ಹಾವೇರಿ: ಸಹಶಿಕ್ಷಕನಿಂದ ಲೈಂಗಿಕ ಕಿರುಕುಳ ನಡೆದಿದೆ ಎಂದು ಇಬ್ಬರು ಮಹಿಳಾ ಶಿಕ್ಷಕರಿಯರು ಆರೋಪ ಮಾಡಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬಮ್ಮನಹಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಈ ಪ್ರಕರಣ ನಡೆದಿದೆ.
ಸಹಶಿಕ್ಷಕನ ಕೃತ್ಯದಿಂದ ಕಣ್ಣೀರು ಹಾಕಿದ ಇಬ್ಬರು ಶಿಕ್ಷಕಿಯರು ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಸಿದ್ದಪ್ಪ ಜೋಗಿ ವಿರುದ್ಧ ಆರೋಪ ಮಾಡಿದ್ದಾರೆ. ಸಹಶಿಕ್ಷಕಿಯರು ಮತ್ತು ಮುಖ್ಯೋಪಾಧ್ಯಾಯಿನಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಶಿಕ್ಷಕನ ಕೃತ್ಯಕ್ಕೆ ಬೇಸತ್ತು ಸಹಶಿಕ್ಷಕಿ ಮತ್ತು ಮುಖ್ಯೋಪಾಧ್ಯಾಯಿನಿ ಕಣ್ಣೀರು ಹಾಕಿದ್ದಾರೆ. ಶಾಲೆಗೆ ಡಿಡಿಪಿಐ ಜಗದೀಶ್ವರ್ ಹಾಗೂ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಆದರೆ ಸಹ ಶಿಕ್ಷಕಿಯರು ಮತ್ತು ಮುಖ್ಯೋಪಾಧ್ಯಾಯಿನಿಯಿಂದ ಕೇಳಿಬಂದಿರುವ ಆರೋಪವನ್ನು ಸಹಶಿಕ್ಷಕ ಸಿದ್ದಪ್ಪ ಅಲ್ಲಗಳೆದಿದ್ದಾರೆ. ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.