CCBಗೆ ಪೊಲೀಸ್ ಠಾಣೆಯ ಸ್ಥಾನಮಾನವಿಲ್ಲ -ಹೈಕೋರ್ಟ್‌ ಏಕಸದಸ್ಯ ಪೀಠ ಆದೇಶ

CCBಗೆ ಪೊಲೀಸ್ ಠಾಣೆಯ ಸ್ಥಾನಮಾನವಿಲ್ಲ ಎಂದು ಹೈಕೋರ್ಟ್‌ ಏಕಸದಸ್ಯ ಪೀಠ ಆದೇಶ ನೀಡಿದೆ. ಜೊತೆಗೆ, CCB ಚಾರ್ಜ್‌ಶೀಟ್‌ ಆಧರಿಸಿದ್ದ ವಿಚಾರಣೆಯನ್ನು ಸಹ ಕೋರ್ಟ್​ ರದ್ದುಪಡಿಸಿದೆ.

CCBಗೆ ಪೊಲೀಸ್ ಠಾಣೆಯ ಸ್ಥಾನಮಾನವಿಲ್ಲ -ಹೈಕೋರ್ಟ್‌ ಏಕಸದಸ್ಯ ಪೀಠ ಆದೇಶ
CCB ಕಚೇರಿ

Updated on: Jan 22, 2021 | 7:54 PM

ಬೆಂಗಳೂರು: CCBಗೆ ಪೊಲೀಸ್ ಠಾಣೆಯ ಸ್ಥಾನಮಾನವಿಲ್ಲ ಎಂದು ಹೈಕೋರ್ಟ್‌ ಏಕಸದಸ್ಯ ಪೀಠ ಆದೇಶ ನೀಡಿದೆ. ಜೊತೆಗೆ, CCB ಚಾರ್ಜ್‌ಶೀಟ್‌ ಆಧರಿಸಿದ್ದ ವಿಚಾರಣೆಯನ್ನು ಸಹ ಕೋರ್ಟ್​ ರದ್ದುಪಡಿಸಿದೆ.

ಏನಿದು ಪ್ರಕರಣ?
MBBS ಪ್ರವೇಶಕ್ಕೆ ಡೊನೇಷನ್ ಸಂಗ್ರಹ ಆರೋಪದಡಿ K.R.ಚೌಧರಿ ಎಂಬುವವರ ದೂರು ಆಧರಿಸಿ ಚಾರ್ಜ್‌ಶೀಟ್‌ ದಾಖಲಾಗಿತ್ತು. CCB ಪೊಲೀಸರು ಒಕ್ಕಲಿಗರ ಸಂಘದ ಡಾ.ಎಂ.ಜಿ.ಗೋಪಾಲ್, ಡಾ.ಅಪ್ಪಾಜಿ ಗೌಡ ಮತ್ತು ಡಾ.ನಿಸರ್ಗ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ್ದರು.

ಇದೀಗ, ನ್ಯಾ.ಬಿ.ಎ.ಪಾಟೀಲ್‌ರವರಿದ್ದ ಏಕಸದಸ್ಯ ಪೀಠ ಆದೇಶ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕರ ಪ್ರಕರಣ ರದ್ದುಪಡಿಸಿದೆ. ಡಾ.ಎಂ.ಜಿ.ಗೋಪಾಲ್, ಡಾ.ಅಪ್ಪಾಜಿ ಗೌಡ ಮತ್ತು ಡಾ.ನಿಸರ್ಗ ವಿರುದ್ಧದ‌ ಕೇಸ್​ನ ಹೈಕೋರ್ಟ್‌ ರದ್ದುಗೊಳಿಸಿದೆ.

ಮುತ್ತೂಟ್ ಫೈನಾನ್ಸ್ ದರೋಡೆ ಪ್ರಕರಣ: ದರೋಡೆಕೋರರು ಹೊತ್ತೊಯ್ದ ಚಿನ್ನಾಭರಣದ ಬಾಕ್ಸ್​​ಗಳು ಪತ್ತೆ