Facebook Live| ಲಸಿಕೆ ವಿತರಣೆಯಾಗುತ್ತಿದ್ದರೂ ಜನರಲ್ಲಿ ಉತ್ಸಾಹ ಕಡಿಮೆ ಇದೆ : ಸಾರ್ವಜನಿಕರ ಹಿಂಜರಿಕೆಗೆ ಕಾರಣ ಏನು?
ಮೂರನೆ ಹಂತದ ಪರೀಕ್ಷೆಯಲ್ಲಿ 70ರಷ್ಟು ಈ ಲಸಿಕೆ ಸುರಕ್ಷಿತವಾಗಿದ್ದು, ಖ್ಯಾತ ವಿಜ್ಞಾನಿಗಳು ಇದನ್ನು ತಯಾರಿಸಿದ್ದು ಯಾವುದೇ ಭಯವಿಲ್ಲದೇ ಕೊರೊನಾ ಮಹಾಮಾರಿ ಓಡಿಸುವ ಲಸಿಕೆಯನ್ನು ತೆಗೆದುಕೊಳ್ಳಬಹುದು.
ಕೊರೊನಾಗೆ ವಿರುದ್ಧದ ಲಸಿಕೆ ಬರುತ್ತಿದೆ ಎನ್ನುವ ವಿಚಾರಗಳು ತಿಂಗಾಳಾನುಗಟ್ಟಲೆಯಿಂದ ಕೇಳಿಬಂದಿದ್ದು, ಸದ್ಯ ಒಂದು ವಾರದ ಹಿಂದೆಯಷ್ಟೇ ಭಾರತೀಯ ಸಂಶೋಧಕರ ಶ್ರಮದ ಫಲವಾಗಿ ಲಸಿಕೆ ಕೂಡ ಬಂತು. ಆದರೆ ಲಸಿಕೆ ಬಂದ ದಿನದಲ್ಲಿ ಇದ್ದ ಸಂಭ್ರಮ ಈಗ ಇಲ್ಲ. ಮೊದಲ ಹಂತದಲ್ಲಿ ಲಸಿಕೆಯನ್ನು ಆರೋಗ್ಯ ಕಾರ್ಯಕರ್ತರು ಪಡೆಯಬೇಕು ಎಂಬ ನಿರ್ಣಯಕ್ಕೆ ಯಾಕೋ ಜನರು ಹಿಂದೇಟು ಹಾಕುತ್ತಿದ್ದಾರೆ. ಹಾಗಾದರೆ ಜನರು ಲಸಿಕೆ ಪಡೆಯಲು ಉತ್ಸಾಹ ತೋರದಿರುವುದಕ್ಕೆ ಅಸಲಿ ಕಾರಣ ಏನು ಎಂಬುವುದರ ಬಗ್ಗೆ ಅರಿತುಕೊಳ್ಳುವುದು ಮುಖ್ಯ ಎನಿಸಿಕೊಳ್ಳುತ್ತದೆ.
ಸಂವಾದದಲ್ಲಿ ತಜ್ಞರಾದ ಡಾ. ಚೇತನ್ ಮತ್ತು ಡಾ. ಸುನೀಲ್ ಮತ್ತು ಚಾಮರಾಜ ಕ್ಷೇತ್ರದ MLA ನಾಗೇಂದ್ರ ಭಾಗವಹಿಸಿದ್ದರು. ಆ್ಯಂಕರ್ ಸೌಮ್ಯಾ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.
ಕೊರೊನಾ ವಿರುದ್ಧದ ಲಸಿಕೆಯ ಬಗ್ಗೆ ನಾವು ಹೆಚ್ಚು ಕುತೂಹಲದಲ್ಲಿ ಇದ್ದೇವು. ಸಾಕಷ್ಟು ಆರೋಗ್ಯ ಕಾರ್ಯಕರ್ತರು ಮೊದಲ ಹಂತದಲ್ಲಿ ಲಸಿಕೆ ಪಡೆಯಲು ಬಂದಿದ್ದರು. ಲಸಿಕೆ ಅಡ್ಡ ಪರಿಣಾಮದಿಂದಾಗಿ ಜನರು ಬರುತ್ತಿಲ್ಲ ಎನ್ನುವುದು ತಪ್ಪಾಗುತ್ತದೆ. ಆರೋಗ್ಯ ಕಾರ್ಯಕರ್ತರು ಎಲ್ಲರೂ ಲಸಿಕೆ ಪಡೆದು ದೇಶದ ಜನರಿಗೆ ಮಾದರಿ ಆಗಬೇಕು ಲಸಿಕೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಚಾಮರಾಜ ಕ್ಷೇತ್ರದ MLA ನಾಗೇಂದ್ರ ಮನವಿ ಮಾಡಿದ್ದಾರೆ.
ಎರಡನೇ ಹಂತದಲ್ಲಿ ಚುನಾಯಿತ ಪ್ರತಿನಿಧಿಗಳು, ಮಂತ್ರಿಗಳು, ಪ್ರಧಾನಿಗಳು ಲಸಿಕೆ ಪಡೆಯಿರಿ ಎಂದು ಸರ್ಕಾರ ಆಜ್ಞೆ ಮಾಡಿದರೆ ನಾನೆ ಇವತ್ತು ಹೋಗಿ ಚುಚ್ಚುಮದ್ದು ಸ್ವೀಕರಿಸುತ್ತೇನೆ. ಎಲ್ಲಾ ಲಸಿಕೆ ಕೇಂದ್ರಗಳಲ್ಲೂ ಮುನ್ನೇಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಇಂತಹ ಕೊರೊನಾ ಮಹಾಮಾರಿಗೆ ಸರ್ಕಾರ ಲಸಿಕೆ ಕಂಡುಹಿಡಿದಿದೆ. ಈ ನಿಟ್ಟಿನಲ್ಲಿ ಜನರು ಲಸಿಕೆ ಸ್ವೀಕರಿಸಿ, ಸಾವು ನೋವುಗಳನ್ನು ಕಡಿಮೆ ಮಾಡಿಕೊಳ್ಳಿ ಎಂದು ಚಾಮರಾಜ ಕ್ಷೇತ್ರದ MLA ನಾಗೇಂದ್ರ ಸಲಹೆ ನೀಡಿದ್ದಾರೆ.
ಲಸಿಕೆ ವಿತರಕರೇ ಒಂದಷ್ಟು ಎಚ್ಚರಿಕೆ ನೀಡಿದ್ದಾರೆ ಅಂದರೆ ಅಲರ್ಜಿ ಸಮಸ್ಯೆ ಇರುವವರು, ಗರ್ಭಿಣಿಯರು ಲಸಿಕೆ ತೆಗೆದುಕೊಳ್ಳಬಾರದು ಎಂದು ಈ ನಿಟ್ಟಿನಲ್ಲಿ ಸ್ವಲ್ಪಮಟ್ಟಿಗೆ ಭಯ ಸೃಷ್ಟಿಯಾಗಿದೆ. ಲಸಿಕೆ ಯಾರಿಗೆ ಬೇಕು ಮತ್ತು ಏಕೆ ಬೇಕು ಈ ಬಗ್ಗೆ ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. 50ವರ್ಷ ಮೇಲ್ಪಟ್ಟವರಿಗೆ ಲಸಿಕೆ ಬೇಕು ಎಂದಾದರೆ ಇದು ಎಷ್ಟರಮಟ್ಟಿಗೆ ಸಹಕಾರಿ ಇದನ್ನು ಅರಿಯುವುದು ಅಗತ್ಯ. 100 ಜನಕ್ಕೆ ಲಸಿಕೆ ಕೊಟ್ಟರೆ 70ಜನರಿಗೆ ಗುಣವಾಗುತ್ತದೆ ಎಂದು ಲಸಿಕೆ ತಯಾರಕರೇ ಹೇಳಿದ್ದಾರೆ. ಹಾಗಿದ್ದರೆ ವಯಸ್ಸಾದವರು ಲಸಿಕೆ ತೆಗೆದುಕೊಳ್ಳುವುದರಿಂದ ಸಾವಿನ ಸಂಖ್ಯೆ ಕಡಿಮೆಯಾಗುತ್ತಿದ್ದೇಯೇ ಎನ್ನುವುದನ್ನು ನಾವು ನೋಡಬೇಕಿದೆ ಎಂದು ಶ್ವಾಸಕೊಶ ತಜ್ಞ ಡಾ. ಚೇತನ್ ಹೇಳಿದ್ದಾರೆ.
ಅಡ್ಡ ಪರಿಣಾಮಗಳ ಬಗ್ಗೆ ಗಮನ ಹರಿಸುವುದು ಮುಖ್ಯ ಈಗಾಗಲೇ ತಲೆ ಸುತ್ತು, ಜ್ವರ ಮೈ ಕೈ ನೋವು ಬಂದವರು ಇದ್ದಾರೆ. ಯಾರಿಗೆ ಆಸ್ಪತ್ರೆಯ ಚಿಕಿತ್ಸೆಯ ಅನಿವಾರ್ಯತೆಯ ಅವಶ್ಯಕತೆ ಬೀಳತ್ತೆ ಅವರಿಗೆ ಈ ರೀತಿಯ ಸಮಸ್ಯೆಯಾಗಿದೆ. ಈ ಲಸಿಕೆ ಈಗ ಬೇಕಿತ್ತಾ ಎನ್ನುವ ಪ್ರಶ್ನೆ ವೈಯಕ್ತಿವಾಗಿ ನನಗೆ ಇದೆ, ನೈಸರ್ಗಿಕ ರೋಧನಿರೋಧಕ ಶಕ್ತಿ ಇರುವಾಗ ಈಗ ಈ ಲಸಿಕೆ ಅನಿವಾರ್ಯತೆ ಬಗ್ಗೆ ಯೋಚಿಸಬೇಕು ಆದರೆ ಅದನ್ನು ಹೊರತುಪಡಿಸಿ ನಾನು ಕೂಡ ಲಸಿಕೆ ತೆಗೆದುಕೊಂಡಿದ್ದೇನೆ ಮತ್ತು ಇತರರಿಗೆ ನೀಡಿದ್ದೇನೆ. ಇನ್ನೂ ಸ್ವಲ್ಪ ಜನರಲ್ಲಿ ಹಿಂಜರಿಕೆ ಇದೆ. ಅದು ದೂರವಾಗಬೇಕು ಎಂದು ಶ್ವಾಸಕೊಶ ತಜ್ಞ ಡಾ. ಚೇತನ್ ಅಭಿಪ್ರಾಯಪಟ್ಟಿದ್ದಾರೆ.
ಲಸಿಕೆ ತೆಗೆದುಕೊಂಡು ನನಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಇನ್ನೂ ಅನೇಕ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಿದ್ದೇವೆ. ಯಾರಿಗೂ ಅಂತಹ ಅಡ್ಡ ಪರಿಣಾಮಗಳಾಗಿಲ್ಲ. ಕೆಲವರಿಗೆ ಸುಸ್ತು ಈ ರೀತಿ ಸಮಸ್ಯೆ ಇದೆ. ನಮ್ಮ ಆಸ್ಪತ್ರೆಯಲ್ಲಿ ಕೇವಲ ಶೇಕಡ2ರಷ್ಟು ಜನರಿಗೆ ಮಾತ್ರ ಈ ರೀತಿಯ ಸಣ್ಣ ಪುಟ್ಟ ಅಡ್ಡ ಪರಿಣಾಮಗಳು ಇದೆ ಎಂದು ಸಾಂಕ್ರಾಮಿಕ ರೋಗ ತಜ್ಞ ಡಾ. ಸುನೀಲ್ ಹೇಳಿದರು.
ಸುರಕ್ಷಿತತೆಯ ವಿಷಯಕ್ಕೆ ಬಂದಾಗ ನಂಬಬಹುದು. ಸುರಕ್ಷಿತವಲ್ಲ ಎಂದು ಹೇಳಲು ಸಾಧ್ಯವಿಲ್ಲ ಕಾರಣ ಯಾವುದೇ ಲಸಿಕೆ ಸುರಕ್ಷಿತವಲ್ಲ ಎಂದರೆ ಮೂರನೆ ಹಂತದ ಪರೀಕ್ಷೆಗೆ ಬರುವುದಿಲ್ಲ. ಮೂರನೆ ಹಂತದ ಪರೀಕ್ಷೆಯಲ್ಲಿ 70ರಷ್ಟು ಇದು ಸುರಕ್ಷಿತವಾಗಿದೆ ಎಂದು ಸಾಭಿತಾಗಿದೆ. ಖ್ಯಾತ ವಿಜ್ಞಾನಿಗಳು ಇದನ್ನು ತಯಾರಿಸಿದ್ದು ಯಾವುದೇ ಭಯವಿಲ್ಲದೇ ತೆಗೆದುಕೊಳ್ಳಬಹುದು. ಸರ್ಕಾರ ಈ ಬಗ್ಗೆ ಇನ್ನೂ ಹೆಚ್ಚಿನ ಮಾರ್ಗಸೂಚಿಗಳನ್ನು ಅನುಸರಿಸಬೇಕು. 40 ರಷ್ಟು ಲಸಿಕೆಯನ್ನು ಭಾರತದಿಂದಲೇ ಈಡಿ ದೇಶಕ್ಕೆ ರವಾನಿಸಲಾಗುತ್ತಿದ್ದೇ ಆದರೆ ನಮ್ಮ ದೇಶದ ಜನರಲ್ಲಿ ಏಕೆ ಈ ರೀತಿ ಭಯ ಹುಟ್ಟಿಕೊಂಡಿದೆ. ವಿಶ್ವದಾದ್ಯಂತ ಜನರು ಈ ಬಗ್ಗೆ ಗಮನಹರಿಸಬೇಕು ಎಂದು ಸಾಂಕ್ರಾಮಿಕ ರೋಗ ತಜ್ಞ ಡಾ. ಸುನೀಲ್ ತಿಳಿಸಿದ್ದಾರೆ.
ಒಟ್ಟಾರೆ ಇನ್ನಾದರೂ ಜನರು ಹೆಚ್ಚು ಉತ್ಸಾಹಿತರಾಗಿ ಲಸಿಕೆಯನ್ನು ತೆಗೆದುಕೊಳ್ಳಬೇಕು. ಎರಡನೇ ಹಂತದಲ್ಲಿ ಜನಪ್ರತಿನಿಧಿಗಳಿಗೆ ನೀಡುವುದರಿಂದ ಜನರಲ್ಲಿ ಮುಂದಿನ ದಿನಗಳಲ್ಲಿ ವಿಶ್ವಾಸ ಬರುತ್ತದೆಯೇ ಎಂದು ಕಾದು ನೋಡಬೇಕಿದೆ.
TV9 Facebook Live | ಕೊರೊನಾ ಲಸಿಕೆಯ ಊಹಾಪೋಹಗಳ ಬಗ್ಗೆ ವೈದ್ಯರ ವಿವರಣೆ