ಪುತ್ರಿ ಸಾವಿಗೆ ನ್ಯಾಯಕೊಡಿಸುವಂತೆ ಮಾಜಿ ಸಿಎಂ ಬೊಮ್ಮಾಯಿ ಕಾಲಿಗೆ ಬಿದ್ದ ಪೋಷಕರು

|

Updated on: Jun 18, 2023 | 6:02 PM

ಮೂರೂವರೆ ವರ್ಷಗಳ ಹಿಂದೆ ವಿದ್ಯಾರ್ಥಿನಿಯೊಬ್ಬಳು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಳು. ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆಯಾದರೂ ನ್ಯಾಯ ಸಿಕ್ಕಿಲ್ಲ. ಇಂದು ಮೃತೆಯ ಪೋಷಕರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಕಾಲಿಗೆ ಬಿದ್ದು ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಪುತ್ರಿ ಸಾವಿಗೆ ನ್ಯಾಯಕೊಡಿಸುವಂತೆ ಮಾಜಿ ಸಿಎಂ ಬೊಮ್ಮಾಯಿ ಕಾಲಿಗೆ ಬಿದ್ದ ಪೋಷಕರು
ಪುತ್ರಿ ಸಾವಿಗೆ ನ್ಯಾಯಕೊಡಿಸುವಂತೆ ಮಾಜಿ ಸಿಎಂ ಬೊಮ್ಮಾಯಿ ಕಾಲಿಗೆ ಬಿದ್ದ ಪೋಷಕರು
Follow us on

ಹಾವೇರಿ: ಮೂರೂವರೆ ವರ್ಷಗಳ ಹಿಂದೆ ನಡೆದಿದ್ದ ವಿದ್ಯಾರ್ಥಿನಿಯೊಬ್ಬಳ ಅನುಮಾನಸ್ಪದ ಸಾವು ಪ್ರಕರಣ ಸಂಬಂಧ ಇಂದು ಮೃತೆಯ ಪೋಷಕರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಕಾಲಿಗೆ ಬಿದ್ದು ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ. ಹಾವೇರಿ (Haveri) ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಮಡ್ಲಿ ಗ್ರಾಮದಲ್ಲಿ ನಡೆದ ಘಟನೆ ಇದಾಗಿದೆ.

ಕಸ್ತೂರಬಾ ಹಾಸ್ಟೆಲ್​ನಲ್ಲಿ 2019ರ ಡಿಸೆಂಬರ್ 8ರಂದು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಮಡ್ಲಿ ಗ್ರಾಮದ ಸಾವಕ್ಕ, ಅಶೋಕ್ ಮರಿಲಿಂಗಪ್ಪನವರ ದಂಪತಿ ಪುತ್ರಿ ದ್ಯಾಮವ್ವ ಎಂಬ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು. ನೇನುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಆಕೆಯ ಶವ ಕಂಡು ಪೋಷಕರು ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂಬ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ವಿದ್ಯಾರ್ಥಿನಿ ತಂದೆ ಅಶೋಕ್ ಪೋಲೀಸ್ ಠಾಣೆಗೆ ದೂರು ನೀಡಿದ್ದರು.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರೂ ಪ್ರಕರಣದ ಬಗ್ಗೆ ಸೂಕ್ತ ತನಿಖೆ ‌ಇನ್ನೂ ಆಗಿಲ್ಲ. ಹೀಗಾಗಿ ಮಗಳ ಸಾವಿಗೆ ‌ನ್ಯಾಯ ಕೊಡಿಸಿ ಎಂದು ಬೊಮ್ಮಾಯಿ ಅವರ ಕಾಲಿಗೆ ಬಿದ್ದು ಮನವಿ ‌ಮಾಡಿದರು. ಇದೇ ವೇಳೆ ಮೃತೆಯ ಪೋಷಕರೊಂದಿಗೆ ಮಾತನಾಡಿದ,‌ ಸಿಐಡಿಯಿಂದ ತನಿಖೆಗೆ ‌ಆದೇಶಿಸಿರುವುದಾಗಿ ಹೇಳಿ ತೆರಳಿದರು.

ಇದನ್ನೂ ಓದಿ: ಯಡಿಯೂರಪ್ಪ ಬಳಿಕ ಅಧಿಕಾರಕ್ಕೆ ಬಂದವರು ಮಾಡಿದ್ದೇನು? ಅವರಿಂದ ಅಧಿಕಾರ ಪಡೆದ ಅತಿರಥರು ಮಾಡಿದ್ದೇನು?: ಬೊಮ್ಮಾಯಿ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಫೈಟ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಯಾಱರೋ ಕಾಮೆಂಟ್ ಮಾಡುತ್ತಾರೆ ಅಂದರೆ ನಾನು ರಿಪ್ಲೈ ಮಾಡಲು ಆಗುತ್ತದೆಯೇ ಎಂದು ಹೇಳಿ ಮೈಕ್ ದೂರ ತಳ್ಳಿದರು.

ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಬೊಮ್ಮಾಯಿ

ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ ಹಾಗೂ ಜನ ಬಿಲ್ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಕಿವಿಮಾತು ಹೇಳುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಬೊಮ್ಮಾಯಿ, ಶುಲ್ಕ ಪಾವತಿಸದಿದ್ದರೆ ವಿದ್ಯುತ್ ಪೂರೈಕೆ ಆಗುವುದಿಲ್ಲ. ರಾಜ್ಯದಲ್ಲಿ ಮಳೆ ಇಲ್ಲ, ಬರ ಬಂದಿದೆ. ಜನರಿಗೆ ಕುಡಿಯುವ ನೀರು, ಕೃಷಿಗೆ ನೀರು ಇಲ್ಲದೇ ಸಮಸ್ಯೆ ಆಗಿದೆ. ಕುಡಿಯುವ ನೀರು ಸರಬರಾಜು ಆಗಲು ವಿದ್ಯುತ್ ಬೇಕು. ಕರೆಂಟ್ ನೀಡದಿದ್ದರೆ ಕುಡಿಯುವ ನೀರಿಗೆ ಹಾಹಾಕಾರ ಆಗುತ್ತದೆ. ಹೈಡ್ರೋ ಎಲೆಕ್ಟ್ರಿಕ್ ಪವರ್ ಕೊರತೆ ಇದೆ. ವಿದ್ಯುತ್ ಇಲಾಖೆಯ ಎಲ್ಲಾ ನಿಗಮಗಳಿಗೆ ಹಣ ಬಿಡುಗಡೆ ಮಾಡಬೇಕು. ಸರಿಯಾದ ಕ್ರಮ ತೆಗೆದುಕೊಳ್ಳದಿದ್ರೆ ವಿದ್ಯುತ್ ಶಕ್ತಿಯ ಕ್ಷಾಮ ಎದುರಾಗಲಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ