ಸಿಲಿಕಾನ್ ಸಿಟಿಯಲ್ಲಿ ಪೌರತ್ವ ಕಾಯ್ದೆ ಜ್ವಾಲೆ, ಹಲವೆಡೆ ಟ್ರಾಫಿಕ್ ಜಾಮ್

|

Updated on: Dec 19, 2019 | 2:34 PM

ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ದೆಹಲಿ ಸೇರಿದಂತೆ ದೇಶದ ಉತ್ತರ ಭಾಗದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ಜ್ವಾಲೆ ಈಗ ಕರ್ನಾಟಕಕ್ಕೂ ಹಬ್ಬಿದೆ.  ಇದರ ಮುಂಜಾಗೃತ ಕ್ರಮವಾಗಿ ರಾಜ್ಯದ ಹಲವು ಕಡೆ ಪ್ರತಿಭಟನೆ ನಡೆಸದಂತೆ ಸೆಕ್ಷನ್ 144 ಜಾರಿಗೊಳಿಸಲಾಗಿತ್ತು. ಆದರೆ ಇದನ್ನು ಮೀರಿಯೂ ಇಂದು ಹಲವು ಕಡೆ ಪ್ರತಿಭಟನೆಯ ಕಿಚ್ಚು ಹೆಚ್ಚಾಗಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಪೌರತ್ವ ಕಾಯ್ದೆ ವಿರೋಧದ ಕಿಚ್ಚು ಹೊತ್ತಿ ಉರಿಯುತ್ತಿದೆ. ಮಾನವ ಸರಪಳಿಗಳನ್ನು ನಿರ್ಮಿಸಿ ಧರಣಿ ನಡೆಸುತ್ತಿದ್ದಾರೆ. ನಗರದ ನೃಪತುಂಗ […]

ಸಿಲಿಕಾನ್ ಸಿಟಿಯಲ್ಲಿ ಪೌರತ್ವ ಕಾಯ್ದೆ ಜ್ವಾಲೆ, ಹಲವೆಡೆ ಟ್ರಾಫಿಕ್ ಜಾಮ್
Follow us on

ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ದೆಹಲಿ ಸೇರಿದಂತೆ ದೇಶದ ಉತ್ತರ ಭಾಗದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ಜ್ವಾಲೆ ಈಗ ಕರ್ನಾಟಕಕ್ಕೂ ಹಬ್ಬಿದೆ.  ಇದರ ಮುಂಜಾಗೃತ ಕ್ರಮವಾಗಿ ರಾಜ್ಯದ ಹಲವು ಕಡೆ ಪ್ರತಿಭಟನೆ ನಡೆಸದಂತೆ ಸೆಕ್ಷನ್ 144 ಜಾರಿಗೊಳಿಸಲಾಗಿತ್ತು.

ಆದರೆ ಇದನ್ನು ಮೀರಿಯೂ ಇಂದು ಹಲವು ಕಡೆ ಪ್ರತಿಭಟನೆಯ ಕಿಚ್ಚು ಹೆಚ್ಚಾಗಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಪೌರತ್ವ ಕಾಯ್ದೆ ವಿರೋಧದ ಕಿಚ್ಚು ಹೊತ್ತಿ ಉರಿಯುತ್ತಿದೆ. ಮಾನವ ಸರಪಳಿಗಳನ್ನು ನಿರ್ಮಿಸಿ ಧರಣಿ ನಡೆಸುತ್ತಿದ್ದಾರೆ.

ನಗರದ ನೃಪತುಂಗ ರಸ್ತೆ, ಕಾರ್ಪೊರೇಷನ್, ಕಂಠೀರವ ಸ್ಟೇಡಿಯಂ, ಮೈಸೂರು ಬ್ಯಾಂಕ್ ಸರ್ಕಲ್‌, ಟೌನ್ ಹಾಲ್, ಎಸ್​ಪಿ ರೋಡ್, ಕೆ.ಆರ್.ಮಾರುಕಟ್ಟೆ, ಎಂಜಿ ರೋಡ್ ಹಾಗೂ ಮೆಜೆಸ್ಟಿಕ್ ಸೇರಿದಂತೆ ಬಹುತೇಕ ಕಡೆ ಪ್ರತಿಭಟನೆ ಜೋರಾಗಿದ್ದು, ಎಲ್ಲೆಡೆ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದೆ. ಟ್ರಾಫಿಕ್​ನಲ್ಲಿ ಸಿಲುಕಿ ವಾಹನ ಸವಾರರು ಪರದಾಡುತ್ತಿದ್ದಾರೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.