕಿ, ಆ ಪೂರ್ತಿ ವಿಡಿಯೋ ಬೇಕಾದ್ರೆ ತಮ್ಮ ಅಕೌಂಟ್ ಗಳನ್ನ ಫಾಲೋ ಮಾಡುವಂತೆ ಪೋಸ್ಟ್ ಮಾಡ್ತಿದ್ದಾರೆ. ಇದು ಸೋಶಿಯಲ್ ಮಿಡಿಯಾ ಓಪನ್ ಮಾಡುವ ಹಲವರಿಗೆ ಇರಿಸುಮುರಿಸು ಉಂಟು ಮಾಡುವಂತೆ ಮಾಡಿದೆ. ಇದೇ ಕಾರಣಕ್ಕೆ ಬೆಂಗಳೂರಿನ ಶ್ರೀಹರ್ಷ ಎನ್ನುವಂತ ವ್ಯಕ್ತಿ ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಗೂ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಅದರಂತೆ ಸೈಬರ್ ಕ್ರೈಂ ಪೊಲೀಸರು ಒಟ್ಟು 28 ಅಕೌಂಟ್ ಗಳ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ. ಜೊತೆಗೆ ಆ ಅಕೌಂಟ್ ಗಳಲ್ಲಿ ಹಾಕಲಾದ ಪೋಸ್ಟ್ ಗಳನ್ನ ಸಂಗ್ರಹ ಕೂಡ ಮಾಡಿದ್ದು, ಪೋಸ್ಡ್ ಹಾಕಿದವರ ಪತ್ತೆಗೆ ಮುಂದಾಗಿದ್ದಾರೆ.
ಮನರಂಜನೆಗೆ ಹಾಗೂ ಸಮಾಜದ ಒಳತಿಯ ವಿಚಾರಗಳನ್ನ ವಿನಿಮಯ ಮಾಡೋಕೆ ಬಳಕೆಯಾಗಬೇಕಿದ್ದ ಸೋಶಿಯಲ್ ಮೀಡಿಯಾ ಕೆಲವರಿಂದ ಸಮಾಜಕ್ಕೆ ಮಾರಕವಾಗುವ ಸ್ಥಿತಿ ತಲುಪುತ್ತಿದ್ದು, ಸದ್ಯ ಅಂತವರ ವಿರುದ್ಧ ಕ್ರಮಕ್ಕೆ ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ. ನೀವು ಏನಾದ್ರು ಲೈಕ್ ಕಾಮೆಂಟ್, ಫಾಲೋರ್ಸ್ ಗಾಗಿ ಈ ರೀತಿ ಮಾಡುತ್ತಿದ್ದರೆ ಹುಷಾರಾಗಿರಿ. ಇಲ್ಲ ಅಂದ್ರೆ ನಿಮ್ಮ ಮೇಲೂ ಕೇಸ್ ಬೀಳುವುದು ಗ್ಯಾರೆಂಟಿ.



