ಅಂತರರಾಜ್ಯ ಹಕ್ಕಿ ಜ್ವರ: ಮೈಸೂರಿನಲ್ಲಿ ಹೈ ಅಲರ್ಟ್, ವಲಸೆ ಹಕ್ಕಿಗಳ ಬಗ್ಗೆ ತೀವ್ರ ನಿಗಾ

ಈಗಾಗಲೇ ಕೆಲವು ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಈ ಕುರಿತು ಕೇಂದ್ರ ಸರ್ಕಾರ ಮಾರ್ಗಸೂಚಿ ನೀಡಿದೆ ಎಂದು ಮೈಸೂರು ಡಿಸಿಎಫ್ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

ಅಂತರರಾಜ್ಯ ಹಕ್ಕಿ ಜ್ವರ: ಮೈಸೂರಿನಲ್ಲಿ ಹೈ ಅಲರ್ಟ್, ವಲಸೆ ಹಕ್ಕಿಗಳ ಬಗ್ಗೆ ತೀವ್ರ ನಿಗಾ
ಸಾಂದರ್ಭಿಕ ಚಿತ್ರ
Edited By:

Updated on: Jan 05, 2021 | 1:44 PM

ಮೈಸೂರು: ಮಹಾರಾಷ್ಟ್ರ ಹಾಗೂ ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಕ್ಕಿ ಜ್ವರ ಕಂಡುಬಂದ ಹಿನ್ನೆಲೆ ವಲಸೆ ಹಕ್ಕಿಗಳ ಬಗ್ಗೆ ತೀವ್ರ ನಿಗಾವಹಿಸಲು ಮೈಸೂರಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಈಗಾಗಲೇ ಕೆಲವು ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಈ ಕುರಿತು ಕೇಂದ್ರ ಸರ್ಕಾರ ಮಾರ್ಗಸೂಚಿ ನೀಡಿದೆ ಎಂದು ಮೈಸೂರು ಡಿಸಿಎಫ್ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ. ರಂಗನತಿಟ್ಟು, ಮೃಗಾಲಯ ಹಾಗೂ ಕೆರೆಗಳಲ್ಲಿ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಸಾರ್ವಜನಿಕ ಪ್ರವೇಶ ನಿರ್ಬಂಧದ ಬಗ್ಗೆ ಚರ್ಚೆ
ರಂಗನತಿಟ್ಟುಗೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಬೇಕಾ ಅಥವಾ ಬೇಡವಾ ಎಂಬುದರ ಬಗ್ಗೆ ಉನ್ನತ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಕ್ರಮ ವಹಿಸಲಾಗುವುದು ಎಂದು ತಿಳಿಸಿದ ಡಿಸಿಎಫ್ ಪ್ರಶಾಂತ್, ಮೈಸೂರಿನಲ್ಲಿ ಈ ಹಿಂದೆ ಎರಡು ಹಕ್ಕಿಗಳ ಮೃತ ಪಟ್ಟಿದ್ದವು. ಅವುಗಳನ್ನು ಲ್ಯಾಬ್​ಗೆ ಕಳುಹಿಸಲಾಗಿತ್ತು.  ವರದಿ  ನೆಗಿಟಿವ್​ ಬಂದಿದೆ. ಹೀಗಾಗಿ ಯಾವುದೇ ಆತಂಕವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜಸ್ಥಾನದಲ್ಲಿ ಹಕ್ಕಿ ಜ್ವರ ಪತ್ತೆ.. ಕೇಂದ್ರ ಸರಕಾರದಿಂದ ಹೈ ಅಲರ್ಟ್ ಘೋಷಣೆ!