ಭಾರಿ ಗಾಳಿ, ಮಳೆಗೆ ಮೆಣಸಿಕಾಯಿ ಬೆಳೆ ನಾಶ; ಹೆಚ್ಚು ನಿರೀಕ್ಷೆಯಲ್ಲಿದ್ದ ಮೈಸೂರು ರೈತ ಕಂಗಾಲು

|

Updated on: May 13, 2021 | 9:55 AM

ಹುಣಸೂರಿನಲ್ಲಿ ತಡರಾತ್ರಿ ಬಂದ ಮಳೆ, ಗಾಳಿಯಿಂದ ಸುಮಾರು 8 ಎಕರೆಯಲ್ಲಿ ಬೆಳೆಸಿದ್ದ ಮೆಣಸಿನಕಾಯಿ ಬೆಳೆಗೆ ಹಾನಿಯಾಗಿದೆ. ಕಾಳಬೋಚನಹಳ್ಳಿ ಗ್ರಾಮದ ಪುಟ್ಟಸ್ವಾಮಿ ಗೌಡ ಎಂಬ ರೈತರು 8 ಎಕರೆಯಲ್ಲಿ ಮೆಣಸಿನಕಾಯಿಯನ್ನು ಬೆಳೆದಿದ್ದರು. ಬೆಳೆಗೆ 5 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದರು.

ಭಾರಿ ಗಾಳಿ, ಮಳೆಗೆ ಮೆಣಸಿಕಾಯಿ ಬೆಳೆ ನಾಶ; ಹೆಚ್ಚು ನಿರೀಕ್ಷೆಯಲ್ಲಿದ್ದ ಮೈಸೂರು ರೈತ ಕಂಗಾಲು
ಮೆಣಸಿನಕಾಯಿ (ಸಾಂದರ್ಭಿಕ ಚಿತ್ರ)
Follow us on

ಮೈಸೂರು: ಕೊರೊನಾ ಎರಡನೇ ಅಲೆಯಿಂದ ಈಗಾಗಲೇ ರೈತ ಸಂಕಷ್ಟವನ್ನು ಅನುಭವಿಸುತ್ತಿದ್ದಾನೆ. ರಾಜ್ಯದಲ್ಲಿ ಲಾಕ್​ಡೌನ್​ ಜಾರಿಯಿರುವ ಕಾರಣ ಹೆಚ್ಚು ವ್ಯಾಪಾರವಾಗುತ್ತಿಲ್ಲ. ಹೀಗಾಗಿ ರೈತ ಬೆಳೆದ ಬೆಳೆಗೆ ಬೆಲೆ ಇಲ್ಲದಂತಾಗಿದೆ. ಕೃಷಿಯನ್ನೇ ನಂಬಿದ್ದ ರೈತರಿಗೆ ಮುಂದಿನ ಜೀವನ ಹೇಗೆ ಎಂಬ ಆತಂಕ ಎದುರಾಗಿದೆ. ಈ ನಡುವೆ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಭಾರಿ ಗಾಳಿ, ಮಳೆಗೆ ಜಿಲ್ಲೆಯ ಹುಣಸೂರು ತಾಲೂಕಿನ ಕಾಳಬೋಚನಹಳ್ಳಿ ಗ್ರಾಮದಲ್ಲಿ ಬೆಳೆದ ಮೆಣಸಿಕಾಯಿ ಬೆಳೆ ನಾಶವಾಗಿದೆ.

ಹುಣಸೂರಿನಲ್ಲಿ ತಡರಾತ್ರಿ ಬಂದ ಮಳೆ, ಗಾಳಿಯಿಂದ ಸುಮಾರು 8 ಎಕರೆಯಲ್ಲಿ ಬೆಳೆಸಿದ್ದ ಮೆಣಸಿನಕಾಯಿ ಬೆಳೆಗೆ ಹಾನಿಯಾಗಿದೆ. ಕಾಳಬೋಚನಹಳ್ಳಿ ಗ್ರಾಮದ ಪುಟ್ಟಸ್ವಾಮಿ ಗೌಡ ಎಂಬ ರೈತರು 8 ಎಕರೆಯಲ್ಲಿ ಮೆಣಸಿನಕಾಯಿಯನ್ನು ಬೆಳೆದಿದ್ದರು. ಬೆಳೆಗೆ 5 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದರು. 20 ಲಕ್ಷದ ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ ಬಾರಿ ಮಳೆಯಿಂದ ಬೆಳೆ ಕೈಗೆ ಬರುವ ವೇಳೆ ಬೆಳೆ ನೆಲಕಚ್ಚಿ ಹೋಗಿದೆ.

ಬಿಕರಿಯಾಯ್ತು ರೈತ ಬೆಳೆದ ಸೊಪ್ಪು
ಕೋಲಾರ: ಕೊರೊನಾ ಹಿನ್ನೆಲೆ ರೈತ ಬೆಳೆದ ಸೊಪ್ಪು ಬಿಕಾರಿಯಾಗಿದೆ. ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಕಾರಣ ಸಿಕ್ಕ ಬೆಲೆಗೆ ಸೊಪ್ಪು ಮಾರಾಟವಾಗುತ್ತಿದೆ. ಇಪ್ಪತ್ತು ರೂಪಾಯಿಗೆ ಮಾರಾಟವಾಗುತ್ತಿದ್ದ ದಂಟಿನ ಸೊಪ್ಪು ಇದೀಗ ಹತ್ತು ರೂಪಾಯಿಗೆ ಎರಡು ಕಟ್ಟಿನಂತೆ ಮಾರಾಟವಾಗುತ್ತಿದೆ.

ಇದನ್ನೂ ಓದಿ

ರಾಜ್ಯದ ಅತೀ‌ ದೊಡ್ಡ ಜಿಲ್ಲೆ ಉತ್ತರ ಕನ್ನಡದಲ್ಲಿಯೇ ಇಲ್ಲ ಸಿಟಿ ಸ್ಕ್ಯಾನ್ ಸೌಲಭ್ಯ, ಅನ್ಯ ಜಿಲ್ಲೆಗಳಿಗೆ ಹೋಗಿಯೇ ಮಾಡಿಸಬೇಕು ಟೆಸ್ಟ್

ಮತ್ತೆ ಶುರುವಾಗಲಿದೆ ಮಹಾಭಾರತ; ವೀಕ್ಷಕರ ಬೇಡಿಕೆಗೆ ಸ್ಪಂದಿಸಿ ಎರಡೂವರೆ ತಾಸು ಪ್ರಸಾರ ಮಾಡಲು ನಿರ್ಧರಿಸಿದ ವಾಹಿನಿ

(Heavy rains have destroyed chilly crop at Mysuru)