ಕೇವಲ 210 ರೂ. ಗೆ ಲಸಿಕೆ ಸಿಗುತ್ತಿದೆ, ಖುಷಿ ಪಡೋಣ: ಸಚಿವ ಡಾ. ಕೆ. ಸುಧಾಕರ್

|

Updated on: Jan 16, 2021 | 12:48 PM

20 ರಿಂದ 30 ಸಾವಿರ ಕ್ಲಿನಿಕಲ್ ಟ್ರಯಲ್ ಆಗಿದೆ. ವಿದೇಶದಲ್ಲೂ ನಮ್ಮ ಲಸಿಕೆಗೆ ಡಿಮ್ಯಾಂಡ್ ಇದೆ. ಅದರಲ್ಲೂ ಕೇವಲ 210 ರೂಪಾಯಿಗೆ ಲಸಿಕೆ ಸಿಗುತ್ತಿದೆ ಖುಷಿ ಪಡೋಣ.

ಕೇವಲ 210 ರೂ. ಗೆ ಲಸಿಕೆ ಸಿಗುತ್ತಿದೆ, ಖುಷಿ ಪಡೋಣ: ಸಚಿವ ಡಾ. ಕೆ. ಸುಧಾಕರ್
ಸಚಿವ ಕೆ.ಸುಧಾಕರ್
Follow us on

ಬೆಂಗಳೂರು: ದೇಶದಲ್ಲಿ ಇಂದಿನಿಂದ ಕೊರೊನಾ ಲಸಿಕೆ ನೀಡಿವುವ ಅಭಿಯಾನ ಶುರುವಾಗಿದ್ದು, ಪ್ರಾರಂಭಿಕವಾಗಿ ವಿಕ್ಟೋರಿಯಾ ವ್ಯಾಕ್ಸಿನೇಷನ್‌ ಸೆಂಟರ್​ನಲ್ಲಿ 100 ಜನಕ್ಕೆ ಕೊಟ್ಟಿದ್ದೇವೆ. ಇವತ್ತು ಒಂದೇ ದಿನ 247 ಸೆಂಟರ್ ಗಳಲ್ಲಿ 24 ಸಾವಿರದ 700 ಮಂದಿಗೆ ಕೊಡ್ತಿದ್ದೇವೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿಕೆ ನೀಡಿದ್ದಾರೆ.

ಮೊದಲಿಗೆ ಬಿಡದಿ ಮೂಲದ ನಾಗರತ್ನ ಎಂಬವರಿಗೆ ನೀಡಿದ್ದೇವೆ. ಡಾ. ಸುದರ್ಶನ್, ಎಂಕೆ ಸಮೂಹ ಆರೋಗ್ಯದ ಹೆಸರಾಂತ ವೈದ್ಯರು ಅವರು ಲಸಿಕೆ ತೆಗೆದುಕೊಂಡಿದ್ದಾರೆ ಹಾಗೂ ಡಾ. ಸುದರ್ಶನ್ ಬಲ್ಲಾಳ್ ಕೂಡ ಲಸಿಕೆ ತೆಗೆದುಕೊಂಡಿದ್ದಾರೆ. ಜನರಲ್ಲಿ ಆತಂಕ ಹೋಗಬೇಕು ಅಂತಾ ಅವರು ಮುಂದೆ ಬಂದು ತೆಗೆದುಕೊಂಡಿದ್ದಾರೆ.

ಡಾ. ಸುದರ್ಶನ್ ಬಲ್ಲಾಳ್

ಕೇವಲ 10 ತಿಂಗಳಲ್ಲಿ ಲಸಿಕೆ ಕಂಡುಹಿಡಿದಿದ್ದಾರೆ..
ಜನರು ನಂಬಿಕೆಯಿಂದ ಮುಂದೆ ಬಂದು ಲಸಿಕೆ ತೆಗೆದುಕೊಳ್ಳಬೇಕು. ಕೇವಲ 10 ತಿಂಗಳಲ್ಲಿ ಲಸಿಕೆ ಕಂಡುಹಿಡಿದಿದ್ದಾರೆ ಅವರಿಗೆ ನಾವೂ ಅಭಾರಿಯಾಗಿರಬೇಕು. ಇವರನ್ನ ಪ್ರೇರಪಿಸಿದ ಪ್ರಧಾನಿ ನರೇಂದ್ರ ಮೋದಿಗೆ ಹಾಗೂ ನಮ್ಮ ರಾಜ್ಯದಲ್ಲಿ ಸಿಎಂ ಬಿಎಸ್ ವೈ ಕೊಟ್ಟ ಸಹಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕೇವಲ 210 ರೂಪಾಯಿಗೆ ಲಸಿಕೆ ಸಿಗುತ್ತಿದೆ..
ಸಣ್ಣ ಅಡ್ಡಪರಿಣಾಮ ಆದ್ರು ಕೂಡ ಅಲ್ಲೇ ಚಿಕಿತ್ಸೆ ಕೊಡಲಾಗುತ್ತೆ. 20 ರಿಂದ 30 ಸಾವಿರ ಕ್ಲಿನಿಕಲ್ ಟ್ರಯಲ್ ಆಗಿದೆ. ವಿದೇಶದಲ್ಲೂ ನಮ್ಮ ಲಸಿಕೆಗೆ ಡಿಮ್ಯಾಂಡ್ ಇದೆ. ಅದರಲ್ಲೂ ಕೇವಲ 210 ರೂಪಾಯಿಗೆ ಲಸಿಕೆ ಸಿಗುತ್ತಿದೆ ಖುಷಿ ಪಡೋಣ. ಮುಂದಿನ ದಿನಗಳಲ್ಲಿ ರಾಜ್ಯದ ಜನರಿಗೆ ಹಂತ ಹಂತವಾಗಿ ಲಸಿಕೆ ನೀಡಲಾಗುತ್ತದೆ ಅಂತಾ ಡಾ. ಕೆ ಸುಧಾಕರ್ ಹೇಳಿಕೆ ನೀಡಿದರು.

ಸಂಪೂರ್ಣ ವಿಶ್ವಾಸದೊಂದಿಗೆ ಲಸಿಕೆ ತೆಗೆದುಕೊಳ್ಳಿ: ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿಕೆ